For Quick Alerts
  ALLOW NOTIFICATIONS  
  For Daily Alerts

  ಈ ವಿಚಾರದಲ್ಲಿ ಸನ್ನಿ ಲಿಯೋನನ್ನೇ ಮೀರಿಸಿದ ನಟಿ ಪ್ರಿಯಾಂಕಾ ಚೋಪ್ರಾ

  |

  ಬಾಲಿವುಡ್ ನಟಿ ಪ್ರಿಯಾಂಕಾ ಕೈಯಲ್ಲಿ ಯಾವ ಸಿನಿಮಾಗಳಿಲ್ಲ ಅಂದರು ಸದಾ ಸುದ್ದಿಯಲ್ಲಿರುತ್ತಾರೆ. ಒಂದಲ್ಲೊಂದು ವಿಚಾರದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಚಂಚಲನ ಮೂಡಿಸುತ್ತಿರುವ ಪ್ರಿಯಾಂಕಾ, ಇತ್ತೀಚಿಗೆ ದುಬಾರಿ ಮನೆ ಖರೀದಿಸಿ ಸುದ್ದಿಯಾಗಿದ್ದರು. ಪತಿ ನಿಕ್ ಜೋನಸ್ ಜೊತೆ ಪ್ರಿಯಾಂಕಾ ಸದ್ಯ ಯುಎಸ್ ನಲ್ಲಿ ನೆಲೆಸಿದ್ದಾರೆ.

  ಪಿಗ್ಗಿ ಮತ್ತೆ ಸುದ್ದಿ ಮಾಡುತ್ತಿರುವುದು ಅತೀ ಹೆಚ್ಚು ಬಾರಿ ಹುಡುಕಲ್ಪಟ್ಟ ನಟಿ ಎನ್ನುವ ಕಾರಣಕ್ಕೆ. ಹೌದು, 2018 ಅಕ್ಟೋಬರ್ ನಿಂದ 2019 ಅಕ್ಟೋಬರ್ ವರೆಗೂ ಗೂಗಲ್ ನಲ್ಲಿ ಅತೀ ಹೆಚ್ಚು ಬಾರಿ ಹುಡುಕಲ್ಪಟ್ಟ ನಟಿ ಪ್ರಿಯಾಂಕಾ. ಪ್ರಿಯಾಂಕಾ ಅವರನ್ನು ಬರೋಬ್ಬರಿ 2.74 ಮಿಲಿಯನ್ ಬಾರಿ ಸರ್ಚ್ ಮಾಡಲಾಗಿದೆ. ಈ ಮೂಲಕ ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಅವರನ್ನೆ ಹಿಂದಿಕ್ಕಿ ಮೊದಲ ಸ್ಥಾನದಲ್ಲಿದ್ದಾರೆ.

  ಪ್ರಿಯಾಂಕಾ ಚೋಪ್ರಾ ಹಾಕಿದ ಫೋಟೋ ಆಕೆಗೆ ತಿರುಗುಬಾಣ ಆಯ್ತುಪ್ರಿಯಾಂಕಾ ಚೋಪ್ರಾ ಹಾಕಿದ ಫೋಟೋ ಆಕೆಗೆ ತಿರುಗುಬಾಣ ಆಯ್ತು

  ಕಳೆದ ಐದು ವರ್ಷಗಳಿಂದ ಸನ್ನಿ ಲಿಯೋನ್ ಗೂಗಲ್ ರಾಣಿಯಾಗಿ ಆಳ್ವಿಕೆ ಮಾಡುತ್ತಿದ್ದರು. ಅತೀ ಹಚ್ಚು ಬಾರಿ ಹುಡುಕಲ್ಪಟ್ಟ ಸೆಲೆಬ್ರಿಟಿಗಳ ಸಾಲಿನಲ್ಲಿ ಸನ್ನಿ ಟಾಪ್ ನಲ್ಲಿ ಇರುತ್ತಿದ್ದರು. ಆದರೆ ಈ ಬಾರಿ ಸನ್ನಿಯನ್ನು ಹಿಂದಿಕ್ಕಿ ಪ್ರಿಯಾಂಕಾ ಮೊದಲ ಸ್ಥಾನ ಪಡೆದಿದ್ದಾರೆ. ಇನ್ನು ನಂತರದ ಸ್ಥಾನದಲ್ಲಿ ಸಲ್ಮಾನ್ ಖಾನ್, ಸನ್ನಿ ಲಿಯೋನ್ ಮತ್ತು ದೀಪಿಕಾ ಪಡುಕೋಣೆ ಸ್ಥಾನ ಪಡೆದಿದ್ದಾರೆ.

  ಸಲ್ಮಾನ್ ಖಾನ್ 1.83 ಮಿಲಿಯನ್ ಬಾರಿ ಹುಡುಕಲ್ಪಟ್ಟಿದ್ದಾರೆ. ಸರ್ಚ್ ಎಂಜಿನ್ ನಲ್ಲಿ ಮೊದಲ ಸ್ಥಾನ ಪಡೆದಿರುವ ಪ್ರಿಯಾಂಕಾ ಚೋಪ್ರಾ ಕೊನೆಯದಾಗಿ 'ಸ್ಕೈ ಈಸ್ ಪಿಂಕ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಮುಂದಿನ ಸಿನಿಮಾದಲ್ಲಿ ರಾಜ್ ಕುಮಾರ್ ರಾವ್ ಜೊತೆ ಕಾಣಿಸಿಕೊಳ್ಳಲಿರುವ ಪ್ರಿಯಾಂಕಾ ಈಗಾಗಲೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

  English summary
  Bollywood actress Priyanka Chopra most searched actress on internet. Priyanka Chopra beats beats Sunny leone.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X