For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ ಚೋಪ್ರಾ ಹಾಕಿದ ಫೋಟೋ ಆಕೆಗೆ ತಿರುಗುಬಾಣ ಆಯ್ತು

  |

  ಕಳೆದ ಒಂದು ವಾರದಿಂದ ದೆಹಲಿಯಲ್ಲಿ ವಿಪರೀತ ವಾಯುಮಾಲಿನ್ಯವಾ ಉಂಟಾಗಿತ್ತು. ಇದರಿಂದ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರ ಜೀವನ ಅಸ್ತವ್ಯಸ್ತವಾಗಿತ್ತು. ಶಾಲಾ-ಕಾಲೇಜುಗಳಿಗೆ ರಜೆ ಕೂಡ ಘೋಷಿಸಿದ್ದರು.

  ಪ್ರಯಾಣಕ್ಕೆ ಭಾರಿ ಸಮಸ್ಯೆಯಾಗಿತ್ತು. ವಾಹನಗಳ ಚಾಲನೆಯೂ ಕಷ್ಟಸಾಧ್ಯವಾಗಿತ್ತು. ದಟ್ಟವಾಗಿ ಹರಡಿದ್ದ ವಾಯುಮಾಲಿನ್ಯದಿಂದ ಹಿರಿಯ ನಾಗರೀಕರಿಗೆ ಉಸಿರಾಟ ತೊಂದರೆ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸಗಳಾಗಿವೆ.

  ದೆಹಲಿ ವಾಯುಮಾಲಿನ್ಯದ ಬಗ್ಗೆ ಪ್ರಿಯಾಂಕಾ ಚೋಪ್ರಾ ಬೇಸರದೆಹಲಿ ವಾಯುಮಾಲಿನ್ಯದ ಬಗ್ಗೆ ಪ್ರಿಯಾಂಕಾ ಚೋಪ್ರಾ ಬೇಸರ

  ಇದನ್ನ ಗಮನಿಸಿದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮೂಗಿಗೆ ಮಾಸ್ಕ್ ಧರಿಸಿರುವ ಫೋಟೋ ಪೋಸ್ಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದರು. ಆದ್ರೆ, ಪ್ರಿಯಾಂಕಾ ಅವರು ಪೋಸ್ಟ್ ಮಾಡಿದ ಫೋಟೋ ಈಗ ಅವರಿಗೆ ತಿರುಗುಬಾಣ ಆಗಿದೆ. ಮುಂದೆ ಓದಿ....

  ಪ್ರಿಯಾಂಕಾ ಚೋಪ್ರಾ ಹಾಕಿದ್ದ ಪೋಸ್ಟ್ ಏನು?

  ಪ್ರಿಯಾಂಕಾ ಚೋಪ್ರಾ ಹಾಕಿದ್ದ ಪೋಸ್ಟ್ ಏನು?

  ''ದೆಹಲಿಯಲ್ಲಿ 'ದಿ ವೈಟ್ ಟೈಗರ್' ಎಂಬ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಈ ವಾತಾವರಣದಲ್ಲಿ ಚಿತ್ರೀಕರಣ ಮಾಡಲು ಕಷ್ಟಸಾಧ್ಯ. ತುಂಬಾ ಕಷ್ಟದ ಪರಿಸ್ಥಿತಿಯಲ್ಲಿ ಇಲ್ಲಿನ ಜನರಿದ್ದಾರೆ. ನಾವು ಮಾಸ್ಕ್ ಧರಿಸಿ ಸುರಕ್ಷಿತವಾಗಿದ್ದೇವೆ. ಎಲ್ಲರೂ ಸುರಕ್ಷಿತೆಯಿಂದಿರಿ'' ಎಂದು ಪೋಸ್ಟ್ ಮಾಡಿದ್ದರು.

  ಪ್ರಿಯಾಂಕಾ ಚೋಪ್ರ ಮತ್ತು ಫರಾನ್ ಅಖ್ತರ್ ಬೆಡ್ ರೂಮ್ ದೃಶ್ಯ ಲೀಕ್ಪ್ರಿಯಾಂಕಾ ಚೋಪ್ರ ಮತ್ತು ಫರಾನ್ ಅಖ್ತರ್ ಬೆಡ್ ರೂಮ್ ದೃಶ್ಯ ಲೀಕ್

  'ತಿರುಗುಬಾಣ' ಆಯ್ತು ಪ್ರಿಯಾಂಕಾ ಪೋಸ್ಟ್

  'ತಿರುಗುಬಾಣ' ಆಯ್ತು ಪ್ರಿಯಾಂಕಾ ಪೋಸ್ಟ್

  ಪತಿ ನಿಕ್ ಜೋನಸ್ ಜೊತೆ ಸೇರಿ ಪ್ರಿಯಾಂಕಾ ಚೋಪ್ರಾ ಈ ಹಿಂದೆ ಸಿಗರೇಟ್ ಸೇದಿದ್ದರು. ಆ ಫೋಟೋ ಕೂಡ ವೈರಲ್ ಆಗಿತ್ತು. ಪಿಗ್ಗಿ ಸಿಗರೇಟ್ ಸೇದುತ್ತಿರುವ ಫೋಟೋವನ್ನ ಶೇರ್ ಮಾಡಿರುವ ನೆಟ್ಟಿಗರು ''ಸಿಗರೇಟ್ ಸೇದಿದರೆ ವಾಯುಮಾಲಿನ್ಯ ಆಗಲ್ವಾ? ಈಗ ದೇಶ ಬಿಟ್ಟು ಬೇರೆ ಕಡೆ ಹೋದ್ಮೇಲೆ ದೆಹಲಿ ಕಷ್ಟವಾಗಿದೆ'' ಎಂದು ವ್ಯಂಗ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

  ವಾಸಿಯಾಗದ ಕಾಯಿಲೆಯಿಂದ ಬಳಲುತ್ತಿರುವ ಪ್ರಿಯಾಂಕಾ ಪತಿಯ ಭಾವನಾತ್ಮಕ ಪೋಸ್ಟ್ವಾಸಿಯಾಗದ ಕಾಯಿಲೆಯಿಂದ ಬಳಲುತ್ತಿರುವ ಪ್ರಿಯಾಂಕಾ ಪತಿಯ ಭಾವನಾತ್ಮಕ ಪೋಸ್ಟ್

  ಭಾರತದಲ್ಲಿ ಒಂಥರಾ, ವಿದೇಶದಲ್ಲಿ ಇನ್ನೊಂಥರಾ

  ಭಾರತದಲ್ಲಿ ಒಂಥರಾ, ವಿದೇಶದಲ್ಲಿ ಇನ್ನೊಂಥರಾ

  ಅಮೇರಿಕನ್ ಗಾಯಕ ನಿಕ್ ಜೋನಸ್ ಅವರನ್ನ ಮದುವೆ ಆದ ಬಳಿಕ, ಪ್ರಿಯಾಂಕಾ ಚೋಪ್ರಾ ಅವರ ವೇಷಭೂಷಣ, ನಡೆ-ನುಡಿ ಎಲ್ಲವೂ ಬದಲಾಗಿದೆ. ಭಾರತದಲ್ಲಿ ಸಂಸ್ಕ್ರತಿ ಅಂತೆಲ್ಲಾ ಮಾತನಾಡುವ ಪ್ರಿಯಾಂಕಾ, ವಿದೇಶದಲ್ಲಿ ಮಾತ್ರ ಭಾರತ ಸಂಸ್ಕ್ರತಿಗೆ ಧಕ್ಕೆ ತರುವಂತೆ ನಡೆದುಕೊಳ್ಳುತ್ತಾರೆ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

  ಪ್ರಿಯಾಂಕಾ ಕುರಿತು ಮೇಮ್ಸ್

  ಪ್ರಿಯಾಂಕಾ ಕುರಿತು ಮೇಮ್ಸ್

  ಪ್ರಿಯಾಂಕಾ ಅವರು ಪೋಸ್ಟ್ ಮಾಡಿರುವ ಮೇಮ್ಸ್ ಮತ್ತು ಈ ಹಿಂದೆ ಸಿಗರೇಟ್ ಸೇದುತ್ತಿರುವ ಫೋಟೋಗೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಮೇಮ್ಸ್ ಹುಟ್ಟುಹಾಕಿ ಪಿಗ್ಗಿಗೆ ಟಾಂಗ್ ಕೊಡುತ್ತಿದ್ದಾರೆ.

  English summary
  Bollywood Actress Priyanka Chopra has trolled after she posted selfie photo about delhi air pollution.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X