For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬು ಮತ್ತು ನಮ್ರತಾ ದಂಪತಿಯ ರೊಮ್ಯಾಂಟಿಕ್ ಫೋಟೋ ನೋಡಿ ರಣ್ವೀರ್ ಸಿಂಗ್ ಹೇಳಿದ್ದೇನು?

  By ಫಿಲ್ಮ್ ಡೆಸ್ಕ್
  |

  ಟಾಲಿವುಡ್ ನ ಸ್ಟಾರ್ ಜೋಡಿ ಮಹೇಶ್ ಬಾಬು ಮತ್ತು ನಮ್ರತಾ ದಂಪತಿಗೆ ಇಂದು ಮದುವೆ ವಾರ್ಷಿಕೋತ್ಸವ ಸಂಭ್ರಮ. ಈ ಜೋಡಿ 16ನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಟಾಲಿವುಡ್ ಸ್ಟಾರ್ ಜೋಡಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಸ್ನೇಹಿತರು ಶುಭಾಶಯ ತಿಳಿಸುತ್ತಿದ್ದಾರೆ.

  ಈ ಸಂಭ್ರಮ, ಸಂತಸವನ್ನು ನಟ ಮಹೇಶ್ ಬಾಬು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪತ್ನಿಯ ಜೊತೆ ಇರುವ ರೊಮ್ಯಾಂಟಿಕ್ ಫೋಟೋವನ್ನು ಶೇರ್ ಮಾಡಿ, ಹೃದಯಸ್ಪರ್ಶಿ ಸಂದೇಶ ರವಾನಿಸಿದ್ದಾರೆ. ಪತ್ನಿಗೆ ಚುಂಬಿಸುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಮಹೇಶ್ ಬಾಬು ದಂಪತಿ: ಎಂದೆಂದಿಗೂ ನಿನ್ನೊಂದಿಗಿರುವೆ ಎಂದ ಪ್ರಿನ್ಸ್

  ವಿಶೇಷ ಎಂದರೇ ಮಹೇಶ್ ಬಾಬು ದಂಪತಿಯ ರೊಮ್ಯಾಂಟಿಕ್ ಫೋಟೋ ನೋಡಿ ಬಾಲಿವುಡ್ ಸ್ಟಾರ್ ನಟ ರಣ್ವೀರ್ ಸಿಂಗ್ ಸಹ ಪ್ರತಿಕ್ರಿಯೆ ನೀಡಿದ್ದಾರೆ.

  ಮಹೇಶ್ ಬಾಬು ಶೇರ್ ಮಾಡಿರುವ ಇನ್ಸ್ಟಾಗ್ರಾಮ್ ಫೋಟೋಗೆ ಕಾಮೆಂಟ್ ಮಾಡಿರುವ ರಣ್ವೀರ್ ಸಿಂಗ್ ಹಾರ್ಟ್ ಇಮೋಜಿ ಹಾಕಿ ಪ್ರೀತಿ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಮಹೇಶ್ ಬಾಬು ಮತ್ತು ಕಣ್ವೀರ್ ಸಿಂಗ್ ನಡುವೆ ಉತ್ತಮವಾದ ಸ್ನೇಹ ಬಾಂಧವ್ಯವಿದೆ.

  ಇತ್ತೀಚಿಗಷ್ಟೆ ಇಬ್ಬರು ಜಾಹೀರಾತು ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಫೋಟೋ ಶೇರ್ ಮಾಡುವ ಮಾಡಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದರು. ಇಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರಾ ಎಂದು ಕುತೂಹಲದಿಂದ ಕಾಯುತ್ತಿದ್ದರೆ. ಆದರೆ ಜಾಹೀರಾತು ಎನ್ನುವುದು ಬಳಿಕ ರಿವೀಲ್ ಆಯಿತು.

  ಮಹೇಶ್ ಬಾಬು ಮತ್ತು ರಣ್ವೀರ್ ಸಿಂಗ್ ಇಬ್ಬರು ಸಹ ಒಟ್ಟಿಗೆ ಕೆಲಸ ಮಾಡಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದರು. ಇದೀಗ ಮತ್ತೆ ಮಹೇಶ್ ಬಾಬು ಬಗ್ಗೆ ಪ್ರೀತಿ ವ್ಯಕ್ತಪಡಿಸಿದ್ದಾರೆ. ರಣ್ವೀರ್ ಸಿಂಗ್ ಕಾಮೆಂಟ್ ಗೆ ಮಹೇಶ್ ಬಾಬು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  'ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ನಮ್ರಾತಾ. ಎಂದೆಂದಿಗೂ ನಿನ್ನೊಂದಿಗೆ ಇರುವೆ' ಎಂದು ಬರೆದುಕೊಂಡು ಹಾರ್ಟ್ ಇಮೋಜಿ ಹಾಕಿದ್ದಾರೆ. ಜೊತೆಗೆ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿದ್ದಾರೆ.

  ಮಹೇಶ್ ಬಾಬು ಮತ್ತು ನಮ್ರತಾ ಅವರದ್ದು ಪ್ರೇಮ ವಿವಾಹ. 2000ರಲ್ಲಿ ಸಿನಿಮಾ ಸೆಟ್ ನಲ್ಲಿ ಭೇಟಿಯಾದ ಮಹೇಶ್ ಬಾಬು ಮತ್ತು ನಮ್ರತಾ ಇಬ್ಬರು ಉತ್ತಮ ಸ್ನೇಹಿತರಾಗಿದ್ದರು. ನಂತರ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿ ಬಳಿಕ 2005ರಲ್ಲಿ ವಿವಾಹಬಂಧನಕ್ಕೆ ಒಳಗಾಗಿದ್ದಾರೆ.

  ಸಲ್ಮಾನ್ ಖಾನ್ ಗೋಸ್ಕರ ದೇಶಬಿಟ್ಟು ಬಂದಿದ್ದ ನಟಿ | Filmibeat Kannada

  ಮಹೇಶ್ ಬಾಬು ಮತ್ತು ನಮ್ರತಾ ಇಬ್ಬರು ಸಂತೋಷದ ಜೀವನ ಸಾಗಿಸುತ್ತಿದ್ದಾರೆ. ಟಾಲಿವುಡ್ ನ ಮುದ್ದಾದ ದಂಪತಿಗೆ ಸಿತಾರಾ ಮತ್ತು ಗೌತಮ್ ಇಬ್ಬರು ಮಕ್ಕಳಿದ್ದಾರೆ. ಮಗಳು ಸಿತಾರಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ತನ್ನದೆ ಆದ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದಾರೆ.

  English summary
  Bollywood actor ranveer singh wedding anniversary wishes to Mahesh Babu couples.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X