For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ಬಿಡುಗಡೆ ದಿನಾಂಕ ಬಹಿರಂಗ

  |

  ಬಾಹುಬಲಿ ಚಿತ್ರದ ನಂತರ ಭಾರತೀಯ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿರುವ ಚಿತ್ರ ಆದಿಪುರುಷ್. ರಾಮಾಯಣ ಆಧಾರಿತ ಈ ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನ ಪಾತ್ರದಲ್ಲಿ ನಟಿಸಲಿದ್ದಾರೆ. ಜೊತೆಗೆ ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಓಂ ರಾವತ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು. ಭೂಷಣ್ ಕುಮಾರ್, ಕೃಷ್ಣಕುಮಾರ್ ಹಾಗೂ ನಿರ್ದೇಶಕ ಓಂ ರಾವತ್ ಜಂಟಿ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಸೀತೆ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ ಎಂಬ ಕುತೂಹಲ ದೊಡ್ಡ ಮಟ್ಟದಲ್ಲಿ ಚರ್ಚೆಯಾಗ್ತಿದೆ. ಸೀತೆ ಪಾತ್ರಕ್ಕೆ ಸ್ಟಾರ್ ನಟಿಯರ ಹೆಸರು ಕೇಳಿ ಬರುತ್ತಿದೆಯಾದರೂ ಇನ್ನು ಯಾರು ಅಂತ ಪಕ್ಕಾ ಆಗಿಲ್ಲ. ಈ ಮಧ್ಯೆ ಚಿತ್ರತಂಡ ರಿಲೀಸ್ ದಿನಾಂಕವನ್ನೇ ಅಧಿಕೃತವಾಗಿ ಘೋಷಿಸಿದೆ. ಮುಂದೆ ಓದಿ....

  ಆಗಸ್ಟ್ 22ಕ್ಕೆ ರಿಲೀಸ್

  ಆಗಸ್ಟ್ 22ಕ್ಕೆ ರಿಲೀಸ್

  ಪೌರಾಣಿಕ ಚಿತ್ರ ಆದಿಪುರುಷ್ ಸಿನಿಮಾ ಇನ್ನು ಆರಂಭವೇ ಆಗಿಲ್ಲ. ಅಷ್ಟರಲ್ಲೇ ಚಿತ್ರತಂ ಬಿಡುಗಡೆ ದಿನಾಂಕ ಘೋಷಿಸಿದೆ. 2022ರ ಆಗಸ್ಟ್ 11 ರಂದು ಈ ಸಿನಿಮಾ ತೆರೆಗೆ ಬರಲಿದೆ. 3ಡಿ ವರ್ಷನ್‌ನಲ್ಲಿ ಈ ಸಿನಿಮಾ ತಯಾರಾಗುತ್ತಿರುವುದು ಮತ್ತಷ್ಟು ವಿಶೇಷವಾಗಿದೆ.

  ಪ್ರಭಾಸ್21, ಆದಿಪುರುಷ್ ಯಾವುದಾಗಲಿದೆ ಪ್ರಭಾಸ್ ಮುಂದಿನ ಸಿನಿಮಾ?ಪ್ರಭಾಸ್21, ಆದಿಪುರುಷ್ ಯಾವುದಾಗಲಿದೆ ಪ್ರಭಾಸ್ ಮುಂದಿನ ಸಿನಿಮಾ?

  ಚಿತ್ರೀಕರಣ ಯಾವಾಗ ಆರಂಭ

  ಚಿತ್ರೀಕರಣ ಯಾವಾಗ ಆರಂಭ

  ಸದ್ಯ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಿರುವ ಆದಿಪುರುಷ್ ಚಿತ್ರೀಕರಣ ಮುಂದಿನ ವರ್ಷ ಅಂದ್ರೆ 2021ರ ಜನವರಿಯಲ್ಲಿ ಆರಂಭವಾಗಲಿದೆ. ಇದು ಪ್ರಭಾಸ್ ನಟನೆಯ 22ನೇ ಸಿನಿಮಾ ಆಗಿದೆ.

  500 ಕೋಟಿ ಬಜೆಟ್!

  500 ಕೋಟಿ ಬಜೆಟ್!

  ಆದಿಪುರುಷ್ ಸಿನಿಮಾ ಒಂದೇ ಭಾಗದಲ್ಲಿ ಬಿಡುಗಡೆಯಾಗುತ್ತಾ ಅಥವಾ ಎರಡು ಭಾಗನಾ ಎಂಬುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಆದ್ರೆ, ಸುಮಾರು 500 ಕೋಟಿ ಬಜೆಟ್‌ನಲ್ಲಿ ಈ ಸಿನಿಮಾ ಸಿದ್ಧವಾಗಲಿದೆ ಎನ್ನಲಾಗಿದೆ. ಗ್ರಾಫಿಕ್ಸ್ ಮತ್ತು ವಿಎಫ್‌ಎಕ್ಸ್ ಕೆಲಸ ಹೆಚ್ಚಿರಲಿದ್ದು, ಅರ್ಧದಷ್ಟು ಬಜೆಟ್ ಇದಕ್ಕೆ ಸೀಮಿತವಾಗಲಿದೆಯಂತೆ.

  ಅಬ್ಬಾ.! ಪ್ರಭಾಸ್ 'ರಾಧೆ ಶ್ಯಾಮ್' ಚಿತ್ರದ ಕ್ಲೈಮ್ಯಾಕ್ಸ್ ಗೆ ಇಷ್ಟೊಂದು ಕೋಟಿ ಖರ್ಚು ಮಾಡುತ್ತಿದ್ದಾರಾ?ಅಬ್ಬಾ.! ಪ್ರಭಾಸ್ 'ರಾಧೆ ಶ್ಯಾಮ್' ಚಿತ್ರದ ಕ್ಲೈಮ್ಯಾಕ್ಸ್ ಗೆ ಇಷ್ಟೊಂದು ಕೋಟಿ ಖರ್ಚು ಮಾಡುತ್ತಿದ್ದಾರಾ?

  ಇದು ನಿಜವಾಗ್ಲೂ ಸತ್ಯನಾ ಅನ್ನೋ ಪ್ರಶ್ನೆ ಕಾಡ್ತಿದೆ | Filmibeat Kannada
  ರಾಧೇ ಶ್ಯಾಮ್ ಸಿನಿಮಾ!

  ರಾಧೇ ಶ್ಯಾಮ್ ಸಿನಿಮಾ!

  ಪ್ರಭಾಸ್ ಮತ್ತು ಪೂಜಾ ಹೆಗಡೆ ನಟಿಸಿರುವ ರಾಧೇ ಶ್ಯಾಮ್ ಸಿನಿಮಾ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಬಳಿಕ ನಾಗ್ ಅಶ್ವಿನ್ ನಿರ್ದೇಶನದಲ್ಲಿ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದು, ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಸಹ ನಟಿಸಿಲಿದ್ದಾರೆ.

  English summary
  Prabhas and Saif ali khan starrer Adipurush [3D] release date finalized. (11 Aug 2022) Directed by Om Raut.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X