For Quick Alerts
  ALLOW NOTIFICATIONS  
  For Daily Alerts

  ವರ್ಷಾಂತ್ಯದಲ್ಲಿ ನಡೆಯಲಿದೆ ಪ್ರಿನ್ಸ್-ಯುವಿಕಾ ಚೌಧರಿ ಮದುವೆ.!

  By Harshitha
  |

  ಯುವಿಕಾ ಚೌಧರಿ ಯಾರು ಅಂತ ಗೊತ್ತಲ್ವಾ.? ತಲೆಗೆ ಹುಳ ಬಿಟ್ಟುಕೊಳ್ಳುವ ಮುನ್ನ ಮೊದಲು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮಳೆಯಲಿ ಜೊತೆಯಲಿ' ಚಿತ್ರವನ್ನ ನೆನಪಿಸಿಕೊಳ್ಳಿ...

  ''ನೀ ಸನಿಹಕೆ ಬಂದರೆ ಹೃದಯದ ಗತಿ ಏನು...' ಅಂತ ಗಣೇಶ್ ಕನವರಿಸುವ ಹಾಡಲ್ಲಿ ಇರುವ ಚೆಲುವೆಯೇ ಯುವಿಕಾ ಚೌಧರಿ. ಕನ್ನಡದಲ್ಲಿ 'ಮಳೆಯಲಿ ಜೊತೆಯಲಿ' ಸಿನಿಮಾದಲ್ಲಿ ಅಭಿನಯಿಸಿದ್ದ ಯುವಿಕಾ ಚೌಧರಿ ಹಿಂದಿ ಹಾಗೂ ಪಂಚಾಬಿ ಸಿನಿಮಾಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ.

  ಇಂತಿಪ್ಪ ಯುವಿಕಾ ಚೌಧರಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುವ ಸಮಯ ಹತ್ತಿರ ಬಂದಿದೆ. ರಿಯಾಲಿಟಿ ಶೋಗಳ ಸರದಾರ ಪ್ರಿನ್ಸ್ ನರುಲಾ ಜೊತೆಗೆ ಇದೇ ವರ್ಷಾಂತ್ಯಕ್ಕೆ ನಟಿ ಯುವಿಕಾ ಚೌಧರಿ ಮದುವೆ ಆಗಲಿದ್ದಾರೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ.. ಓದಿರಿ...

  ಪ್ರಿನ್ಸ್ - ಯುವಿಕಾ ಲವ್ ಸ್ಟೋರಿ

  ಪ್ರಿನ್ಸ್ - ಯುವಿಕಾ ಲವ್ ಸ್ಟೋರಿ

  'ಬಿಗ್ ಬಾಸ್-9' ಕಾರ್ಯಕ್ರಮದಲ್ಲಿ ಯುವಿಕಾ ಚೌಧರಿ ಹಾಗೂ ಪ್ರಿನ್ಸ್ ನರುಲಾ ಭೇಟಿ ಆಗಿದ್ದರು. ಇದೇ ಶೋನಲ್ಲಿ ಇಬ್ಬರೂ ಆತ್ಮೀಯರಾದರು. 'ಬಿಗ್ ಬಾಸ್-9' ಶೋ ಗೆಲ್ಲುವುದರ ಜೊತೆಗೆ ಯುವಿಕಾ ಹೃದಯವನ್ನೂ ಗೆದ್ದು ಬಿಟ್ಟರು ಪ್ರಿನ್ಸ್ ನರುಲಾ.

  ಪ್ರೇಯಸಿ ಹೆಸರನ್ನ ಹಚ್ಚೆ ಹಾಕಿಸಿಕೊಂಡ 'ಬಿಗ್ ಬಾಸ್' ವಿಜೇತ ಪ್ರಿನ್ಸ್.!ಪ್ರೇಯಸಿ ಹೆಸರನ್ನ ಹಚ್ಚೆ ಹಾಕಿಸಿಕೊಂಡ 'ಬಿಗ್ ಬಾಸ್' ವಿಜೇತ ಪ್ರಿನ್ಸ್.!

  ಪ್ರಿನ್ಸ್ ಕುತ್ತಿಗೆ ಮೇಲೆ ಯುವಿಕಾ ಹಚ್ಚೆ

  ಪ್ರಿನ್ಸ್ ಕುತ್ತಿಗೆ ಮೇಲೆ ಯುವಿಕಾ ಹಚ್ಚೆ

  ಯುವಿಕಾ ಮೇಲೆ ಪ್ರಿನ್ಸ್ ಗೆ ಬೆಟ್ಟದಷ್ಟು ಪ್ರೀತಿ. ಯುವಿಕಾ ಹೆಸರನ್ನ ಕುತ್ತಿಗೆ ಮೇಲೆ ಹಿಂದಿಯಲ್ಲಿ ಪ್ರಿನ್ಸ್ ನರುಲಾ ಹಚ್ಚೆ ಹಾಕಿಸಿಕೊಂಡಿದ್ದಾರೆ.

  ವರ್ಷಾಂತ್ಯದಲ್ಲಿ ಮದುವೆ

  ವರ್ಷಾಂತ್ಯದಲ್ಲಿ ಮದುವೆ

  ಇದೇ ವರ್ಷಾಂತ್ಯದಲ್ಲಿ ಪ್ರಿನ್ಸ್-ಯುವಿಕಾ ಮದುವೆ ನಡೆಯುವುದು ಪಕ್ಕಾ. ಹಾಗಂತ ಸ್ವತಃ ಪ್ರಿನ್ಸ್ ಬಾಯ್ಬಿಟ್ಟಿದ್ದಾರೆ. ''ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ನಮ್ಮ ಮದುವೆ ನಡೆಯಲಿದೆ'' ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ ಪ್ರಿನ್ಸ್ ನರುಲಾ.

  ಪಂಚಾಬಿ ಸಂಪ್ರದಾಯದಂತೆ ಮದುವೆ

  ಪಂಚಾಬಿ ಸಂಪ್ರದಾಯದಂತೆ ಮದುವೆ

  ''ಪಂಚಾಬಿ ಸಂಪ್ರದಾಯದಂತೆ ಮದುವೆ ನಡೆಯಲಿದೆ. ಜಾಗ ಇನ್ನೂ ನಿಗದಿ ಆಗಿಲ್ಲ. ಈ ವರ್ಷ ಮುಗಿಯುವುದರೊಳಗೆ ಯುವಿಕಾ ನನ್ನ ಪತ್ನಿ ಆಗಲಿದ್ದಾರೆ'' ಅಂತ ಪ್ರಿನ್ಸ್ ಹೇಳಿದ್ದಾರೆ.

  ಯಾರೀ ಪ್ರಿನ್ಸ್.?

  ಯಾರೀ ಪ್ರಿನ್ಸ್.?

  ಎಂಟಿವಿ ರೋಡೀಸ್, ಸ್ಪ್ಲಿಟ್ಸ್ ವಿಲ್ಲಾ ಹಾಗೂ 'ಬಿಗ್ ಬಾಸ್-9' ಕಾರ್ಯಕ್ರಮಗಳನ್ನ ಗೆದ್ದು ರಿಯಾಲಿಟಿ ಸ್ಟಾರ್ ಆಗಿರುವವರು ಪ್ರಿನ್ಸ್ ನರುಲಾ. ಸದ್ಯ ಎಂಟಿವಿಯಲ್ಲಿ ಪ್ರಸಾರ ಆಗುತ್ತಿರುವ ರೋಡೀಸ್ ಎಕ್ಸ್ ಟ್ರೀಮ್ ನಲ್ಲಿ ಪ್ರಿನ್ಸ್ ನರುಲಾ ಗ್ಯಾಂಗ್ ಲೀಡರ್ ಆಗಿದ್ದಾರೆ.

  English summary
  Bigg Boss 9 Winner Prince Narula and Yuvika Chaudhary to get married on October/November 2018.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X