For Quick Alerts
  ALLOW NOTIFICATIONS  
  For Daily Alerts

  ಅಮೆರಿಕದಲ್ಲಿ ಹೊಸ ದಾಖಲೆ ಬರೆದ ಪ್ರಿಯಾಂಕಾ ಚೋಪ್ರಾ ಪುಸ್ತಕ!

  |

  ನಟಿ ಪ್ರಿಯಾಂಕಾ ಚೋಪ್ರಾ ನಿಕ್ ಜೋನಸ್ ಅನ್ನು ವಿವಾಹವಾದ ನಂತರ ಬಾಲಿವುಡ್‌ ಸಿನಿಮಾದಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದಾರೆ.

  ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ ಚೋಪ್ರಾ, ಪ್ರಸ್ತುತ ಪುಸ್ತಕವೊಂದನ್ನು ಬರೆದಿದ್ದಾರೆ. ಪುಸ್ತಕ ಬಿಡುಗಡೆ ಆಗಿದ್ದೇ ತಡ ಬಿಸಿ ದೋಸೆಯಂತೆ ಖರ್ಚಾಗುತ್ತಿದೆ.

  ಹೌದು, ಪ್ರಿಯಾಂಕಾ ಚೋಪ್ರಾ, 'ಮೆಮೋಯಿರ್ ಅನ್‌ಫಿನಿಶ್ಡ್' ಎಂಬ ಹೊಸ ಪುಸ್ತಕ ಬರೆದಿದ್ದು, ಪುಸ್ತಕ ಬಿಡುಗಡೆ ಆದ ಕೇವಲ 12 ಗಂಟೆಗಳಲ್ಲಿ ದಾಖಲೆ ಬರೆದಿದೆ.

  ಅತಿ ಹೆಚ್ಚು ಮಾರಾಟವಾದ ಪುಸ್ತಕಗಳಲ್ಲಿ ಒಂದು

  ಅತಿ ಹೆಚ್ಚು ಮಾರಾಟವಾದ ಪುಸ್ತಕಗಳಲ್ಲಿ ಒಂದು

  ಬಿಡುಗಡೆಯಾದ 12 ಗಂಟೆಗಳಲ್ಲಿ ಅತಿ ಹೆಚ್ಚು ಮಾರಾಟವಾದ ಪುಸ್ತಕಗಳಲ್ಲಿ ಒಂದು ಎಂಬ ಖ್ಯಾತಿಯನ್ನು ಮೆಮೋಯಿರ್ ಅನ್‌ಫಿನಿಶ್ಡ್ ಪುಸ್ತಕ ತನ್ನದಾಗಿಸಿಕೊಂಡಿದೆ. ಪ್ರಸ್ತುತ ಅಮೆರಿಕದಲ್ಲಿ ಅತ್ಯುತ್ತಮವಾಗಿ ಮಾರಾಟವಾಗುತ್ತಿರುವ ನಂಬರ್ 1 ಪುಸ್ತಕ ಎಂಬ ಖ್ಯಾತಿಯನ್ನು ಸಹ ಪ್ರಿಯಾಂಕಾ ರ ಪುಸ್ತಕ ತನ್ನದಾಗಿಸಿಕೊಂಡಿದೆ.

  ತಮ್ಮದೇ ಅನುಭವ ಪುಸ್ತಕ ರೂಪದಲ್ಲಿ

  ತಮ್ಮದೇ ಅನುಭವ ಪುಸ್ತಕ ರೂಪದಲ್ಲಿ

  ತಮ್ಮದೇ ಜೀವನ ಅನುಭವವನ್ನು ಬರೆಯುವುದಾಗಿ ಪ್ರಿಯಾಂಕಾ ಚೋಪ್ರಾ 2018 ರಲ್ಲಿಯೇ ಘೋಷಿಸಿದ್ದರು. ಆಗಿನಿಂದಲೂ ಅವರು ಪುಸ್ತಕದ ಬಗ್ಗೆ ಅಪ್‌ಡೇಟ್‌ಗಳನ್ನು ನೀಡುತ್ತಾ ಬರುತ್ತಿದ್ದರು. ಪುಸ್ತಕವನ್ನು ಬರೆದು ಮುಗಿಸಲು ಪ್ರಿಯಾಂಕಾ ಎರಡು ವರ್ಷ ಸಮಯ ತೆಗೆದುಕೊಂಡಿದ್ದಾರೆ.

  ಅಮೆರಿಕದ ಬೆಸ್ಟ್ ಸೆಲ್ಲರ್ ಪುಸ್ತಕ

  ಅಮೆರಿಕದ ಬೆಸ್ಟ್ ಸೆಲ್ಲರ್ ಪುಸ್ತಕ

  ಇದೇ ಆಗಸ್ಟ್‌ನಲ್ಲಿ ಪುಸ್ತಕ ಬರೆಯುವುದು ಮುಗಿಸಿದ ಪ್ರಿಯಾಂಕಾ ಚೋಪ್ರಾ ಕೆಲವು ದಿನಗಳ ಹಿಂದಷ್ಟೆ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಈಗದು ಅಮೆರಿಕದ ಬೆಸ್ಟ್ ಸೆಲ್ಲರ್ ಪುಸ್ತಕ ಎನಿಸಿಕೊಂಡಿದೆ. ಈ ವಿಷಯವನ್ನು ಪ್ರಿಯಾಂಕಾ ಚೋಪ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  'ದಿ ವೈಟ್ ಟೈಗರ್' ಪುಸ್ತಕ ಕಾದಂಬರಿ ಸಿನಿಮಾ

  'ದಿ ವೈಟ್ ಟೈಗರ್' ಪುಸ್ತಕ ಕಾದಂಬರಿ ಸಿನಿಮಾ

  ದಿ ಸ್ಕೈ ಇಸ್ ಪಿಂಕ್ ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದ್ದ ಪ್ರಿಯಾಂಕಾ, ಬೂಕರ್ ಪ್ರಶಸ್ತಿ ವಿಜೇತ ಕಾದಂಬರಿ 'ದಿ ವೈಟ್ ಟೈಗರ್' ಆಧರಿತ ಸಿನಿಮಾದಲ್ಲಿ ನಟಿಸುವವರಿದ್ದಾರೆ. ಇದಲ್ಲದೆ, ಹಾಲಿವುಡ್ ಕಮಿಡಿಯನ್ ಮಿಂಡಿ ಕೇಲಿಂಗ್ ಜೊತೆಗೆ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ. ಅಮೆಜಾನ್‌ನ ಪ್ರಸಾರವಾಗಲಿರುವ ಇವಿಲ್ ಐ ನ ಸಹ ನಿರ್ಮಾಪಕಿ ಸಹ ಆಗಿದ್ದಾರೆ ಪ್ರಿಯಾಂಕಾ.

  English summary
  Actress Priyanka Chopra's 'Unfinished' book is the best seller book in USA in last 24 hours.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X