»   » ಭಾರತದ ಈ ಮಹಿಳೆ ಪ್ರಪಂಚದ ನಂಬರ್ ಒನ್ ಜನಪ್ರಿಯ ನಟಿ!

ಭಾರತದ ಈ ಮಹಿಳೆ ಪ್ರಪಂಚದ ನಂಬರ್ ಒನ್ ಜನಪ್ರಿಯ ನಟಿ!

Posted By:
Subscribe to Filmibeat Kannada

ನಟಿ ಪ್ರಿಯಾಂಕ ಚೋಪ್ರಾ ಬಾಲಿವುಡ್ ನಲ್ಲಿ ಮಾತ್ರವಲ್ಲದೇ ಹಾಲಿವುಡ್ ಅಂಗಳದಲ್ಲೂ ಮಿಂಚುತ್ತಿದ್ದಾರೆ. ಅಮೆರಿಕದಲ್ಲಿ ಕ್ವಾಂಟಿಕೋ ಟಿವಿ ಶೋ ಮೂಲಕ ಜನಮನ್ನಣೆ ಪಡೆದಿದ್ದ ಪಿಗ್ಗಿ ಇತ್ತೀಚೆಗೆ ತೆರೆಕಂಡ ಹಾಲಿವುಡ್ 'ಬೇವಾಚ್‌' ಚಿತ್ರದಲ್ಲಿ ನಟಿಸಿ ವಿಶ್ವದಾದ್ಯಂತ ಸಿನಿ ರಸಿಕರ ಗಮನಸೆಳೆದಿದ್ದಾರೆ. ಇದೇ ನಟಿ ಈಗ ಪ್ರಪಂಚದ ಮೋಸ್ಟ್ ಪಾಪ್ಯುಲರ್ ನಟಿಯಾಗಿ ಹೊರಹೊಮ್ಮಿದ್ದಾರೆ.[ಪ್ರಿಯಾಂಕ ಚೋಪ್ರಾ ಈ ನಟನೊಂದಿಗೆ ಡೇಟಿಂಗ್ ಮಾಡಿದ್ದರಂತೆ! ಯಾರವರು?]

ಹೌದು, 34 ವರ್ಷದ ಹಾಟ್ ಬ್ಯೂಟಿ ಪ್ರಿಯಾಂಕ ಚೋಪ್ರಾ 'ಬೇವಾಚ್' ಕೋ-ಸ್ಟಾರ್ ಡ್ವೇನ್ ಜಾನ್ಸನ್ ಮತ್ತು 'ವಂಡರ್ ವೂಮೆನ್' ನಟಿ Gal Gadot ರನ್ನು ಹಿಂದಿಕ್ಕಿ ಸಾಮಾಜಿಕ ಜಾಲತಾಣದಲ್ಲಿ ವಿಶ್ವದ ನಂಬರ್ ಒನ್ ಜನಪ್ರಿಯ ತಾರೆಯಾಗಿ ಹೊರಹೊಮ್ಮಿದ್ದಾರೆ. ಪ್ರಿಯಾಂಕ ಈಗ ಸಾಮಾಜಿಕ ಜಾಲತಾಣ ಫೇಸ್‌ಬುಕ್, ಟ್ವಿಟ್ಟರ್, ಯೂಟ್ಯೂಬ್ ಮತ್ತು ಗೂಗಲ್ ಪ್ಲಸ್ ಗಳ ಟಾಪ್ ಆಕ್ಟರ್ ಪಟ್ಟಿಯಲ್ಲಿ ಒಂದನೇ ಸ್ಥಾನದಲ್ಲಿದ್ದಾರೆ.

Priyanka Chopra declared world's most popular actor on social media

ಸಾಮಾಜಿಕ ಜಾಲತಾಣ ವಿಶ್ಲೇಷಕ ಕಂಪನಿ ಎಂವಿಪಿಂಡೆಕ್ಸ್ ತಾರೆಯರ ಸೋಶಿಯಲ್ ಮೀಡಿಯಾ ಎಂಗೇಜ್‌ಮೆಂಟ್ ಮತ್ತು ಅವರ ಖಾತೆಗಳಲ್ಲಿ ಇರುವ ಫಾಲೋವರ್ ಆಧಾರಿತ ಡಾಟಾವನ್ನು ಜೂನ್ 6 ರ ಅಂತ್ಯಕ್ಕೆ ಟ್ರ್ಯಾಕ್ ಮಾಡಿ ಒದಗಿಸಿದೆ. ಇದರಿಂದ ಪ್ರಿಯಾಂಕ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ವಿಶ್ವದ ನಂಬರ್ ಒನ್ ಜನಪ್ರಿಯ ತಾರೆ ಎಂಬುದು ತಿಳಿದಿದೆ.[ಪ್ರಿಯಾಂಕ ಚೋಪ್ರಾ ಪ್ರೀತಿಯಲ್ಲಿ ಬಿದ್ದ ಹಾಲಿವುಡ್ ನಟ!]

Priyanka Chopra declared world's most popular actor on social media

ಪ್ರಿಯಾಂಕ ಚೋಪ್ರಾ ನಂತರ ವಿಶ್ವದ ಮೋಸ್ಟ್ ಪಾಪ್ಯುಲರ್ ತಾರೆಯಾಗಿ ಡ್ವೇನ್ ಜಾನ್ಸನ್ ಎರಡನೇ ಸ್ಥಾನದಲ್ಲಿ, ಕೆವಿನ್ ಹಾರ್ಟ್ ಮೂರನೇ ಸ್ಥಾನದಲ್ಲಿ, Gal Gadot ಮತ್ತು Cara Delevingne ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.

English summary
Priyanka Chopra is more popular than her ‘Baywatch’ co-star Dwayne Johnson and even ‘Wonder Woman’ Gal Gadot on social media. She is number one on the Top Actors chart, a ranking of the most popular actors on Facebook, Instagram, Twitter, YouTube and Google Plus.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada