Don't Miss!
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Sports
IND vs NZ 2nd T20: ಭಾರತಕ್ಕೆ ಸಾಧಾರಣ ಗುರಿ ನೀಡಿದ ನ್ಯೂಜಿಲೆಂಡ್
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಶ್ಮಿಕಾಳಂತೆ 'ಸಾಮಿ ಸಾಮಿ' ಹಾಡಿಗೆ ಸೊಂಟ ಬಳುಕಿಸಿದ ರಾಖಿ ಸಾವಂತ್: ವಿಡಿಯೋ ವೈರಲ್
ಬಾಲಿವುಡ್‌ನಲ್ಲಿ ಸದಾ ಸುದ್ದಿಯಲ್ಲಿರುವ ನಟಿ ಯಾರು ಅಂತ ಕೇಳಿದರೆ, ಥಟ್ಟನೆ ನೆನಪಿಗೆ ಬರುವುದೇ ರಾಖಿ ಸಾವಂತ್. ಒಂದಲ್ಲ ಒಂದು ಕಾರಣಕ್ಕೆ ರಾಖಿ ಸಾವಂತ್ ಸದಾ ಸುದ್ದಿಯಲ್ಲಿ ಇರುತ್ತಾರೆ. ಅದಕ್ಕೆ ಈಕೆ ಬಾಲಿವುಡ್‌ನಲ್ಲಿ ಡ್ರಾಮ ಕ್ವೀನ್ ಅಂತಲೇ ಕರೆಯುತ್ತಾರೆ. ನಾಲ್ಕೈದು ದಿನದ ಹಿಂದಷ್ಟೇ ರಾಖಿ ಸಾವಂತ್ ಕಣ್ಣೀರು ಹಾಕಿದ್ದಳು. ಈಗ ನೋಡಿದರೆ ಗೆಳೆಯನೊಂದಿಗೆ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬೇಜಾನ್ ವೈರಲ್ ಆಗುತ್ತಿದ್ದು, ಈಕೆಯ ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.
ರಾಖಿ ಸಾವಂತ್ ಐಟಂ ಸಾಂಗ್‌ಗಳಿಂದಲೇ ಜನಪ್ರಿಯಳಾಗಿದ್ದವಳು. ಬಾಲಿವುಡ್‌ನಲ್ಲಿ ಬಿಗ್ ಬಜೆಟ್ ಸಿನಿಮಾಗಳಿಗೆ ರಾಖಿ ಸಾವಂತ್ ಮಸ್ತ್ ಹೆಜ್ಜೆ ಹಾಕಿದ್ದಳು. ಆದರೆ, ಇತ್ತೀಚೆಗೆ ಪ್ರಚಾರದ ಗೀಳಿಗೆ ಬಿದ್ದು, ಸಿನಿಮಾದಿಂದ ವಂಚಿತಳಾಗಿದ್ದಾರೆ. ಆದರೆ, ರಿಯಾಲಿಟಿ ಶೋಗಳಲ್ಲಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾಳೆ. ಈಗ ರಶ್ಮಿಕಾ ನಟಿಸಿದ ಪುಷ್ಪ ಹಾಡಿಗೆ ಹಜ್ಜೆ ಹಾಕಿ ಸದ್ದು ಮಾಡುತ್ತಿದ್ದಾಳೆ.
ನನ್ನನ್ನು
ಮುಟ್ಟಿದ್ರೆ
ಮಾನನಷ್ಟ
ಮೊಕದ್ದಮೆ
ಹಾಕುತ್ತೇನೆ
ಎಂದ
ರಾಖಿ
ಸಾವಂತ್!

'ಸಾಮಿ' ಹಾಡಿಗೆ ರಾಖಿ ಸಾವಂತ್ ಹೆಜ್ಜೆ
'ಪುಷ್ಪ' ಸಿನಿಮಾದ ಪ್ರತಿಯೊಂದೂ ಹಾಡು ವೈರಲ್ ಆಗಿದೆ. ಸಿನಿಮಾ ಬಿಡುಗಡೆಯಾಗಿ, ಒಟಿಟಿಯಲ್ಲಿ ರಿಲೀಸ್ ಆಗಿದ್ದರೂ, ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ಕೆಲವು ದಿನ ಶ್ರೀವಲ್ಲಿ ಹಾಡು ಟ್ರೆಂಡಿಂಗ್‌ನಲ್ಲಿತ್ತು. ಸಿನಿಮಾ ತಾರೆಯರಿಂದ ಹಿಡಿದು, ಕ್ರಿಕೆಟ್ ಆಟಗಾರರೂ ಕೂಡ ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದರು. ಈಗ ರಶ್ಮಿಕಾ ಮಂದಣ್ಣ ಹೆಜ್ಜೆ ಹಾಕಿದ ಸಾಮಿ ಸಾಮಿ ಹಾಡು ಟ್ರೆಂಡಿಂಗ್‌ನಲ್ಲಿದೆ. ವಿದೇಶದಲ್ಲಿರುವವರೆಲ್ಲರೂ ಈ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ಇದೇ ಸಾಮಿ ಸಾಮಿ ಹಾಡಿಗೆ ರಾಖಿ ಸಾವಂತ್ ಕೂಡ ಹೆಜ್ಜೆ ಹಾಕಿದ್ದು, ನೆಟ್ಟಿಗರು ಭೇಷ್ ಅಂತಿದ್ದಾರೆ.
ಸ್ನೇಹಿತನ ಜೊತೆ ರಾಖಿ ಸಾವಂತ್ ಸ್ಟೆಪ್ಸ್
'ಸಾಮಿ ಸಾಮಿ' ಟ್ರೆಂಡ್‌ನಲ್ಲಿ ರಾಖಿ ಸಾವಂತ್ ಕೂಡ ಭಾಗವಹಿಸಿದ್ದಾರೆ. ಗೆಳೆಯ ರಾಜೀವ್ ಖಿಂಚಿ ಜೊತೆ ಸಾಮಿ ಸಾಮಿ ಹಾಡಿಗೆ ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾಳೆ. ಈ ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಈ ವಿಡಿಯೋ ನೋಡಿ ನೆಟ್ಟಿಗಳು ಮೆಚ್ಚಿಕೊಂಡಿದ್ದಾರೆ. ಜೊತೆಗೆ ರಾಖಿ ಸಾವಂತ್ ಥುಂಕಾ ಬಗ್ಗೆನೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಡವಾಗಿ ಆದರೂ, ರಾಖಿ ಸಾವಂತ್ ಸಾಮಿ ಸಾಮಿ ಟ್ರೆಂಡ್‌ನಲ್ಲಿ ಭಾಗವಹಿಸಿದ್ದು, ಮೆಚ್ಚುಗೆ ಗಳಿಸಿದ್ದಾರೆ.

ಪತಿ ನೆನೆದು ಕಣ್ಣೀರು ಹಾಕಿದ್ದ ರಾಖಿ
ರಾಖಿ ಸಾವಂತ್ ಬಿಗ್ ಮನೆಯಲ್ಲಿ ಇರುವಾಗಲೇ ಮದುವೆ ವಿಚಾರ ಬಯಲಿಗೆ ಬಂದಿತ್ತು. ಉದ್ಯಮಿ ರಿತೇಶ್ ಅವರೊಂದಿಗೆ ವಿವಾಹವಾಗಿದ್ದಾಗಿ ರಾಖಿ ಹೇಳಿಕೊಂಡಿದ್ದಳು. ಆಗಲೂ ಕೆಲವರು ಇದೂ ಕೂಡ ಡ್ರಾಮ ಅಂತಲೇ ಹೇಳಿ ಸುಮ್ಮನಾಗಿದ್ದರು. ಮದುವೆಯಾದ ಕೆಲವು ದಿನಗಳಲ್ಲಿಯೇ ರಾಖಿ ಸಾವಂತ್ ಪತಿಗಾಗಿ ಕಣ್ಣೀರು ಹಾಕಿದ್ದಾಳೆ. ಪ್ರೇಮಿಗಳ ದಿನವೇ ಪತಿ ರಿತೇಶ್ ಕೈ ಕೊಟ್ಟು ಪರಿಯಾಗಿದ್ದಾನೆ ಎಂದು ಕಣ್ಣೀರು ಹಾಕಿದ್ದಳು. ರಿತೇಶ್ ಮೊದಲ ಪತ್ನಿಗೆ ವಿಚ್ಛೇದನ ನೀಡದೆ ರಾಖಿ ಸಾವಂತ್ ಜೊತೆ ಸಂಸಾರ ನಡೆಸುತ್ತಿದ್ದರು. ಬಳಿಕ ಕಾನೂನಿನ ಭಯದಿಂದ ರಾಖಿಗೆ ಕೈ ಕೊಟ್ಟು ಹೋಗಿದ್ದಾರೆ ಎಂದು ರಾಖಿ ಸಾವಂತ್ ಆರೋಪ ಮಾಡಿದ್ದಳು.

ನಾಲ್ಕೈದು ದಿನಗಳಲ್ಲಿ ಕಣ್ಣೀರು ಮಾಯ
ರಾಖಿ ಸಾವಂತ್ ಡ್ರಾಮ ಕ್ವೀನ್ ಅನ್ನುವುದನ್ನು ಪದೇ ಪದೇ ಸಾಭೀತು ಮಾಡುತ್ತಲೇ ಇದ್ದಾಳೆ. ನಾಲ್ಕು ದಿನಗಳ ಹಿಂದೆ ಪತಿ ರಿತೇಶ್ ಕೈ ಕೊಟ್ಟ ಹೋಗಿದ್ದಾನೆ ಎಂದು ಕಣ್ಣೀರು ಹಾಕಿದ್ದ ರಾಖಿ ಸಾವಂತ್ ಆ ನೋವನ್ನು ಮರೆತು ಸಾಮಿ ಸಾಮಿ ಅಂತ ಹೆಜ್ಜೆ ಹಾಕಿದ್ದಾಳೆ. ವಿಚ್ಛೇದನ ಪಡೆದರು, ಪತಿಯಿಂದ ಮೋಸ ಹೋದವರು ಆ ನೋವಿನಿಂದ ಹೊರಬರಲು ಪರದಾಡುತ್ತಿದ್ದಾರೆ. ರಾಳಿ ಐದೇ ದಿನಗಳಲ್ಲಿ ಆ ನೋವನ್ನು ಮರೆತು ರಶ್ಮಿಕಾ ಮಂದಣ್ಣ ಹಾಕಿದ ಸಾಮಿ ಸಾಮಿ ಹಾಡಿನ ಟ್ರೆಂಡ್‌ನಲ್ಲಿ ಭಾಗವಹಿಸಿದ್ದಾಳೆ.