»   » ಪ್ರಿಯಾಂಕ ಚೋಪ್ರಾ ಬಾಯ್ ಫ್ರೆಂಡ್ ಆಗುವ ಅವಕಾಶ ಯಾರಿಗೆ?

ಪ್ರಿಯಾಂಕ ಚೋಪ್ರಾ ಬಾಯ್ ಫ್ರೆಂಡ್ ಆಗುವ ಅವಕಾಶ ಯಾರಿಗೆ?

Posted By:
Subscribe to Filmibeat Kannada

ನಟಿ ಪ್ರಿಯಾಂಕ ಚೋಪ್ರಾ ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್ ಅಂಗಳದಲ್ಲೂ ಬೇಡಿಕೆ ಗಿಟ್ಟಿಸಿಕೊಂಡಿರುವ ಸಖತ್ ಹಾಟ್ ಮತ್ತು ಬೋಲ್ಡ್ ನಟಿ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ, ಫ್ಯಾಶನ್ ಶೋ ಗಳಲ್ಲಿ ಆಕರ್ಷಕ ಉಡುಗೆಯಿಂದ ಎಲ್ಲರ ಕಣ್ಸೆಳೆಯುವ ಪ್ರಿಯಾಂಕ, ಆಗಾಗ ತಮ್ಮ ಉಡುಗೆ ಶೈಲಿಯಿಂದಲೇ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿರುತ್ತಾರೆ.[ಹಾಟ್ ಬ್ಯೂಟಿ ಪ್ರಿಯಾಂಕ'ಳ ಹಾಲಿವುಡ್ 'ಬೇವಾಚ್' ಟ್ರೈಲರ್]

ಪ್ರಿಯಾಂಕ ಹಲವು ಬಾಲಿವುಡ್ ಸೂಪರ್ ಸ್ಟಾರ್ ಗಳೊಂದಿಗೆ ನಟಿಸಿದ್ದರೂ ಅವರ ಹಾರ್ಟ್ ನಲ್ಲಿ ಇರೋ ಡ್ರೀಮ್ ಬಾಯ್ ಮಾತ್ರ ಯಾರು ಎಂದು ಇದುವರೆಗೂ ಗೊತ್ತಿಲ್ಲ. ಹಾಗೆ ಅವರ ಕನಸಿನ ಬಾಯ್ ಫ್ರೆಂಡ್ ಹೇಗಿರಬೇಕು ಎಂಬುದನ್ನು ಈ ವರೆಗೆ ಪಿಗ್ಗಿ ರಿವೀಲ್ ಮಾಡಿರಲಿಲ್ಲ. ಹೆಚ್ಚು ಗಾಸಿಪ್ ಗಳಿಗೂ ಒಳಗಾಗದ 35 ವರ್ಷದ ಈ ನಟಿ ಇತ್ತೀಚೆಗೆ 'ಡೈಲಿ' ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಡ್ರೀಮ್ ಬಾಯ್ ಮತ್ತು ಅವನ ಗುಣಗಳ ಕುರಿತಂತೆ ತುಟಿ ಬಿಚ್ಚಿದ್ದಾರೆ. ಅಲ್ಲದೇ ದೀಪಿಕಾ ಪಡುಕೋಣೆ ಗೆ ಶಾಕ್ ನೀಡಿದ್ದಾರೆ. ಯಾಕಂದ್ರೆ ರಣವೀರ್ ಸಿಂಗ್ ಪ್ರಿಯಾಂಕ ಹಾರ್ಟ್ ನಲ್ಲಿ ವಿಶೇಷ ಸ್ಥಾನದಲ್ಲಿದ್ದಾರೆ. ಮುಂದೆ ಓದಿರಿ.

ಪ್ರಿಯಾಂಕ ಚೋಪ್ರಾ ತಮ್ಮ ನೆಚ್ಚಿನ ನಟನ ಬಗ್ಗೆ ಹೇಳಿದ್ದು...

'ಡೈಲಿ' ಮಾಧ್ಯಮ ಇತ್ತೀಚೆಗೆ ಪ್ರಿಯಾಂಕ ಚೋಪ್ರಾ ರವರನ್ನು ತಮ್ಮ ಬಾಲಿವುಡ್ ಮತ್ತು ಹಾಲಿವುಡ್ ಕೋ-ಸ್ಟಾರ್ ಗಳಲ್ಲಿ ಯಾರನ್ನಾದರೂ ಆಯ್ಕೆ ಮಾಡಿ ಅವರ ವಿಶೇಷ ಗುಣಲಕ್ಷಣಗಳನ್ನೂ ಹೇಳಿ ಎಂದು ಸಂದರ್ಶನದಲ್ಲಿ ಕೇಳಿತ್ತು. ಅದಕ್ಕೆ ಉತ್ತರಿಸಿದ ಪಿಗ್ಗಿ...

ಹೆಚ್ಚು ಆಕರ್ಷಕವಾಗಿದ್ದಾರೆಯೇ ಗಮನಿಸುತ್ತೇನೆ!

ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ನಗುತ್ತಾ ಉತ್ತರಿಸಿದ ಪ್ರಿಯಾಂಕ ಚೋಪ್ರಾ "ನಾನು ಹೆಚ್ಚಾಗಿ ಆಕರ್ಷಕವಾಗಿರುವ ಗುಣಲಕ್ಷಣದ ಬಗ್ಗೆ ಗಮನಹರಿಸುತ್ತೇನೆ. ಹಾಲಿವುಡ್ ನಲ್ಲಿ ಡ್ವೇನ್ ಜಾನ್ಸನ್ ಹೆಚ್ಚು ಆಟ್ರ್ಯಾಕ್ಟಿವ್ ಆಗಿ ಕಾಣಿಸುತ್ತಾರೆ' ಎಂದರು.[ಪ್ರಿಯಾಂಕಾ ಬಟ್ಟೆಯಿಂದ ಪಿರಮಿಡ್ ಕಟ್ಟಬಹುದು, ಟೆಂಟ್ ಹಾಕಬಹುದು!]

ರಣವೀರ್ ಸಿಂಗ್ ನಲ್ಲಿ ಪ್ರಿಯಾಂಕ'ಗೆ ಇಷ್ಟವಾದ ಗುಣ

"ಡ್ವೇನ್ ಜಾನ್ಸನ್ ರವರು ತಮ್ಮ ಎಮೋಷನಲ್ ಮ್ಯಾನರ್ ನಿಂದ ಹುಡುಗಿಯರಿಗೆ ಹೆಚ್ಚು ಅಟ್ರ್ಯಾಕ್ಟ್ ಆಗುತ್ತಾರೆ. ಇನ್ನೂ Zac Abs ಮತ್ತು Jake McLaughlin ರವರ ಮಿಶ್ರ ಕಣ್ಣುಗಳ ನೋಟದಿಂದ ಭಾರತದ ನನ್ನ ಕೋ-ಸ್ಟಾರ್ ರಣವೀರ್ ಸಿಂಗ್ ಆಕರ್ಷಕವಾಗಿದ್ದಾರೆ" ಎಂದು ಹೇಳಿರುವ ಪಿಗ್ಗಿ ತಮ್ಮ ಬಾಯ್ ಫ್ರೆಂಡ್ ಬಗ್ಗೆ ಮಾತ್ರ ಸುಳಿವು ಬಿಟ್ಟುಕೊಟ್ಟಿಲ್ಲ.

'ಬೇವಾಚ್'ನಲ್ಲಿ ಪ್ರಿಯಾಂಕ ರೋಲ್

"ಕ್ವಾಂಟಿಕೋ ಶೋ ನಂತರ ಹಲವು ಅದ್ಭುತ ಸಿನಿಮಾಗಳ ಆಫರ್ ಬಂತು. ಅವುಗಳಲ್ಲಿ ಹೆಚ್ಚು ಇಷ್ಟವಾಗಿದ್ದು 'ಬೇವಾಚ್'. ಕಾರಣ ಇದು ಬಹುದೊಡ್ಡ ಜಾಗತಿಕ ಸಿನಿಮಾ ಮತ್ತು ನಾನು 'ಬೇವಾಚ್' ಆಕ್ಷನ್ ಡ್ರಾಮಾ ಸೀರೀಸ್ ನ ಅಭಿಮಾನಿ. ಇದನ್ನು ನೋಡಿಕೊಂಡೇ ಬೆಳೆದವಳು ನಾನು. ಈ ಚಿತ್ರದಲ್ಲಿ ನಾನು ವಿಲನ್ ಪಾತ್ರದಲ್ಲಿ ನಟಿಸಿದ್ದೇನೆ" ಎಂದು 'ಡೈಲಿ' ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ.

ವಿಭಿನ್ನ ಪಾತ್ರಗಳು ಇಷ್ಟ

"ನಾನು ಯಾವಾಗಲು ವಿಭಿನ್ನ ಪಾತ್ರಗಳಲ್ಲಿ ಬಣ್ಣಹಚ್ಚಲು ಇಚ್ಛಿಸುತ್ತೇನೆ. ಅದನ್ನು ನನ್ನ ಮೊದಲನೇ ಸಿನಿಮಾದಿಂದಲೇ ಕಂಡುಕೊಂಡೇ. ವಿಭಿನ್ನ ಪಾತ್ರಗಳ ಆಯ್ಕೆ ನನಗೆ ಯಾವುದೇ ಸಿನಿಮಾಗೆ ಉತ್ತೇಜನ ನೀಡುತ್ತದೆ" -ಪ್ರಿಯಾಂಕ ಚೋಪ್ರಾ, ಬಾಲಿವುಡ್ ನಟಿ

ಅಲೆಕ್ಸ್ ಪಾತ್ರ ಬ್ಯಾಡ್ ಆದರೂ ಹೆಚ್ಚು ಫನ್

'ಬೇವಾಚ್' ಚಿತ್ರದ ಅಭಿನಯದ ಬಗ್ಗೆ ಹೇಳುತ್ತಾ ಪಿಗ್ಗಿ, "ಕ್ವಾಂಟಿಕೋ ಶೋ ದಲ್ಲಿ ನನ್ನ ಪಾತ್ರ ಅಲೆಕ್ಸ್ ಪ್ಯಾರಿಸ್. ಇದರ ನಂತರ ಅಮೆರಿಕದಲ್ಲಿ ಕಂಪ್ಲೀಟ್ಲಿ ಡಿಫರೆಂಟ್ ಆಗಿ ಪರಿಚಯವಾಗಬೇಕು ಎಂದು ಬಯಸಿದೆ. ಅಲೆಕ್ಸ್ ಪಾಸಿಟಿವ್ ರೋಲ್ ಆಗಿದ್ದರಿಂದ ಪೂರ್ಣವಾಗಿ ಬೇಸರವಾಗಿತ್ತು ಹಾಗೆ ಹೆಚ್ಚು ಫನ್ ಆಗಿಯೂ ಇತ್ತು" ಎಂದು ಸಂದರ್ಶನದಲ್ಲಿ ಬಾಯಿಬಿಟ್ಟರು.

ಪ್ರಿಯಾಂಕ ಮತ್ತು ರಣವೀರ್ ಬಗ್ಗೆ ಹೇಳುವುದಾದರೆ...

ಪ್ರಿಯಾಂಕ ಚೋಪ್ರಾ ಮತ್ತು ರಣವೀರ್ ಸಿಂಗ್ 'ಗುಂಡೇ', 'ದಿಲ್ ದಡ್ಕನೇ ದೋ' ಮತ್ತು ಬಾಜಿರಾವ್ ಮಸ್ತಾನಿ' ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ.

ಪಿಗ್ಗಿ ಮತ್ತು ರಣವೀರ್ ಕೆಮಿಸ್ಟ್ರಿ ಬಗ್ಗೆ

ಪ್ರಿಯಾಂಕ ಚೋಪ್ರಾ ಮತ್ತು ರಣವೀರ್ ಸಿಂಗ್ ಜೊತೆಯಲ್ಲಿ ನಟಿಸಿದ ಚಿತ್ರಗಳೆಲ್ಲವೂ ಹೆಚ್ಚು ಇಂಟ್ರೆಸ್ಟಿಂಗ್ ಆಗಿವೆ. 'ಗುಂಡೇ' ಚಿತ್ರದಲ್ಲಿ ಇಬ್ಬರೂ ಪ್ರೇಮಿಗಳಾಗಿ, 'ದಿಲ್ ದಡ್ಕನೇ ದೋ' ಚಿತ್ರದಲ್ಲಿ ಸಹೋದರ-ಸಹೋದರಿ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಸಂಜಯ್ ಲೀಲಾ ಬನ್ಸಾಲಿ ರವರ 'ಬಾಜಿರಾವ್ ಮಸ್ತಾನಿ' ಚಿತ್ರದಲ್ಲಿ ಗಂಡ-ಹೆಂಡತಿಯಾಗಿ ಅಭಿನಯಿಸಿದ್ದಾರೆ. ಆದರೆ ಪಿಗ್ಗಿ ತಮ್ಮ ಬಾಯ್ ಫ್ರೆಂಡ್ ಯಾರು ಅಂತ ಮಾತ್ರ

English summary
Read what Priyanka Chopra said about Ranveer Singh and how it is related to her dream man.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada