For Quick Alerts
  ALLOW NOTIFICATIONS  
  For Daily Alerts

  'ಪಾ', 'ಪ್ಯಾಡ್‌ಮ್ಯಾನ್' ಚಿತ್ರದ ನಿರ್ಮಾಪಕ ಅನಿಲ್ ನಾಯ್ಡು ನಿಧನ

  |

  2020ನೇ ವರ್ಷದಲ್ಲಿ ಸಿನಿರಂಗ ಮತ್ತೊಬ್ಬ ವ್ಯಕ್ತಿಯನ್ನು ಕಳೆದುಕೊಂಡಿದೆ. ಹಿಂದಿ ಚಿತ್ರರಂಗದ ಖ್ಯಾತ ಸಂಕಲನಕಾರ ಹಾಗು ನಿರ್ಮಾಪಕ ಅನಿಲ್ ನಾಯ್ಡು ಅವರು ಬುಧವಾರ ಸಂಜೆ ನಿಧನರಾಗಿದ್ದಾರೆ. ಅನಿಲ್ ನಾಯ್ಡು ಅವರ ಸಾವಿಗೆ ಸ್ನೇಹಿತರು, ಆಪ್ತರು ಹಾಗೂ ಚಿತ್ರರಂಗದವರು ಸಂತಾಪ ಸೂಚಿಸಿದ್ದಾರೆ.

  ಜಾಹೀರಾತು ಕ್ಷೇತ್ರದಲ್ಲಿ ಹೆಚ್ಚು ತೊಡಗಿಕೊಂಡಿದ್ದ ಅನಿಲ್ ನಾಯ್ಡು ಅವರು ಅಮಿತಾಭ್ ಬಚ್ಚನ್ ನಟಿಸಿದ್ದ 'ಪಾ' ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದರು. ಅಕ್ಷಯ್ ಕುಮಾರ್ ನಟನೆಯ 'ಪ್ಯಾಡ್ ಮ್ಯಾನ್' ಚಿತ್ರಕ್ಕೂ ಸಹ ನಿರ್ಮಾಪಕರಾಗಿ ಬಂಡವಾಳ ಹಾಕಿದ್ದರು.

  ಚಂದನವನದ ಹಿರಿಯ ನಿರ್ದೇಶಕ ಜಿ.ಮೂರ್ತಿ ನಿಧನಚಂದನವನದ ಹಿರಿಯ ನಿರ್ದೇಶಕ ಜಿ.ಮೂರ್ತಿ ನಿಧನ

  ಅನಿಲ್ ನಾಯ್ಡು ನಿಧನಕ್ಕೆ ನಿರ್ಮಾಪಕ ಅನುಭವ್ ಸಿನ್ಹಾ, ಆರ್.ಜೆ.ಅಲೋಕ್, ಖ್ಯಾತ ಸಿನಿಮಾಟೋಗ್ರಫರ್ ಶ್ರೀರಾಮ್ ಟ್ವಿಟ್ಟರ್‌ ಮೂಲಕ ಸಂತಾಪ ಸೂಚಿಸಿದ್ದಾರೆ.

  ಆರ್ ಬಲ್ಕಿ ಮತ್ತು ಪತ್ನಿ ಗೌರಿ ಶಿಂಧೆ ಅವರು 'ಹೋಪ್ ಪ್ರೊಡಕ್ಷನ್ಸ್' ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯ ಸ್ಥಾಪಿಸಿದಾಗ, ಅನಿಲ್ ನಾಯ್ಡು ಅವರನ್ನು ಸಹ ತಮ್ಮ ಜೊತೆ ಸೇರಿಸಿಕೊಂಡಿದ್ದರು. ಸಂಕಲನಕಾರನಾಗಿ ಜರ್ನಿ ಆರಂಭಿಸಿದ್ದ ಅನಿಲ್ ನಾಯ್ಡು ದೇಶದ ಅತ್ಯುತ್ತಮ ಜಾಹೀರಾತುಗಳಿಗೆ ಕೆಲಸ ಮಾಡಿದ್ದಾರೆ.

  ಕುರುಕ್ಷೇತ್ರ ಸಿನಿಮಾ ಮಾಡ್ತೀನಿ ಅಂತ ಬಂದಾಗ ಮುನಿರತ್ನನಿಗೆ ಬೈದು ಕಳ್ಸಿದ್ದೆ | Darshan | Munirathna

  ಹೋಪ್ ಪ್ರೊಡಕ್ಷನ್ಸ್ ಅಡಿಯಲ್ಲಿ ತಯಾರಾದ 'ಇಂಗ್ಲಿಷ್ ವಿಂಗ್ಲಿಷ್', 'ಶಮಿತಾಬ್', 'ಡಿಯರ್ ಜಿಂದಗಿ', 'ಕಿ ಮತ್ತು ಕಾ', 'ಪ್ಯಾಡ್‌ಮ್ಯಾನ್' ಮತ್ತು 'ಮಿಷನ್ ಮಂಗಲ್' ಚಿತ್ರಗಳಲ್ಲಿ ಸಹ ನಿರ್ಮಾಪಕರಾಗಿ ಅನಿಲ್ ಕಾರ್ಯನಿರ್ವಹಿಸಿದ್ದರು.

  English summary
  Popular film producer and editor Anil Naidu passed away. he is the one of the producer for Padman.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X