For Quick Alerts
  ALLOW NOTIFICATIONS  
  For Daily Alerts

  ಪದೇ ಪದೇ ಸುದ್ದಿಯಾಗುತ್ತಿರುವ ಶ್ರೀದೇವಿ ಮಗಳು: ಯಾಕೆ?

  |
  ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಪದೇ ಪದೇ ಇಷ್ಟು ಸುದ್ದಿಯಾಗ್ತಿರೋದ್ಯಾಕೆ? | FILMIBEAT KANNADA

  ಬಾಲಿವುಡ್ ಎವರ್ ಗ್ರೀನ್ ನಟಿ ಶ್ರೀದೇವಿ ಪುತ್ರಿ ಸಿನಿಮಾ ವಿಚಾರಕ್ಕಿಂತ ಖಾಸಗಿ ವಿಷ್ಯಗಳಿಂದ ಪದೇ ಪದೇ ಸುದ್ದಿಯಾಗುತ್ತಿದ್ದಾರೆ. ಜಿಮ್, ಪಾರ್ಟಿ, ಅವಾರ್ಡ್ ಕಾರ್ಯಕ್ರಮ, ಫ್ರೆಂಡ್ಸ್ ಹೀಗೆ ಎಲ್ಲೇ ಹೋದರು ಒಂದಲ್ಲ ಒಂದು ಸುದ್ದಿಯಿಂದ ಗಮನ ಸೆಳೆಯುತ್ತಾರೆ.

  ದಡಕ್ ಸಿನಿಮಾದ ಬಳಿಕ ಕರಣ್ ಜೋಹರ್ ನಿರ್ಮಾಣದಲ್ಲಿ ಬರುತ್ತಿರುವ ತಖ್ತ್ ಎಂಬ ಐತಿಹಾಸಿಕ ಚಿತ್ರದಲ್ಲಿ ನಟಿಸುತ್ತಿರುವ ಜಾಹ್ನವಿ ಕಪೂರ್, ರಾಜ್ ಕುಮಾರ್ ರಾವ್ ಜೊತೆ ಒಂದು ಸಿನಿಮಾ ಮಾಡುತ್ತಿದ್ದಾರೆ. ಇದನ್ನ ಬಿಟ್ಟರೇ ಸಿನಿಮಾಗಿಂತ ಬೇರೆ ವಿಷ್ಯಗಳಲ್ಲೇ ಸುದ್ದಿಯಲ್ಲಿದ್ದಾರೆ.

  ಶ್ರೀದೇವಿ ಪುತ್ರಿಯ ಪಿಂಕ್ ಡ್ರೆಸ್ ನೋಡಿ ಕಾಲೆಳೆಯುತ್ತಿದ್ದಾರೆ ನೆಟ್ಟಿಗರು

  ಶ್ರೀದೇವಿ ಮಗಳ ಮೆಚ್ಚುಗೆ ಗಳಿಸಿಕೊಂಡಿದ್ದಕ್ಕಿಂತ ಟ್ರೋಲ್ ಆಗಿದ್ದೆ ಹೆಚ್ಚು. ಆದರೆ, ಇತ್ತೀಚಿನ ದಿನಗಳಲ್ಲಿ ಜಾಹ್ನವಿ ಪಾಸಿಟೀವ್ ವಿಚಾರಕ್ಕೆ ಹಡ್ ಲೈನ್ ಆಗಿದ್ದಾರೆ. ಅಷ್ಟಕ್ಕೂ, ಜಾಹ್ನವಿ ಕಪೂರ್ ಚರ್ಚೆಯಾಗುತ್ತಿರುವುದೇಕೆ? ಯಾವುದು ಆ ವಿಷ್ಯಗಳು? ಮುಂದೆ ಓದಿ....

  ಪಿಂಕ್ ಡ್ರೆಸ್ ನಲ್ಲಿ ಸಖತ್ ಹಾಟ್

  ಪಿಂಕ್ ಡ್ರೆಸ್ ನಲ್ಲಿ ಸಖತ್ ಹಾಟ್

  ಗ್ರಾಜಿಯಾ ಮಿಲೇನಿಯಲ್ ಅವಾರ್ಡ್ಸ್ 2019 ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಾಹ್ನವಿ ಕಪೂರ್ ಪಿಂಕ್ ಬಣ್ಣದ ಡ್ರೆಸ್ ನಲ್ಲಿ ಮಿಂಚಿದ್ದಾರೆ. ಇದೀಗ, ಶ್ರೀದೇವಿ ಮಗಳು ತೊಟ್ಟಿದ್ದ ಬಟ್ಟೆ ಎಲ್ಲರ ಕಣ್ಣು ಕುಕ್ಕುತ್ತಿದೆ. ಫಾರ್ಮಲ್ಸ್ ಕೋಟ್ ತೊಟ್ಟಿರುವ ಜಾಹ್ನವಿ ಲುಕ್ ಸಖತ್ ಹಾಟ್ ಆಗಿದೆ.

  ಶ್ರೀದೇವಿ ಮಗಳಿಗೆ ಈ ಸೌತ್ ಸ್ಟಾರ್ ಜೊತೆ ನಟಿಸೋ ಆಸೆಯಂತೆ

  ಬೆಲ್ಲಿ ಡ್ಯಾನ್ಸ್ ಮಾಡಿದ್ದ ಜಾಹ್ನವಿ

  ಬೆಲ್ಲಿ ಡ್ಯಾನ್ಸ್ ಮಾಡಿದ್ದ ಜಾಹ್ನವಿ

  ಎರಡ್ಮೂರು ದಿನಗಳ ಹಿಂದೆ ಜಾಹ್ನವಿ ಕಪೂರ್ ಡ್ಯಾನ್ಸ್ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ತುಂಡುಡುಗೆ ತೊಟ್ಟಿದ್ದ ಜಾಹ್ನವಿ, ಬೆಲ್ಲಿ ಡ್ಯಾನ್ಸ್ ಮಾಡಿದ್ದರು. ಈ ಬೆಲ್ಲಿ ಡ್ಯಾನ್ಸ್ ವಿಡಿಯೋ ಎಲ್ಲರಿಂದಲೂ ಮೆಚ್ಚುಗೆ ಗಳಿಸಿಕೊಂಡಿತ್ತು.

  ಇಶಾನ್ ಜೊತೆ ಪಾರ್ಟಿ

  ಇಶಾನ್ ಜೊತೆ ಪಾರ್ಟಿ

  ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಈ ಪಾರ್ಟಿಗೆ ಶ್ರೀದೇವಿ ಪುತ್ರಿ ಮತ್ತು ದಡಕ್ ಸಿನಿಮಾದ ನಾಯಕ ಇಶಾನ್ ಕೂಡ ಭಾಗಿಯಾಗಿದ್ದರು. ಇವರಿಬ್ಬರು ವೈಟ್ ಅಂಡ್ ವೈಟ್ ಡ್ರೆಸ್ ಕೋಡ್ ನಲ್ಲಿ ಕಾಣಿಸಿಕೊಂಡಿದ್ದು ಚರ್ಚೆಗೆ ಕಾರಣವಾಗಿತ್ತು. ಯಾಕಂದ್ರೆ, ಇಶಾನ್ ಜೊತೆ ಜಾಹ್ನವಿ ಡೇಟ್ ಮಾಡ್ತಿದ್ದಾರೆ ಎಂಬ ಸುದ್ದಿ ಈ ಹಿಂದೆಯೆ ಸದ್ದು ಮಾಡಿತ್ತು.

  ಜಿಮ್ ಮುಂದೆ ಪೋಸ್

  ಜಿಮ್ ಮುಂದೆ ಪೋಸ್

  ಜಾಹ್ನವಿ ಕಪೂರ್ ಹೆಚ್ಚು ಸುದ್ದಿಯಾಗೋದೆ ಜಿಮ್ ಬಳಿ. ಜಿಮ್ ನಿಂದ ಹೊರಗೆ ಬರುವಾಗ ಫೋಟೋ ಗೆ ಪೋಸ್ ಕೊಡುವ ಶ್ರೀದೇವಿ ಪುತ್ರಿ ಇತ್ತೀಚಿಗೆ ಪಿಂಕ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಈಗ ಪಡ್ಡೆಗಳ ಮನಸ್ಸು ಕದ್ದಿದೆ. ಜಾಹ್ನವಿಗೆ ಪಿಂಕ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ ಇರಬೇಕು. ಅದಕ್ಕೆ ಇಲ್ಲಿಯೂ ಪಿಂಕ್ ಟಾಪ್ ಹಾಕಿದ್ದಾರೆ.

  English summary
  Sridevi's daughter jhanvi kapoor latest photos going viral in internet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X