For Quick Alerts
  ALLOW NOTIFICATIONS  
  For Daily Alerts

  ಸಾಯುವುದಕ್ಕೂ ಹಿಂದಿನ ದಿನ ನಿರ್ಮಾಪಕನ ಜೊತೆ 15 ನಿಮಿಷ ಮಾತಾಡಿದ್ದ ಸುಶಾಂತ್!

  |

  ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮೃತಪಟ್ಟು ಸುಮಾರು ಎರಡು ತಿಂಗಳು ಕಳೆದಿದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಪೊಲೀಸರು ಎಫ್ ಐ ಆರ್ ದಾಖಲಿಸಿದ್ದರೂ, ಸಾವಿನ ಕುರಿತು ಸಾಕಷ್ಟು ಅನುಮಾನ ವ್ಯಕ್ತವಾಗಿದೆ. ಈ ಸಂಬಂಧ ಮುಂಬೈ ಪೊಲೀಸರು, ಪಾಟ್ನಾ ಪೊಲೀಸರು, ಇಡಿ ಅಧಿಕಾರಿಗಳು ಹಾಗೂ ಸಿಬಿಐ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.

  Rachita ram behind the scenes | Filmibeat Kannada

  ಸುಶಾಂತ್ ಸಿಂಗ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು, ಇದು ಆತ್ಮಹತ್ಯೆಗೆ ಪ್ರೇರೇಪಿಸಿರಬಹುದು ಎಂದು ಹೇಳಲಾಗಿದೆ. ಮತ್ತೊಂದೆಡೆ ಪ್ರೇಯಸಿ ರಿಯಾ ಚಕ್ರವರ್ತಿಯೇ ಸುಶಾಂತ್ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

  ಸುಶಾಂತ್ ಸಾವು ಅಸಾಮಾನ್ಯ, ದೇಹ ಹಳದಿ ಬಣ್ಣಕ್ಕೆ ತಿರುಗಿತ್ತು: ಆಂಬ್ಯುಲೆನ್ಸ್ ಸಹಾಯಕ ಬಿಚ್ಚಿಟ್ಟ ಸತ್

  ಹೀಗೆ, ದಿನದಿಂದ ದಿನಕ್ಕೆ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿರುವ ಸುಶಾಂತ್ ಸಿಂಗ್ ವಿಚಾರದ ಬಗ್ಗೆ ನಿರ್ಮಾಪಕ ರಮೇಶ್ ತೌರಾನಿ ಒಂದಿಷ್ಟು ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ಸುಶಾಂತ್ ಸಾಯುವುದಕ್ಕೂ ಹಿಂದಿನ ದಿನ ಫೋನ್‌ನಲ್ಲಿ 15 ನಿಮಿಷ ಮಾತನಾಡಿದ್ದಾರಂತೆ. ಏನು ಮಾತನಾಡಿದರು? ಮುಂದೆ ಓದಿ...

  ಕಾನ್ಫೆರೆನ್ಸ್ ಕಾಲ್ ಮಾಡಿದ್ದ ರಮೇಶ್!

  ಕಾನ್ಫೆರೆನ್ಸ್ ಕಾಲ್ ಮಾಡಿದ್ದ ರಮೇಶ್!

  ಜೂನ್ 14ರಂದು ಸುಶಾಂತ್ ಸಾವನ್ನಪ್ಪಿರುವ ವಿಷಯ ತಿಳಿಯಿತು. ಜೂನ್ 13 ರಂದು ಮಧ್ಯಾಹ್ನ ಸುಮಾರು 2.15 ನಿಮಿಷಕ್ಕೆ ನಿರ್ಮಾಪಕ ರಮೇಶ್ ತೌರಾನಿ ಅವರು ಸುಶಾಂತ್ ಸಿಂಗ್ ರಜಪೂತ್‌ ಬಳಿ ಫೋನ್‌ನಲ್ಲಿ ಮಾತನಾಡಿದ್ದಾರೆ. ನಿರ್ದೇಶಕ ನಿಕ್ಕಿ ಅಡ್ವಾಣಿ, ಸುಶಾಂತ್ ಸಿಂಗ್ ಹಾಗೂ ಸುಶಾಂತ್ ಮ್ಯಾನೇಜರ್ ಸಹ ಈ ಕಾನ್ಸೆರೆನ್ಸ್ ಕಾಲ್‌ನಲ್ಲಿ ಭಾಗಿಯಾಗಿದ್ದರು ಎಂದು ರಮೇಶ್ ತೌರಾನಿ ತಿಳಿಸಿದ್ದಾರೆ.

  ಸಿನಿಮಾ ಬಗ್ಗೆ ಚರ್ಚಿಸಿದ್ದ ನಿರ್ಮಾಪಕರು

  ಸಿನಿಮಾ ಬಗ್ಗೆ ಚರ್ಚಿಸಿದ್ದ ನಿರ್ಮಾಪಕರು

  'ಆರಂಭದಲ್ಲಿ ಯೋಗಕ್ಷೇಮ ವಿಚಾರಿಸಿದ ಬಳಿಕ, ನಿರ್ದೇಶಕ ನಿಕ್ಕಿ ಅಡ್ವಾಣಿ ಅವರು ಸುಶಾಂತ್ ಬಳಿ ಒಂದು ಸಣ್ಣ ಕಥೆ ವಿವರಿಸಿದರು ಎಂದು ಮಾಹಿತಿ ನೀಡಿದ್ದಾರೆ. ಅಂದ್ರೆ, ಸಾಯುವುದಕ್ಕೂ ಹಿಂದಿನ ದಿನ ಸಹ ಸುಶಾಂತ್ ಸಿಂಗ್‌ಗೆ ಹೊಸ ಸಿನಿಮಾ ಆಫರ್ ಬಂದಿದೆ. ಆ ಬಗ್ಗೆ ಮಾತುಕತೆ ಸಹ ನಡೆದಿದೆ.

  15 ನಿಮಿಷದ ಸಂಭಾಷಣೆ ಇದು

  15 ನಿಮಿಷದ ಸಂಭಾಷಣೆ ಇದು

  'ಸುಮಾರು ಹದಿನೈದು ನಿಮಿಷಗಳ ಕಾಲ ನಾವು ಫೋನ್‌ನಲ್ಲಿ ಮಾತನಾಡಿದೇವು' ಎಂದಿರುವ ರಮೇಶ್ ತೌರಾನಿ 'ವೃತ್ತಿಪರ ಫೋನ್ ಸಂಭಾಷಣೆ ಮೂಲಕ ಒಬ್ಬ ವ್ಯಕ್ತಿಯ ಭಾವನೆಯನ್ನು ಹೇಗೆ ಊಹಿಸಲು ಸಾಧ್ಯ ಎಂಬುದು ನನಗೆ ತಿಳಿದಿಲ್ಲ' ಎಂದು ಹೇಳಿದ್ದಾರೆ. 'ಸುಶಾಂತ್ ಗೆ ಕಥೆ ಇಷ್ಟವಾಗಿತ್ತು. ಹಾಗಾಗಿ, ಮಾತುಕತೆ ಪ್ರಾಥಮಿಕ ಹಂತದಲ್ಲಿತ್ತು' ಎಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ.

  ನಟನ ಬಗ್ಗೆ ಊಹಾಪೋಹ ನಿಲ್ಲಿಸಿ

  ನಟನ ಬಗ್ಗೆ ಊಹಾಪೋಹ ನಿಲ್ಲಿಸಿ

  'ರೇಸ್' ಫ್ರ್ಯಾಂಚೈಸ್ ಮತ್ತು 'ಅಜಾಬ್ ಪ್ರೇಮ್ ಕಿ ಗಜಾಬ್ ಕಹಾನಿ' ನಂತಹ ಚಲನಚಿತ್ರಗಳನ್ನು ನಿರ್ಮಿಸಿರುವ ತೌರಾನಿ ಸುಶಾಂತ್ ಅವರ ಸಾವಿನ ಕುರಿತು ಊಹಾಪೋಹಗಳನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ. 'ಉದ್ಯಮದ ಬಗ್ಗೆ ಮತ್ತು ಅವರ ಜೊತೆಗಾರರ ಬಗ್ಗೆ ತಪ್ಪಾಗಿ ತಿಳಿಯುವ ಬದಲು, ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಳ್ಳುವುದು ಅಗತ್ಯ. ಅಧಿಕಾರಿಗಳು ಅಗತ್ಯ ತನಿಖೆ ಮಾಡಲಿ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ನಾನು ಪ್ರಾರ್ಥಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.

  English summary
  Producer Ramesh Taurani REVEALS he had offered a film to Sushant Singh Rajput just a day before his tragic death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X