»   » ಫೋಟೋ ನೋಡಿ: ಅಲಾವುದ್ದೀನ್ ಖಿಲ್ಜಿ ಆದ ರಣ್ವೀರ್ ಸಿಂಗ್

ಫೋಟೋ ನೋಡಿ: ಅಲಾವುದ್ದೀನ್ ಖಿಲ್ಜಿ ಆದ ರಣ್ವೀರ್ ಸಿಂಗ್

Posted By:
Subscribe to Filmibeat Kannada

ಬಾಲಿವುಡ್ ನಲ್ಲಿ ಸದ್ಯ ಎಲ್ಲಿ ನೋಡಿದರೂ 'ಪದ್ಮಾವತಿ' ಸಿನಿಮಾದ್ದೇ ಸುದ್ದಿ. ಈ ಚಿತ್ರದ ಒಂದೊಂದು ಪಾತ್ರದ ಲುಕ್ ರಿಲೀಸ್ ಆದಾಗಲೂ ಎಲ್ಲರೂ ಬೆರಗುಗಣ್ಣಿನಿಂದ ಅದನ್ನು ನೋಡುತ್ತಿದ್ದಾರೆ. ಅದೇ ರೀತಿ ಇದೀಗ ನಟ ರಣ್ವೀರ್ ಸಿಂಗ್ ಲುಕ್ ಕೂಡ ರಿಲೀಸ್ ಆಗಿದೆ.

ಬಾಲಿವುಡ್ ನಟ ಶಾಹಿದ್ ಕಪೂರ್ ಹೆಸರು ಬದಲಿಸಿಕೊಂಡಿದ್ದು ಯಾಕೆ?

'ಪದ್ಮಾವತಿ' ಸಿನಿಮಾದಲ್ಲಿ ಅಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣ್ವೀರ್ ಸಿಂಗ್ ನಟಿಸಿದ್ದಾರೆ. ಅವರ ಫಸ್ಟ್ ಲುಕ್ ವಾವ್.. ಎನ್ನುವ ಹಾಗಿದೆ. ದೀಪಿಕಾ ಪಡುಕೋಣೆ ಮತ್ತು ಶಾಹಿದ್ ಕಪೂರ್ ಬಳಿಕ ಈಗ ರಣ್ವೀರ್ ಸಿಂಗ್ ಅವರ ಅಲಾವುದ್ದೀನ್ ಖಿಲ್ಜಿ ಲುಕ್ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಅಂದಹಾಗೆ, 'ಪದ್ಮಾವತಿ' ಚಿತ್ರದ ತಮ್ಮ ಫಸ್ಟ್ ಲುಕ್ ಪೋಸ್ಟರ್ ನ ರಣ್ವೀರ್ ಸಿಂಗ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

ದೀಪಿಕಾ ಪಡುಕೋಣೆ 'ಪದ್ಮಾವತಿ' ಚಿತ್ರದ ಫಸ್ಟ್ ಲುಕ್ ಬಿಡುಗಡೆ

Ranveer Singh's 'Padmavati' movie look released

'ಪದ್ಮಾವತಿ' ಸಿನಿಮಾ ರಣ್ವೀರ್ ಸಿಂಗ್ ಅವರಿಗೆ ಸಖತ್ ವಿಶೇಷವಾಗಿದೆ. 'ರಾಮ್ ಲೀಲಾ' ಮತ್ತು 'ಬಾಜೀರಾವ್ ಮಸ್ತಾನಿ' ಚಿತ್ರಗಳ ಬಳಿಕ ಮತ್ತೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ#mce_temp_url#, ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಇಲ್ಲಿ ಒಂದಾಗಿದ್ದಾರೆ. ಚಿತ್ರದಲ್ಲಿ ಅದಿತಿ ರಾವ್ ಹೈದರಿ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, 'ಪದ್ಮಾವತಿ' ಸಿನಿಮಾ ಡಿಸೆಂಬರ್ 1ಕ್ಕೆ ದೇಶದಾದ್ಯಂತ ಬಿಡುಗಡೆ ಆಗಲಿದೆ.

English summary
Ranveer Singh as Padmavati's Alauddin Khilji. Take a look at the picture.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada