»   » ಕಂಗನಾ-ಹೃತಿಕ್ ಜಗಳದಿಂದ ಬಾಲಿವುಡ್ ನಟನ ಅಫೇರ್ ಸುದ್ದಿ ಬಹಿರಂಗ.!

ಕಂಗನಾ-ಹೃತಿಕ್ ಜಗಳದಿಂದ ಬಾಲಿವುಡ್ ನಟನ ಅಫೇರ್ ಸುದ್ದಿ ಬಹಿರಂಗ.!

Posted By:
Subscribe to Filmibeat Kannada

ಬಾಲಿವುಡ್ ನಟಿ ಕಂಗನಾ ರನೌತ್ ಮತ್ತು ನಟ ಹೃತಿಕ್ ರೋಷನ್ ನಡುವಿನ ಮಹಾಸಮರಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಹೃತಿಕ್ ಜೊತೆ ನನಗೆ ಆಪ್ತ ಸಂಬಂಧವಿತ್ತು ಎಂದು ಆರೋಪಿಸಿರುವ ಕಂಗನಾ ಬಗ್ಗೆ ಹೊಸದೊಂದು ಸಂಬಂಧ ಬಯಲಾಗಿದೆ.

ಹೌದು, ಇಷ್ಟು ದಿನ ಹೃತಿಕ್ ಮತ್ತು ಕಂಗನಾ ಮಧ್ಯೆ ಇದ್ದ ಸಂಬಂಧದ ಬಗ್ಗೆ ಚರ್ಚೆಯಾಗುತ್ತಿತ್ತು. ಅದಕ್ಕೆ ಸಂಬಂಧಪಟ್ಟಂತೆ ಹೃತಿಕ್ ರೋಷನ್ ಅವರಿಂದ ಕಂಗನಾ ಅವರ ಖಾಸಗಿ ಇ-ಮೇಲ್ ಲೀಕ್ ಆಗಿತ್ತು. ಈ ಇ-ಮೇಲ್ ನಲ್ಲಿ ಕಂಗನಾಗೆ ಮತ್ತೊಬ್ಬ ನಟನ ಜೊತೆ ಸಂಬಂಧ ಇರಬಹುದು ಎಂಬ ಅನುಮಾನಕ್ಕೆ ಕಾರಣವಾಗಿದೆ.

ಯಾರು ಆ ನಟ? ಇ-ಮೇಲ್ ನಲ್ಲಿ ಎನಿದೆ? ಎಂಬುದನ್ನ ಪೂರ್ತಿ ತಿಳಿಯಲು ಮುಂದೆ ಓದಿ.....

ಕಂಗನಾ-ಹೃತಿಕ್ ಜಗಳಕ್ಕೆ ಮತ್ತೊಬ್ಬ ನಟನ ಎಂಟ್ರಿ

ಕ್ವೀನ್ ನಟಿ ಕಂಗನಾ ಮತ್ತು ಹೃತಿಕ್ ರೋಷನ್ ಇಬ್ಬರ ವೈಯಕ್ತಿಕ ಜಗಳದಲ್ಲಿ ಬಾಲಿವುಡ್ ಲವರ್ ಬಾಯ್ ಇಮೇಜ್ ನ ರಣ್ಬೀರ್ ಕಪೂರ್ ಹೆಸರು ಹೊರ ಬಂದಿದೆ.

ಕಂಗನಾ ಆರೋಪಕ್ಕೆ ಹೃತಿಕ್ ತಿರುಗೇಟು: 'ಕ್ವೀನ್' ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗ.!

ಕಂಗನಾ ಜೊತೆ ಅಫೇರ್ ಬಯಸಿದ್ದರಂತೆ ರಣ್ಬೀರ್

ನಟ ಹೃತಿಕ್ ರೋಷನ್ ಪರಿಚಯವಾಗುವುದಕ್ಕು ಮುಂಚೆ ನಟ ರಣ್ಬೀರ್ ಕಪೂರ್ ಜೊತೆ ಕಂಗನಾ ಅವರಿಗೆ ಸ್ನೇಹವಿತ್ತಂತೆ. ಈ ಸ್ನೇಹದ ಸಲುಗೆಯಿಂದ ರಣ್ಬೀರ್ ಕಪೂರ್ ಕಂಗನಾ ಜೊತೆ ದೈಹಿಕ ಸಂಬಂಧದ ಬಯಕೆ ಇಟ್ಟಿದ್ದರು ಎಂಬ ಸ್ಪೋಟಕ ಮಾಹಿತಿ ಈಗ ಇ-ಮೇಲ್ ನಿಂದ ಬಯಲಾಗಿದೆ ಎಂದು ವರದಿಯಾಗಿದೆ.

ಕಂಗನಾ, ಹೃತಿಕ್ ಗೆ ಕಳುಹಿಸಿದ್ದ ಇ-ಮೇಲ್ ನಲ್ಲಿ ಬಹಿರಂಗ

ನಟ ಹೃತಿಕ್ ಗೆ, ಕಂಗನಾ ಕಳುಹಿಸಿದ್ದ ಇ-ಮೇಲ್ ನಲ್ಲಿ ಈ ಸುದ್ದಿ ಲೀಕ್ ಆಗಿದ್ದು, '' ಕ್ವೀನ್‌ ಚಿತ್ರಕ್ಕಿಂತ ಮೊದಲು ರಣಬೀರ್‌ ನನ್ನತ್ತ ಗಮನವೇ ಹರಿಸಿರಲಿಲ್ಲ. ಯಾವಾಗ ಕ್ವೀನ್‌ ಚಿತ್ರ ಬಂತೋ ಆತ ನನ್ನ ಸಂಪರ್ಕಿಸಿದ. ನನಗೆ ಫಂಕಿ ಮೆಸೇಜ್‌ ಹಾಗೂ ವೀಡಿಯೋಗಳನ್ನು ಕಳುಹಿಸಲಾರಂಭಿಸಿದ'' ಎಂದು ರಣ್ಬೀರ್ ಬಗ್ಗೆ ಹೇಳಿಕೊಂಡಿದ್ದಾರೆ.

ಹೃತಿಕ್ ರೋಷನ್ ಬಗ್ಗೆ ಬೆಚ್ಚಿಬೀಳಿಸುವ ಸಂಗತಿ ಬಿಚ್ಚಿಟ್ಟ ಕಂಗನಾ

ದೈಹಿಕ ಸಂಬಂಧ ಬಯಸಿದ್ದರಂತೆ ರಣ್ಬೀರ್

''ನಾನು ಗ್ವಾಲಿವರ್ ನಲ್ಲಿ ರಿವಾಲ್ವರ್ ಶೂಟಿಂಗ್ ನಲ್ಲಿರುವಾದ ನನ್ನ ಜತೆ ಸಂಬಂಧ ಬಯಸುವುದಾಗಿ ಒಂಥರಾ ನೇರವಾಗಿ ಹೇಳಿದ. ಆಗ ನಾನು ಒಬ್ಬರ ಜತೆ ಲವ್‌ನಲ್ಲಿರುವುದ ಕುರಿತು ಹೇಳಿದೆ. ನಂತರ ನಾನು ನ್ಯೂಯಾರ್ಕ್‌ಗೆ ಶೂಟಿಂಗ್ ಗೆ ಹೋದಾಗ ನ್ಯೂಯಾರ್ಕ್‌ ಹೇಗಿದೆ? ಎಂದು ಮೆಸೇಜ್‌ ಮಾಡಿದ, ಹೀಗೆ ಮತ್ತೆ ಸಂಪರ್ಕಕ್ಕೆ ಬಂದ. ನಾನು ಆತನಲ್ಲಿ ದೈಹಿಕ ಸಂಬಂಧ ಬಯಸುತ್ತಿದ್ದೀಯಾ? ಎಂದು ಕೇಳಿದೆ. ಆತ ಮತ್ತಷ್ಟು ಹತ್ತಿರವಾದ, ನಿರಂತರ ಸಂಬಂಧ ಇದ್ದರೆ ಹೇಗೆ? ಎಂದು ಆತ ಕೇಳಿದಾಗ ನಾನು ಒಬ್ಬರನ್ನು ಪ್ರೀತಿಸುತ್ತಿದ್ದೇನೆ, ಆ ವ್ಯಕ್ತಿಗೆ ಬೇಜಾರು ಆಗುತ್ತದೆ ಎಂದು ಹೇಳಿದೆ'' ಎಂದು ಮೇಲ್ ಮಾಡಿದ್ದಾರಂತೆ.

ಲವರ್ ಬಾಯ್ ಮತ್ತೊಂದು ಲವ್ ಕಹಾನಿ

ಈಗಾಗಲೇ, ದಿಪೀಕಾ ಪಡುಕೋಣೆ ಜೊತೆ ಸುತ್ತಾಡಿ, ಕತ್ರಿನಾಗೋಸ್ಕರ ದಿಪೀಕಾಳನ್ನ ಬಿಟ್ಟಿದ್ದರು. ಈಗ ಕತ್ರಿನಾ ಕೈಪ್ ರನ್ನ ಕೂಡ ಬಿಟ್ಟು ಪಾಕಿಸ್ತಾನಿ ನಟಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ರಣ್ಬೀರ್ ಕಪೂರ್.

English summary
Bollywood stars Hrithik Roshan and Kangana Ranaut's legal battle has now started a lot of uninvited attention, all thanks to the recently-leaked emails. Latest to join the league is Ranbir Kapoor.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X