For Quick Alerts
  ALLOW NOTIFICATIONS  
  For Daily Alerts

  'ಬಾಡಿ ಸ್ಸ್ರೇ ಜಾಹೀರಾತು ರೇಪ್ ಸಂಸ್ಕೃತಿ ಪ್ರಚಾರ ಮಾಡುತ್ತಿದೆ'-ಪ್ರಿಯಾಂಕಾ ಚೋಪ್ರಾ ಆಕ್ರೋಶ!

  |

  ಭಾರತದ ಟಿವಿಗಳಲ್ಲಿ ಬಾಡಿ ಸ್ಪ್ರೇ ಜಾಹೀರಾತೊಂದು ವಿವಾದವನ್ನು ಸೃಷ್ಟಿಸಿದೆ. ಈ ಜಾಹೀರಾತು ಪ್ರಸಾರ ಆದಲ್ಲಿಂದ ಸೆಲೆಬ್ರೆಟಿಗಳು ಈ ಜಾಹೀರಾತಿನ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಬಾಲಿವುಡ್‌ನ ಪ್ರಿಯಾಂಕಾ ಚೋಪ್ರಾರಿಂದ ಹಿಡಿದು ರಿಚಾ ಚಡ್ಡಾ, ನಿರ್ದೇಶಕ-ನಟ ಫರ್ಹಾನ್ ಅಖ್ತರ್ ಕೂಡ ವಿರೋಧ ವ್ಯಕ್ತಪಡಿದ್ದಾರೆ.

  ಬಾಲಿವುಡ್ ಹಾಗೂ ಹಾಲಿವುಡ್ ಸಿನಿಮಾಗಳಲ್ಲಿ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ ಪುರುಷರ ಬಾಡಿ ಸ್ಪ್ರೇ ಜಾಹೀರಾತಿನ ವಿರುದ್ಧ ಕಿಡಿಕಾರಿದ್ದಾರೆ. ರಿಚಾ ಚಡ್ಡಾ, ಫರ್ಹಾನ್ ಅಖ್ತರ್ ಕೂಡ ವಿರೋಧಿಸಿದ್ದು ಮೂವರು "ನಾಚಿಕೆಗೇಡು", " ಅಸಹ್ಯಕರ", "ಅಭಿರುಚಿ ಇಲ್ಲ" ಎಂದು ಟೀಕೆ ಮಾಡುತ್ತಿದ್ದಾರೆ. ಅಷ್ಟಕ್ಕೂ ಬಾಡಿ ಸ್ಪ್ರೇ ಜಾಹೀರಾತು ಇಷ್ಟೊಂದು ವಿವಾದಕ್ಕೀಡಾಗಿದ್ದು ಯಾಕೆ? ಜಾಹೀರಾತಿನಲ್ಲಿ ಅಂತಹದ್ದೇನಿದೆ? ಎಂದು ತಿಳಿಯಲು ಮುಂದೆ ಓದಿ.

  ಪ್ರಿಯಾಂಕಾ ಚೋಪ್ರಾ ಮುಖಕ್ಕೆ ಅಂಥದ್ದೇನಾಯ್ತು? ಪೋಟೊ ನೋಡಿ ಫ್ಯಾನ್ಸ್ ಏನಂದ್ರು?ಪ್ರಿಯಾಂಕಾ ಚೋಪ್ರಾ ಮುಖಕ್ಕೆ ಅಂಥದ್ದೇನಾಯ್ತು? ಪೋಟೊ ನೋಡಿ ಫ್ಯಾನ್ಸ್ ಏನಂದ್ರು?

  ಬಾಡಿ ಸ್ಪ್ರೇ ಜಾಹೀರಾತಿನಲ್ಲಿ ಅಂತಹದ್ದೇನಿದೆ?

  ವಿವಾದಕ್ಕೀಡಾಗಿರುವ ಜಾಹೀರಾತು ಪರಿಕಲ್ಪನೆಗೆ ವಿರೋಧ ವ್ಯಕ್ತವಾಗಿದೆ. ಈ ಜಾಹೀರಾತಿನಲ್ಲಿ ಮಾಲ್‌ವೊಂದರಲ್ಲಿ ಶೂಟ್ ಮಾಡಲಾಗಿದೆ. ನಾಲ್ವರು ಯುವಕರು ಬಾಡಿ ಸ್ಪ್ರೇ ಖರೀದಿ ಮಾಡಲು ಹೋಗಿರುತ್ತಾರೆ. ಅವರ ಮುಂದೆ ಒಬ್ಬಳು ಯುವತಿ ನಿಂತಿರುತ್ತಾಳೆ. ಆಗ ಆ ನಾಲ್ವರು " ನಾವು ನಾಲ್ಕು ಮಂದಿ ಇದ್ದೇವೆ. ಆದರೆ ಇರುವುದು ಒಂದೇ. ಯಾರಿಗೆ ಅವಕಾಶ ಸಿಗುತ್ತೆ?" ಎನ್ನುವ ಅರ್ಥದಲ್ಲಿ ಡೈಲಾಗ್ ಬಿಡುತ್ತಾರೆ. ಆ ಯುವತಿ ಹಿಂದೆ ತಿರುಗಿದಾಗಲೇ ಅಲ್ಲಿರುವುದು ಒಂದೇ ಬಾಡಿ ಸ್ಪ್ರೇ. ಅವರು ಮಾತಾಡಿದ್ದು ಆ ಬಾಡಿ ಸ್ಪ್ರೇ ಬಗ್ಗೆ ಎಂಬುದು ರಿವೀಲ್ ಆಗುತ್ತೆ. ಇದು ರೇಪ್ ಸಂಸ್ಕೃತಿಯನ್ನು ಪ್ರಚಾರ ಮಾಡುತ್ತಿದೆ ಎಂದು ಆರೋಪ ಮಾಡಲಾಗುತ್ತಿದೆ.

  ಇದೊಂದು ಕ್ರಿಯೇಟಿವ್ ಜಾಹೀರಾತಾಗಿದ್ದರೂ, ಇದು ರೇಪ್ ಸಂಸ್ಕೃತಿಯನ್ನು ಪ್ರಚಾರ ಮಾಡುವಂತಿದೆ ಎಂದು ಸೆಲೆಬ್ರೆಟಿಗಳು ಆಕ್ರೋಶ ಹೊರಹಾಕಿದ್ದಾರೆ. ಇವರಲ್ಲಿ ಪ್ರಿಯಾಂಕಾ ಚೋಪ್ರಾ, ರಿಚಾ ಚಡ್ಡಾ ಹಾಗೂ ಫರ್ಹಾನ್ ಅಖ್ತರ್ ವಿರೋಧ ವ್ಯಕ್ತಪಡಿಸಿದ್ದು, ಈ ಜಾಹೀರಾತಿನ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ನಟಿ ರಿಚಾ ಚಡ್ಡಾ"ಎಲ್ಲರೂ ರೇಪ್ ಅನ್ನು ತಮಾಷೆಯಾಗಿ ತೆಗೆದುಕೊಂಡಿದ್ದೀರಾ ಎಂದು" ಟ್ವೀಟ್ ಮಾಡಿದ್ದರು. ಆ ಟ್ವೀಟ್‌ಗೆ ಪ್ರಿಯಾಂಕಾ ಚೋಪ್ರಾ " ನಾಚಿಕೆಗೇಡು ಮತ್ತು ಅಸಹ್ಯಕರ" ಎಂದು ಪ್ರತಿಕ್ರಿಯಿಸಿದ್ದಾರೆ.

  ಮಗುವಿನ ಚಿತ್ರ ಹಂಚಿಕೊಂಡು ಸತ್ಯ ಹೊರಹಾಕಿದ ಪ್ರಿಯಾಂಕಾ ಚೋಪ್ರಾಮಗುವಿನ ಚಿತ್ರ ಹಂಚಿಕೊಂಡು ಸತ್ಯ ಹೊರಹಾಕಿದ ಪ್ರಿಯಾಂಕಾ ಚೋಪ್ರಾ

  ಗ್ಯಾಂಗ್ ರೇಪ್ ಅನ್ನು ಪ್ರಚೋದಿಸುತ್ತದೆ

  ಬಾಡಿ ಸ್ಪ್ರೇ ಜಾಹೀರಾತು ಗ್ಯಾಂಗ್ ರೇಪ್‌ ಅನ್ನು ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿ, ವಿರೋಧಿಸುತ್ತಿದ್ದಾರೆ. ಹೈದರಾಬಾದ್‌ನಲ್ಲಿ 17 ವರ್ಷ ಹುಡುಗಿಯ ಮೇಲೆ 5 ಮಂದಿ ಅತ್ಯಾಚಾರ ಮಾಡಿದ ಘಟನೆ ನಡೆದ ಒಂದು ವಾರದ ಬಳಿಕ ಈ ಜಾಹೀರಾತು ಬಿಡುಗಡೆಯಾಗಿತ್ತು. ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಮಾಹಿತಿ ಮತ್ತು ಪ್ರಸಾರ ಇಲಾಖೆ ಅಖಾಡಕ್ಕಿಳಿದಿದೆ.

  " ಮಹಿಳೆಯರು ಮತ್ತು ಯುವತಿಯರ ವಿರುದ್ಧ ಈ ಜಾಹೀರಾತು ಲೈಂಗಿಕ ದೌರ್ಜನ್ಯ ಎಸಗುವುದನ್ನು ಪ್ರಚಾರ ಮಾಡುತ್ತಿದ್ದು, ಅತ್ಯಾಚಾರ ಮನಸ್ಥಿತಿಯನ್ನು ಕೆರಳಿಸುತ್ತಿದೆ. ಈ ಜಾಹೀರಾತು ಭಯಂಕವಾಗಿದ್ದು, ಯಾವುದೇ ಮಾಸ್ ಮೀಡಿಯಾದಲ್ಲಿ ಪ್ರಸಾರ ಮಾಡಲು ಅನುಮತಿ ನೀಡ ಬಾರದು." ಎಂದು ಮಾಹಿತಿ ಮತ್ತು ಪ್ರಸಾರ ಮಂತ್ರಾಲಯದ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ತಿಳಿಸಿದ್ದಾರೆ.

  Priyanka Chopra Angry On Indian Body Spray Ad For Promoting Rape Culture

  ಮಗಳಿಗೆ ಭಾರತೀಯ ಹೆಸರಿಟ್ಟ ಪ್ರಿಯಾಂಕಾ-ನಿಕ್ಮಗಳಿಗೆ ಭಾರತೀಯ ಹೆಸರಿಟ್ಟ ಪ್ರಿಯಾಂಕಾ-ನಿಕ್

  ವಿವಾದಕ್ಕೀಡಾದ 24 ಗಂಟೆಯೊಳಗೆ ಜಾಹೀರಾತು ಪ್ರಸಾರಕ್ಕೆ ತಡೆಯಾಜ್ಞೆ ನೀಡಲಾಗಿದೆ. ಅಲ್ಲದೆ ಟ್ವಿಟರ್ ಹಾಗೂ ಯೂಟ್ಯೂಬ್‌ಗೂ ತಮ್ಮ ಫ್ಲಾಟ್‌ಫಾರ್ಮ್‌ನಿಂದ ಜಾಹೀರಾತನ್ನು ತೆಗೆಯುವಂತೆ ಸೂಚನೆಯನ್ನು ನೀಡಿದೆ. ಇದೇ ವೇಳೆ ಜಾಹೀರಾತು ಕಂಪನಿ ಕೂಡ ಕ್ಷಮೆಯನ್ನು ಕೇಳಿದೆ.

  English summary
  Priyanka Chopra Angry On Indian Body Spray Ad For Promoting Rape Culture. Richa Chadha and Farhan Akhtar Also Criticized For The Commercial, Know More.
  Tuesday, June 7, 2022, 15:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X