Don't Miss!
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Automobiles
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
- Sports
IND vs NZ: 2ನೇ ಟಿ20 ಪಂದ್ಯದಲ್ಲಿ ಕಳಪೆ ಪಿಚ್ ನಿರ್ಮಾಣ; ಲಕ್ನೋ ಪಿಚ್ ಕ್ಯುರೇಟರ್ ವಜಾ
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- News
ವಾರಕ್ಕೊಮ್ಮೆ ದೆಹಲಿಗೆ ಓಡುವ ಸಿಎಂಗೆ ಫ್ರೀಡಂ ಪಾರ್ಕ್ಗೆ ಬರುವ ತಾಳ್ಮೆ ಇಲ್ಲವೇ? ಕಾಂಗ್ರೆಸ್ ಪ್ರಶ್ನೆ
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಏನೇನೂ ಇಲ್ಲ ಎಂದ ರಾಣಿ; ಕಾರ್ ಗಿಫ್ಟ್ ಕೊಟ್ಟ ಆದಿತ್ಯ
ಹೌದು, ಮಾಧ್ಯದವರು ಕೇಳಿದರೆ ತಮ್ಮ ನಡುವೆ ಏನೇನೂ ಇಲ್ಲ ಎನ್ನುವ ರಾಣಿ ಹಾಗೂ ಆದಿತ್ಯ, ಎಲ್ಲವನ್ನೂ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೆ. ಅಂದರೆ ಒಟ್ಟೊಟ್ಟಿಗೆ ಓಡಾಡುವುದು, ಜಾಲಿ ಟ್ರಿಪ್ ಹಾಗೂ ಕುಟುಂಬದೊಂದಿಗೂ ವಿದೇಶಕ್ಕೆ ಪ್ರಯಾಣ ಬೆಳೆಸುವುದು ಇತ್ಯಾದಿ ಇತ್ಯಾದಿಗಳ ಪಟ್ಟಿಯೇ ಇದೆ.
ತೀರಾ ಇತ್ತೀಚಿಗೆ ರಾಣಿ ಮುಖರ್ಜಿ ಬಾಯ್ ಫ್ರಂಡ್ ಆದಿತ್ಯ, ರಾಣಿಗೆ ದುಬಾರಿ ಗಿಫ್ಟ್ ನೀಡಿದ್ದಾರೆ. ಅದು ಲಕ್ಷುರಿಯಸ್ 'ಆಡಿ' ಕಾರು. ಸುಮಾರು ಒಂದುವರೆ ಕೋಟಿ ರು. ಬೆಲೆಬಾಳುವ ಈ ಕಾರನ್ನು ಆದಿತ್ಯ ರಾಣಿಗೆ ಗಿಫ್ಟ್ ಕೊಟ್ಟಿದ್ದಾರೆ. ಈ ಬಗ್ಗೆ ಕೇಳಿದರೆ "ಹೌದು ಕೊಟ್ಟಿದ್ದೇನೆ, ಹಾಗೇ ಸುಮ್ಮನೆ ಅಂದು ಬಿಡೋದೆ..! ಸುಮ್ಮನೇ ಕೊಡುವುದಾದರೆ ನಮಗೂ ಕೊಟ್ಟುಬಿಡಿ ಅನ್ನೋಕಾಗುತ್ಯೇ..?
ಸಾಕಷ್ಟು ವರ್ಷಗಳಿಂದಲೂ ಈ ಜೋಡಿ ನಮ್ಮ ನಡುವೆ ಏನೇನೂ ಇಲ್ಲ ಎನ್ನುತ್ತಲೇ ಓಡಾಡುತ್ತಿದ್ದಾರೆ. ಆದಿತ್ಯ ಆಗಾಗ ರಾಣಿಗೆ ಗಿಫ್ಟ್ ಕೊಡುವುದು, ರಾಣಿ ತೆಗೆದುಕೊಂಡು ಖುಷಿ ಪಡುವುದು ನಡೆಯುತ್ತಲೇ ಇದೆ. ಆದರೆ ಮಾಧ್ಯಮದವರಿಗೆ ಚಳ್ಳೆಹಣ್ಣು ತಿನ್ನಿಸುವ ಅವರ ಪ್ರಯತ್ನವೂ ಸಾಗಿದೆ. ಆದರೆ, ಇಂತಹ ಅದೆಷ್ಟೋ ಪ್ರಣಯ ಪಕ್ಷಿಗಳನ್ನು ನೋಡಿರುವ ಮಾಧ್ಯಮ ಹಾಗೂ ಬಾಲಿವುಡ್ ಅಂಗಳ ಈ ಜೋಡಿಯ ಕಳ್ಳಾಟಕ್ಕೆ ಮುಸಿಮುಸಿ ನಗುತ್ತಿದೆ.
ಆಡಿ ಕಾರ್ ಕೊಟ್ಟು ಸುಮ್ಮನೆ ಕೊಟ್ಟೇ ಅಂತ ಆದಿತ್ಯ ಅಂದುಬಿಟ್ಟರೆ ಯಾರಿಗೂ ಗೊತ್ತಾಗಲ್ವೇ? ಎಲ್ಲರಿಗೂ ಅರ್ಥವಾಗಿತ್ತಿದೆ. ರಾಣಿಗೆ ಈಗ ಹೇಳಿಕೊಳ್ಳುವಂತಹ ಅವಕಾಶಗಳಿಲ್ಲ. ಆದಿತ್ಯ ಅಂತೂ ಬಿಸಿನೆಸ್ ಮನ್. ರಾಣಿ ಫ್ರೀ ಆದಷ್ಟು ಅವರಿಗೆ ಸಂತೋಷ ಹೆಚ್ಚು. ನವೆಂಬರ್ 30, 2012 ಕ್ಕೆ ಬಿಡುಗಡೆಯಾಗಲಿರುವ ಅಮೀರ್ ಖಾನ್ 'ತಲಾಶ್' ನಾಯಕಿಯರಲ್ಲಿ ಈ ರಾಣಿಯೂ ಒಬ್ಬರು. ಒಟ್ಟಿನಲ್ಲಿ ಮದುವೆ ಯಾವಾಗ ಎಂಬುದಷ್ಟೇ ಉಳಿದಿರುವ ಪ್ರಶ್ನೆ! (ಏಜೆನ್ಸೀಸ್)