ದುಬಾರಿ ಬೆಲೆಗೆ ಲಾಸ್ ಏಂಜಲೀಸ್ ಮನೆ ಮಾರಿದ ಪ್ರಿಯಾಂಕಾ ಚೋಪ್ರಾ.!

ಅಮೆರಿಕನ್ ನಟ, ಸಿಂಗರ್ ನಿಕ್ ಜೋನಸ್ ಜೊತೆ ಮದುವೆಯಾಗಿದ್ದ ಬಾಲಿವುಡ್ ಚೆಲುವೆ ಪ್ರಿಯಾಂಕಾ ಚೋಪ್ರಾ, ಆರು ತಿಂಗಳ ಹಿಂದೆ ಲಾಸ್ ಏಂಜಲೀಸ್ ನಲ್ಲಿ ಭವ್ಯ ಬಂಗಲೆ ಖರೀದಿಸಿದ್ದರು. ಆ ಬಂಗಲೆಯನ್ನ ಈಗ ಮಾರಾಟ ಮಾಡಿದ್ದಾರೆ.

5 ಬೆಡ್ ರೂಂ, ಸ್ವಿಮ್ಮಿಂಗ್‌ ಪೂಲ್ ಹೊಂದಿದ್ದ ದುಬಾರಿ ಮನೆಯನ್ನ 6.8 ಮಿಲಿಯನ್ ಡಾಲರ್ (48 ಕೋಟಿ)ಗೆ ಸೇಲ್ ಮಾಡಿದ್ದಾರೆ ಎಂದು ಹಾಲಿವುಡ್ ಪತ್ರಿಕೆಯೊಂದು ವರದಿ ಮಾಡಿದೆ.

ಆರು ತಿಂಗಳು ಈ ಮನೆಯಲ್ಲಿ ಸಾಂಸಾರಿಕ ಜೀವನ ನಡೆಸಿದ್ದ ಪ್ರಿಯಾಂಕಾ ಮತ್ತು ನಿಕ್ ಜೋನಸ್ ಈಗ ಹೊಸ ಮನೆ ಖರೀದಿ ಮಾಡಲು ಹುಡುಕಾಟ ನಡೆಸುತ್ತಿದ್ದಾರೆ. ಬಹಳ ಆಸೆಯಿಂದ ಕೊಂಡುಕೊಂಡಿದ್ದ ಮನೆಯನ್ನ ಕೇವಲ ಆರು ತಿಂಗಳಲ್ಲಿ ಮಾರಾಟ ಮಾಡಿರುವ ಬಗ್ಗೆ ಚರ್ಚೆ ಶುರುವಾಗಿದೆ.

Priyanka Chopra Los Angeles Home Sold For Rs 48 Crore

ಈಗ ಇದ್ದ ಮನೆಗಿಂತ ಇನ್ನು ದೊಡ್ಡ ಮನೆ ಬೇಕು ಎಂಬ ಕಾರಣಕ್ಕೆ ಲಾಸ್ ಏಂಜಲೀಸ್ ಮನೆ ಮಾರಿದ್ದಾರೆ ಎನ್ನಲಾಗಿದೆ. ಈಗ ಹೊಸ ಮನೆ ಖರೀದಿ ಮಾಡಲು ಸುಮಾರು 20 ಮಿಲಿಯನ್ ಡಾಲರ್ (140 ಕೋಟಿ) ಕೊಡಲು ಸಿದ್ಧರಿದ್ದಾರಂತೆ.

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಇಬ್ಬರು ಗ್ಲೋಬಲ್ ಸ್ಟಾರ್. ಇಬ್ಬರು ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ. ತಮ್ಮ ಘನತೆಗೆ ತಕ್ಕ ಮನೆ ಬೇಕು ಎಂದು ನಿರ್ಧರಿಸಿ, ಅದಕ್ಕೆ ತಕ್ಕ ಹಾಗೆ ದೊಡ್ಡ ಮನೆ ಕೊಂಡುಕೊಳ್ಳಲು ಚಿಂತನೆ ನಡೆಸಿದ್ದಾರಂತೆ.

ಸದ್ಯ ಬಾಲಿವುಡ್ ನಲ್ಲಿ ಪ್ರಿಯಾಂಕಾ ಚೋಪ್ರಾ ಕಂಬ್ಯಾಕ್ ಚಿತ್ರಕ್ಕಾಗಿ ಎದುರು ನೋಡುತ್ತಿದ್ದಾರೆ. 'ದಿ ಸ್ಕೈ ಈಸ್ ಪಿಂಕ್' ಎಂಬ ಚಿತ್ರಕ್ಕೆ ಪಿಗ್ಗಿ ಸಹಿ ಮಾಡಿದ್ದು, ಸದ್ಯದಲ್ಲೇ ಶೂಟಿಂಗ್ ಆರಂಭಿಸಲಿದ್ದಾರಂತೆ.

More from Filmibeat

English summary
Global stars Priyanka Chopra and nick jonas's Los Angeles Home has sold for Rs 48 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X