For Quick Alerts
  ALLOW NOTIFICATIONS  
  For Daily Alerts

  ಪಾತ್ರಕ್ಕಾಗಿ 18 ಕೆಜಿ ತೂಕ ಇಳಿಸಿಕೊಂಡ ನಟ ಹೂಡಾ

  By ಜೇಮ್ಸ್ ಮಾರ್ಟಿನ್
  |

  ಸಲ್ಮಾನ್ ಖಾನ್ ಅಭಿನಯದ 'ಕಿಕ್' ಚಿತ್ರದಲ್ಲಿ ಖಡಕ್ ಪೊಲೀಸ್ ಕಾಪ್ ಪಾತ್ರಗಳಲ್ಲಿ ರಣದೀಪ್ ಹೂಡಾರನ್ನು ಸಿನಿರಸಿಕರು ನೋಡಿರುತ್ತಾರೆ. ಈಗ ಹೂಡಾ ತನ್ನ ಪಾತ್ರಕ್ಕಾಗಿ ತ್ವರಿತಗತಿಯಲ್ಲಿ ದೇಹ ತೂಕವನ್ನು ಇಳಿಸಿಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

  ಐಶ್ವರ್ಯಾ ರೈ ಬಚ್ಚನ್ ಜೊತೆ ಸರ್ಬಜಿತ್ ಸಿಂಗ್ ಪಾತ್ರಧಾರಿಯಾಗಿ ನಟಿಸುತ್ತಿರುವ ಹೂಡಾ ಅವರು ಪಾಕಿಸ್ತಾನದ ಜೈಲಿನಲ್ಲಿ ಬಡಕಲು ದೇಹದ ಕೈದಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರಕ್ಕಾಗಿ 28 ದಿನಗಳಲ್ಲಿ 18 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ.

  ಇತ್ತೀಚಿಗೆ 'ದೋ ಲಫ್ಜೋ ಕಿ ಕಹಾನಿ' ಚಿತ್ರಕ್ಕಾಗಿ 94 ಕೆಜಿ ತೂಕ ದೇಹ ಬೆಳೆಸಿಕೊಂಡಿದ್ದ ರಣದೀಪ್ ಅವರು ಈಗ 66ಕೆಜಿ ತೂಗುವ ರೈತ ಸರ್ಬಜಿತ್ ಪಾತ್ರ ನಿರ್ವಹಿಸುತ್ತಿದ್ದಾರೆ.['ಭರ್ಜರಿ'ಗಾಗಿ 25 ಕೆಜಿ ತೂಕ ಕಳೆದುಕೊಂಡ ಧ್ರುವ ಸರ್ಜಾ]

  ರಣದೀಪ್ ಹೂಡಾ ಅವರ ಬಗ್ಗೆ ಮಾತನಾಡಿದ ನಿರ್ದೇಶಕ ಓಮಂಗ್ ಕುಮಾರ್, ರಣದೀಪ್ ಅವರನ್ನು ಈ ಪಾತ್ರಕ್ಕಾಗಿ ಆಯ್ಕೆ ಮಾಡಿದಾಗ ನನಗೆ ಈ ಪಾತ್ರಕ್ಕೆ ಅವರ ತಯಾರಿ ಬಗ್ಗೆ ಸ್ಪಷ್ಟತೆ ಇತ್ತು. ಅದಕ್ಕೆ ತಕ್ಕಂತೆ ಹೂಡಾ ಅವರು ತಯಾರಿ ನಡೆಸಿದ್ದಾರೆ.

  ಭಾರತ ಮೂಲದ ರೈತ ಸರಬ್ಜಿತ್ ಸಿಂಗ್ ಅವರನ್ನು ಭಯೋತ್ಪಾದನೆ ಹಾಗೂ ಗೂಢಚಾರಿಕೆ ಆರೋಪದ ಮೇಲೆ ಪಾಕಿಸ್ತಾನ ಬಂಧಿಸಿತ್ತು. ನಂತರ ಲಾಹೋರ್ ನ ಜೈಲಿನಲ್ಲಿ ಸಹ ಕೈದಿಗಳು ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು. ಇದರ ಪರಿಣಾಮ 2013ರ ಏಪ್ರಿಲ್ ತಿಂಗಳಿನಲ್ಲಿ ಮೃತಪಟ್ಟರು. ಈ ನೈಜ ಜೀವನ ಕಥೆ ಆಧಾರಿತ ಚಿತ್ರವನ್ನು ಓಮಂಗ್ ಕುಮಾರ್ ನಿರ್ದೇಶಿಸುತ್ತಿದ್ದಾರೆ.

  English summary
  This is just unbelievable! Randeep Hooda has lost 18 kg in just 28 days for his upcoming film Sarbjit in which he is starring alongside Aishwarya Rai Bachchan. Randeep posted images from his movie Do Lafzon Ki Kahani where he was 94 kgs, but now he weighs just 66 kgs for his role of farmer in Sarbjit.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X