For Quick Alerts
  ALLOW NOTIFICATIONS  
  For Daily Alerts

  'ಭಾರತದ ಕೋಗಿಲೆ'ಯ ಬಯೋಪಿಕ್‌ನಲ್ಲಿ 'ರಾಮಾಯಣ'ದ 'ಸೀತೆ'

  |

  ರಮಾನಂದ ಸಾಗರ್ ನಿರ್ದೇಶನದ 'ರಾಮಾಯಣ' ಧಾರಾವಾಹಿಯ ಮೂಲಕ ಜನಪ್ರಿಯತೆ ಗಳಿಸಿದವರು ನಟಿ ದೀಪಿಕಾ ಚಿಖ್ಲಿಯಾ ಟೋಪಿವಾಲಾ. ಈ ಧಾರಾವಾಹಿ ಬಳಿಕ ಇತರೆ ಧಾರಾವಾಹಿಗಳು ಮತ್ತು ಸಿನಿಮಾಗಳಲ್ಲಿ ನಟಿಸಿದ್ದರೂ ಜನಮಾನಸದಲ್ಲಿ ಅವರು 'ಸೀತೆ'ಯಾಗಿಯೇ ಉಳಿದಿದ್ದಾರೆ.

  ನಿಮ್ಮೆಲ್ಲರ ಸಹಕಾರದಿಂದಲೇ ನಾನು ಇಷ್ಟೆಲ್ಲ ಮಾಡ್ತಿರೋದು | Ragini | Filmibeat Kannada

  'ರಾಮಾಯಣ' ಧಾರಾವಾಹಿಯ ಮರುಪ್ರಸಾರದಿಂದ ಈಗಿನ ಪೀಳಿಗೆಯವರಿಗೂ ದೀಪಿಕಾ ಪರಿಚಿತರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗುವ ಮೂಲಕ ದೀಪಿಕಾ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. 'ರಾಮಾಯಣ' ಮತ್ತು 'ಉತ್ತರ ರಾಮಾಯಣ' ಧಾರಾವಾಹಿಗಳ ಅನೇಕ ಅನುಭವಗಳನ್ನು ಅವರು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಅವರ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿದೆ. ಈ ನಡುವೆ ಅವರು ಸಿನಿಮಾವೊಂದಕ್ಕೆ ತಯಾರಿ ನಡೆಸಿದ್ದಾರೆ. ಅದೂ ದೇಶ ಕಂಡ ಮಹಾನ್ ವ್ಯಕ್ತಿಯ ಜೀವನಗಾಥೆಯ ಕಥೆಯಲ್ಲಿ. ಮುಂದೆ ಓದಿ...

  'ಸರೋಜಿನಿ' ಮೊದಲ ಲುಕ್

  'ಸರೋಜಿನಿ' ಮೊದಲ ಲುಕ್

  'ಭಾರತದ ಕೋಗಿಲೆ' ಎಂದೇ ಖ್ಯಾತರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ್ತಿ, ಕವಯತ್ರಿ ಸರೋಜಿನಿ ನಾಯ್ಡು ಅವರ ಬಯೋಪಿಕ್‌ನಲ್ಲಿ ದೀಪಿಕಾ ಸರೋಜಿನಿ ನಾಯ್ಡು ಅವರ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಚಿತ್ರದ ಫೋಟೊವೊಂದನ್ನು ಹಂಚಿಕೊಂಡಿರುವ ದೀಪಿಕಾ, 'ಮೊದಲ ಲುಕ್ ಪೋಸ್ಟರ್' ಎಂದು ಬರೆದುಕೊಂಡಿದ್ದಾರೆ.

  33 ವರ್ಷಗಳ ಬಳಿಕ ಮರು ಪ್ರಸಾರದಲ್ಲಿಯೂ ಮೋಡಿ: 'ರಾಮಾಯಣ'ದ ದಾಖಲೆ ಏನು ಗೊತ್ತೇ?33 ವರ್ಷಗಳ ಬಳಿಕ ಮರು ಪ್ರಸಾರದಲ್ಲಿಯೂ ಮೋಡಿ: 'ರಾಮಾಯಣ'ದ ದಾಖಲೆ ಏನು ಗೊತ್ತೇ?

  'ಬಾಲಾ' ಕೊನೆಯ ಚಿತ್ರ

  ಆಕಾಶ್ ನಾಯಕ್ ಮತ್ತು ಧೀರಜ್ ಮಿಶ್ರಾ ನಿರ್ದೇಶನದ 'ಸರೋಜಿನಿ' ಚಿತ್ರವನ್ನು ಕಾನು ಭಾಯ್ ಪಟೇಲ್ ನಿರ್ಮಿಸುತ್ತಿದ್ದಾರೆ. ದೀಪಿಕಾ ಅವರು ಆಯುಷ್ಮಾನ್ ಖುರಾನಾ, ಯಾಮಿ ಗೌತಮ್ ಮತ್ತು ಭೂಮಿ ಪೆಡ್ನೇಕರ್ ಅವರೊಂದಿಗೆ 2019ರಲ್ಲಿ 'ಬಾಲಾ' ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.

  ನಿರ್ಭಯಾ ತಾಯಿಯ ಪಾತ್ರ

  ನಿರ್ಭಯಾ ತಾಯಿಯ ಪಾತ್ರ

  ದೆಹಲಿಯಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರದಲ್ಲಿ ಮಗಳು 'ನಿರ್ಭಯಾ'ಳನ್ನು ಕಳೆದುಕೊಂಡಿರುವ ತಾಯಿ ಆಶಾ ದೇವಿಯ ಪಾತ್ರವನ್ನು ನಿರ್ವಹಿಸಬೇಕು ಎಂದು ದೀಪಿಕಾ ಇತ್ತೀಚೆಗೆ ಬಯಕೆ ವ್ಯಕ್ತಪಡಿಸಿದ್ದಾರೆ. 'ಇದು ನಟಿಸಲು ಅತ್ಯಂತ ಮಹತ್ತರವಾದ ಪಾತ್ರ. ಈ ಬಗೆಯ ಪಾತ್ರಗಳು ಎಲ್ಲ ದಿನವೂ ಬರುವುದಿಲ್ಲ. ಲಾಕ್ ಡೌನ್ ಮುಗಿದ ಬಳಿಕ ಈ ರೀತಿಯ ಪಾತ್ರಗಳನ್ನು ಮಾಡಲು ಬಯಸಿದ್ದೇನೆ' ಎಂದಿದ್ದಾರೆ.

  'ರಾಮಾಯಣ' ತಂಡ ಹೇಗಿತ್ತು?: ಅಪರೂಪದ ಫೋಟೊದ ನೆನಪು ಹಂಚಿಕೊಂಡ 'ಸೀತಾ''ರಾಮಾಯಣ' ತಂಡ ಹೇಗಿತ್ತು?: ಅಪರೂಪದ ಫೋಟೊದ ನೆನಪು ಹಂಚಿಕೊಂಡ 'ಸೀತಾ'

  ರಾಮಾಯಣದಾಚೆ ಕೆಲಸ ಬೇಕು

  ರಾಮಾಯಣದಾಚೆ ಕೆಲಸ ಬೇಕು

  'ನಾನು ಇಲ್ಲವಾದ ಮೇಲೆ ನನ್ನ ದೇಹದ ಕೆಲವು ಕೇವಲ 'ರಾಮಾಯಣ'ವಾಗಿರಬಾರದು. ಅದು ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಬೇಕು. ನಾನು ಕನ್ನಡ ಮತ್ತು ಬೆಂಗಾಳಿಯಲ್ಲಿ ಮಾಡಿರುವ ಸಿನಿಮಾಗಳೆಲ್ಲವೂ ದಾಖಲೆ ಮುರಿದಿರುವಂತಹವು.

  ನನ್ನ ತೃಪ್ತಿಗಾಗಿ ಸಿನಿಮಾ

  ನನ್ನ ತೃಪ್ತಿಗಾಗಿ ಸಿನಿಮಾ

  'ರಾಮಾಯಣ'ದಾಚೆ ನಾನು ಹಿಂದಿಯಲ್ಲಿ ಒಳ್ಳೆಯ ಪಾತ್ರಗಳನ್ನು ಮಾಡಬೇಕು. 'ರಾಮಾಯಣ'ದ ಔನ್ನತ್ಯದಲ್ಲಿ ಬದುಕಿರುವ ನನಗೆ, ನನ್ನ ತೃಪ್ತಿಗಾಗಿ ಅದನ್ನು ಮಾಡುವುದು ಮುಖ್ಯ' ಎಂದು ದೀಪಿಕಾ ಹೇಳಿದ್ದಾರೆ.

  English summary
  Dayanand Sagar's Ramayan serial Sita fame actress Dipika Chikhlia has shared first look poster of her Sarojini movie, a biopic on Sarojini Naidu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X