For Quick Alerts
  ALLOW NOTIFICATIONS  
  For Daily Alerts

  ಪ್ರೇಯಸಿ ಹೆಸರನ್ನ ಹಚ್ಚೆ ಹಾಕಿಸಿಕೊಂಡ 'ಬಿಗ್ ಬಾಸ್' ವಿಜೇತ ಪ್ರಿನ್ಸ್.!

  By Harshitha
  |
  ಪ್ರೇಯಸಿ ಹೆಸರನ್ನ ಹಚ್ಚೆ ಹಾಕಿಸಿಕೊಂಡ ಬಿಗ್ ಬಾಸ್ ಸ್ಪರ್ಧಿ | Oneindia Kannada

  ಪ್ರಿನ್ಸ್ ನರುಲಾ... ಮಾಡೆಲ್, ನಟ ಹಾಗೂ ರಿಯಾಲಿಟಿ ಶೋಗಳ ಸರದಾರ. 'ಎಂಟಿವಿ ರೋಡೀಸ್ X2', 'ಎಂಟಿವಿ ಸ್ಪಿಲ್ಟ್ಸ್ ವಿಲ್ಲಾ-8' ಮತ್ತು 'ಬಿಗ್ ಬಾಸ್-9' ಕಾರ್ಯಕ್ರಮಗಳನ್ನ ಸಾಲಾಗಿ ಗೆದ್ದ ಮಿಸ್ಟರ್ ಪಂಜಾಬ್ ಪ್ರಿನ್ಸ್ ನರುಲಾ ಇದೀಗ ತಮ್ಮ ಲವ್ ಸ್ಟೋರಿಯಿಂದಾಗಿ ಹೆಚ್ಚು ಸುದ್ದಿ ಮಾಡ್ತಿದ್ದಾರೆ.

  ಪ್ರಿನ್ಸ್ ನರುಲಾ ಹಾಗೂ ನಟಿ ಯುವಿಕಾ ಚೌಧರಿ ಇದೀಗ ಪ್ರೇಮದ ಅಮಲಿನಲ್ಲಿ ತೇಲುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ಇನ್ನೂ ಕೆಲವೇ ದಿನಗಳಲ್ಲಿ ಪ್ರಿನ್ಸ್ ನರುಲಾ ಹಾಗೂ ಯುವಿಕಾ ಚೌಧರಿ ಮದುವೆ ನಡೆಯಲಿದೆ.

  ಹಾಗ್ನೋಡಿದ್ರೆ, ಯುವಿಕಾ ಚೌಧರಿ ಹಾಗೂ ಪ್ರಿನ್ಸ್ ನರುಲಾ ಭೇಟಿಯಾಗಿದ್ದು 'ಬಿಗ್ ಬಾಸ್-9' ಕಾರ್ಯಕ್ರಮದಲ್ಲಿ. 'ಬಿಗ್ ಬಾಸ್-9' ರಿಯಾಲಿಟಿ ಶೋ ಗೆಲ್ಲುವುದರ ಜೊತೆಗೆ ಯುವಿಕಾ ಮನವನ್ನೂ ಗೆದ್ದು ಬಿಟ್ಟರು ಪ್ರಿನ್ಸ್.

  ಯುವಿಕಾ ಮೇಲೆ ಬೆಟ್ಟದಷ್ಟು ಪ್ರೀತಿ ಇಟ್ಟಿರುವ ಪ್ರಿನ್ಸ್ ನರುಲಾ ಸದ್ಯ ಯುವಿಕಾ ಹೆಸರನ್ನ ಹಚ್ಚೆ ಹಾಕಿಸಿಕೊಂಡಿದ್ದಾರೆ. ಫೋಟೋ ಸ್ಲೈಡ್ ಗಳಲ್ಲಿ ಬಾಕಿ ಮ್ಯಾಟರ್ ಓದಿರಿ...

  ಯುವಿಕಾ ಹೆಸರನ್ನು ಹಚ್ಚೆ ಹಾಕಿಸಿಕೊಂಡ ಪ್ರಿನ್ಸ್

  ಯುವಿಕಾ ಹೆಸರನ್ನು ಹಚ್ಚೆ ಹಾಕಿಸಿಕೊಂಡ ಪ್ರಿನ್ಸ್

  'ಬಿಗ್ ಬಾಸ್ 11' ಕಾರ್ಯಕ್ರಮದ ಎರಡನೇ ರನ್ನರ್ ಅಪ್ ವಿಕಾಸ್ ಗುಪ್ತ ಬರ್ತಡೇ ಪಾರ್ಟಿಯಲ್ಲಿ ತೆಗೆದ ಫೋಟೋ ಇದು. ಯುವಿಕಾ ಹೆಸರನ್ನ ಹಿಂದಿಯಲ್ಲಿ ಪ್ರಿನ್ಸ್ ನರುಲಾ ಹಚ್ಚೆ ಹಾಕಿಸಿಕೊಂಡಿರುವುದು ಈ ಫೋಟೋದಲ್ಲಿ ಸ್ಪಷ್ಟವಾಗಿದೆ.

  ಬಿಗ್ ಬಾಸ್ ಪ್ರಣಯ ಪಕ್ಷಿಗಳ ಮದುವೆ ದಿನಾಂಕ ನಿಗದಿಬಿಗ್ ಬಾಸ್ ಪ್ರಣಯ ಪಕ್ಷಿಗಳ ಮದುವೆ ದಿನಾಂಕ ನಿಗದಿ

  ಯುವಿಕಾಗೆ ಸರ್ ಪ್ರೈಸ್

  ಯುವಿಕಾಗೆ ಸರ್ ಪ್ರೈಸ್

  ತಮ್ಮ ಹೆಸರಿನ 'ಟಾಟ್ಯೂ'ನ ಹಾಕಿಸಿಕೊಂಡು ಪ್ರಿನ್ಸ್ ನರುಲಾ ಕೊಟ್ಟ ಸರ್ ಪ್ರೈಸ್ ಗೆ ಯುವಿಕಾ ಕ್ಲೀನ್ ಬೌಲ್ಡ್ ಆಗಿದ್ದಾರೆ. ''ಟಾಟ್ಯೂ ನೋಡಿದಾಗ ಆದ ಖುಷಿಯನ್ನ ನನಗೆ ವರ್ಣಿಸಲು ಅಸಾಧ್ಯ. ನನಗೆ ತುಂಬಾ ಇಷ್ಟ ಆಯ್ತು'' ಎಂದು ಯುವಿಕಾ ಚೌಧರಿ ಹೇಳಿದ್ದಾರೆ.

  ಎಂಗೇಜ್ ಆದ ಜೋಡಿ

  ಎಂಗೇಜ್ ಆದ ಜೋಡಿ

  ಕಳೆದ ಜನವರಿಯಲ್ಲಿ ಪ್ರಿನ್ಸ್ ನರುಲಾ ಹಾಗೂ ಯುವಿಕಾ ಚೌಧರಿ ಅಧಿಕೃತವಾಗಿ ಎಂಗೇಜ್ ಆದರು. ಸದ್ಯದಲ್ಲಿಯೇ ಮದುವೆ ನಡೆಯಲಿದೆ.

  'ಫಿಲ್ಮಿ' ಮದುವೆ

  'ಫಿಲ್ಮಿ' ಮದುವೆ

  ''ಪ್ರಿನ್ಸ್ ಮತ್ತು ನಾನು ತುಂಬಾ ಫಿಲ್ಮಿ. ಹೀಗಾಗಿ ನಮ್ಮ ಮದುವೆ ರೋಮ್ಯಾಂಟಿಕ್ ಆಗಿ ನಡೆಯಬೇಕು ಎಂಬುದು ನಮ್ಮ ಆಸೆ'' ಎಂದು ಸಂದರ್ಶನವೊಂದರಲ್ಲಿ ಯುವಿಕಾ ಚೌಧರಿ ಹೇಳಿಕೊಂಡಿದ್ದರು. ಅಂದ್ಹಾಗೆ, ಇಬ್ಬರ ಮದುವೆ ದಿನಾಂಕ ಇನ್ನೂ ನಿಗದಿ ಆಗಿಲ್ಲ.

  English summary
  Bigg Boss 9 Winner Prince Narula got tattooed his lady love Yuvika Chaudhary's name on his neck.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X