For Quick Alerts
  ALLOW NOTIFICATIONS  
  For Daily Alerts

  ಸ್ನೇಹಿತನ ಜೊತೆ ಹೊಸ ಜೀವನ ಆರಂಭಿಸಿದ 'ಹಾಟ್‌ಬಾಂಬ್' ಪೂನಂ ಪಾಂಡೆ

  |

  ಬಾಲಿವುಡ್ ಇಂಡಸ್ಟ್ರಿಯ ಹಾಟ್‌ಬಾಂಬ್, ಪಡ್ಡೆ ಹುಡುಗ್ರ ನೆಚ್ಚಿನ ನಟಿ-ಮಾಡೆಲ್ ಪೂನಂ ಪಾಂಡೆ ಕುರಿತು ಸರ್ಪ್ರೈಸ್ ಸುದ್ದಿ ಹೊರಬಿದ್ದಿದೆ. ಡ್ರಗ್ಸ್ ವಿವಾದ, ಕೊರೊನಾ ವೈರಸ್ ಎಂದು ಚರ್ಚಿಸುತ್ತಿರುವ ಈ ಸಮಯದಲ್ಲಿ ಸದ್ದಿಲ್ಲದೇ ಪೂನಂ ಪಾಂಡೆ ಮದುವೆ ಆಗಿಬಿಟ್ಟಿದ್ದಾರೆ.. ಸ್ನೇಹಿತನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಪೂನಂ ಪಾಂಡೆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  ಹಾಟ್‌ ಫೋಟೋ ಹಾಗೂ ವಿಡಿಯೋಗಳ ಮೂಲಕ ಯುವ ಜನತೆಯ ನಿದ್ದೆ ಕೆಡಿಸುತ್ತಿದ್ದ ಪೂನಂ ಪಾಂಡೆ ಸೋಶಿಯಲ್ ಮೀಡಿಯಾದ ಸುದ್ದಿ ಬಾಂಬ್ ಆಗಿದ್ದರು. ಆದ್ರೆ, ಪೂನಂ ಮದುವೆ ಸುದ್ದಿ ಈಗ ಎಲ್ಲರಿಗೂ ಶಾಕ್ ಆಗಿದೆ.

  ಲಾಕ್ ಡೌನ್ ನಿಯಮ ಉಲ್ಲಂಘನೆ, ಬಂಧನ: ನಟಿ ಪೂನಂ ಪಾಂಡೆ ಹೇಳಿದ್ದೇನು?ಲಾಕ್ ಡೌನ್ ನಿಯಮ ಉಲ್ಲಂಘನೆ, ಬಂಧನ: ನಟಿ ಪೂನಂ ಪಾಂಡೆ ಹೇಳಿದ್ದೇನು?

  ನಿರ್ದೇಶಕನ ಜೊತೆ ಪೂನಂ ವಿವಾಹ

  ನಿರ್ದೇಶಕನ ಜೊತೆ ಪೂನಂ ವಿವಾಹ

  ಸ್ನೇಹಿತ ಹಾಗೂ ಚಲನಚಿತ್ರ ನಿರ್ದೇಶಕ ಸ್ಯಾಮ್ ಅಹ್ಮದ್ ಬಾಂಬೆ ಜೊತೆ ನಟಿ-ರೂಪತಾರೆ ಪೂನಂ ಪಾಂಡೆ ಸೆಪ್ಟೆಂಬರ್ 10 ರಂದು ವಿವಾಹವಾಗಿದ್ದಾರೆ. ಇಬ್ಬರು ಸಹ ತಮ್ಮ ಮದುವೆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಡಿಸಿದ್ದಾರೆ.

  ನಿನ್ನ ಜೊತೆ ಏಳು ಜನ್ಮ ಎದುರು ನೋಡುತ್ತಿದ್ದೇನೆ

  ನಿನ್ನ ಜೊತೆ ಏಳು ಜನ್ಮ ಎದುರು ನೋಡುತ್ತಿದ್ದೇನೆ

  ಸ್ಯಾಮ್ ಅಹ್ಮದ್ ಬಾಂಬೆ ಜೊತೆಗಿನ ಫೋಟೋ ಹಂಚಿಕೊಂಡಿರುವ ಪೂನಂ ಪಾಡೆ ''ನಿನ್ನ ಜೊತೆಗೆ ನಾನು ಏಳು ಜನ್ಮವನ್ನು ಎದುರು ನೋಡುತ್ತಿದ್ದೇನೆ'' ಎಂದು ಬರೆದುಕೊಂಡಿದ್ದಾರೆ. ನೀಲಿ ಬಣ್ಣದ ಲೆಹೆಂಗಾದಲ್ಲಿ ಪೂನಂ ಮಿಂಚಿದ್ದರೆ, ಅದೇ ವಿನ್ಯಾಸದ ಶೆರ್ವಾನಿಯಲ್ಲಿ ಸ್ಯಾಮ್ ಪೋಸ್ ನೀಡಿದ್ದಾರೆ.

  ಹಾಟ್ ನಟಿ ಪೂನಂ ಪಾಂಡೆ ನಿಶ್ಚಿತಾರ್ಥ: ಹುಡುಗ ಇವರೇ ನೋಡಿಹಾಟ್ ನಟಿ ಪೂನಂ ಪಾಂಡೆ ನಿಶ್ಚಿತಾರ್ಥ: ಹುಡುಗ ಇವರೇ ನೋಡಿ

  ಎರಡು ತಿಂಗಳ ಹಿಂದೆ ನಿಶ್ಚಿತಾರ್ಥ

  ಎರಡು ತಿಂಗಳ ಹಿಂದೆ ನಿಶ್ಚಿತಾರ್ಥ

  ಪೂನಂ ಪಾಂಡೆ ಮತ್ತು ಸ್ಯಾಮ್ ಅಹ್ಮದ್ ಬಾಂಬೆ ಹಲವು ವರ್ಷದಿಂದ ಗೆಳೆಯರು. ಸ್ನೇಹ ಈಗ ಪ್ರೀತಿಯಾಗಿ ದಾಂಪತ್ಯ ಬಯಸಿದೆ. ಎರಡು ತಿಂಗಳ ಹಿಂದೆ ಪೂನಂ ಮತ್ತು ಸ್ಯಾಮ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ಬರಿ ಫೋಟೋಗಳನ್ನು ಮಾತ್ರ ಪೋಸ್ಟ್ ಮಾಡಿದ್ದ ಜೋಡಿ ಮದುವೆ ಬಗ್ಗೆ ಮಾತನಾಡಿರಲಿಲ್ಲ.

  Sanjjana ಗೊಳಾಟಕ್ಕೆ full stop | Filmibeat Kannada
  ಲಾಕ್‌ಡೌನ್ ಉಲ್ಲಂಘನೆ ಕೇಸ್ ದಾಖಲಾಗಿತ್ತು

  ಲಾಕ್‌ಡೌನ್ ಉಲ್ಲಂಘನೆ ಕೇಸ್ ದಾಖಲಾಗಿತ್ತು

  ಮೇ ತಿಂಗಳಲ್ಲಿ ಮೆರೈನ್ ಡ್ರೈವ್ ಪೊಲೀಸರು ಲಾಕ್ಡೌನ್ ಉಲ್ಲಂಘನೆಗಾಗಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಲಾಕ್‌ಡೌನ್ ವೇಳೆ ಬಿಎಂಡಬ್ಲ್ಯು ಕಾರಿನಲ್ಲಿ ಸುತ್ತುತ್ತಿದ್ದರು. ಹಾಗಾಗಿ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 ಮತ್ತು 269 ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು. ನೋಟಿಸ್ ನೀಡಿದ ನಂತರ ಬಿಡುಗಡೆ ಮಾಡಲಾಗಿತ್ತು.

  English summary
  Actress-model Poonam Pandey Marries Boyfriend Sam Bombay in Mumbai. chect out pic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X