For Quick Alerts
  ALLOW NOTIFICATIONS  
  For Daily Alerts

  ಕೊನೆಗೂ ವಿಚಾರಣೆಗೆ ಹಾಜರಾದ ಸುಶಾಂತ್ ಪ್ರೇಯಸಿ ರಿಯಾ

  |

  ಸಿಬಿಐ -ಇಡಿ ಕುಣಿಕೆಯಲ್ಲಿ ಸಿಲುಕಿರುವ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಒಲ್ಲೆ-ಒಲ್ಲೆ ಎನ್ನುತ್ತಲೇ ಕೊನೆಗೂ ವಿಚಾರಣೆಗೆ ಹಾಜರಾಗಿದ್ದಾರೆ.

  Kushee Ravi Alias Dia Soup Photoshoot | Filmibeat Kannada

  ಜಾರಿ ನಿರ್ದೇಶನಾಲಯವು ಸುಶಾಂತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ರಿಯಾ ಚಕ್ರವರ್ತಿಗೆ ಸೂಚಿಸಿತ್ತು. ಆದರೆ ರಿಯಾ ಇದಕ್ಕೆ ಒಪ್ಪಿರಲಿಲ್ಲ.

  ಸುಪ್ರೀಂಕೋರ್ಟ್‌ನಲ್ಲಿ ತಾನು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆದು ತೀರ್ಪು ಬರುವವರೆಗೂ ವಿಚಾರಣೆ ಮುಂದೂಡಬೇಕು ಎಂದು ರಿಯಾ ಜಾರಿ ನಿರ್ದೇಶನಾಲಯಕ್ಕೆ ಮನವಿ ಮಾಡಿದ್ದರು. ಆದರೆ ರಿಯಾ ಮನವಿಯನ್ನು ತಳ್ಳಿ ಹಾಕಿರುವ ಇಡಿ, ವಿಚಾರಣೆಗೆ ಹಾಜರಾಗಲೇಬೇಕು ಎಂದು ಸೂಚಿಸಿದ ಕಾರಣ ಇಂದು ರಿಯಾ ವಿಚಾರಣೆಗೆ ಬಂದಿದ್ದರು.

  ರಿಯಾ ಗೆ 11:30 ರ ಡೆಡ್‌ಲೈನ್ ನೀಡಲಾಗಿತ್ತು

  ರಿಯಾ ಗೆ 11:30 ರ ಡೆಡ್‌ಲೈನ್ ನೀಡಲಾಗಿತ್ತು

  ಮುಂಬೈನಲ್ಲಿನ ಇಡಿ ಕಚೇರಿಗೆ ರಿಯಾ ಚಕ್ರವರ್ತಿ ತನ್ನ ಸಹೋದರ ಶೋವಿಕ್ ಹಾಗೂ ತಂದೆ ಇಂದ್ರಜಿತ್ ಜೊತೆಗೆ ಆಗಮಿಸಿದರು. ಇಡಿಯು 11:30 ರ ಡೆಡ್‌ಲೈನ್ ಅನ್ನು ರಿಯಾಗೆ ನೀಡಿತ್ತು. ಡೆಡ್‌ಲೈನ್‌ನ ಕೆಲವೇ ನಿಮಿಷಗಳಷ್ಟು ತಡವಾಗಿ ರಿಯಾ ಆಗಮಿಸಿದರು. ಅಣ್ಣನ ಸಹಾಯದಿಂದ ಕಚೇರಿಯ ಒಳಕ್ಕೆ ರಿಯಾ ಹೋದರು.

  ಸುಶಾಂತ್‌ನ ಮಾಜಿ ಮ್ಯಾನೇಜರ್ ಸಹ ಹಾಜರು

  ಸುಶಾಂತ್‌ನ ಮಾಜಿ ಮ್ಯಾನೇಜರ್ ಸಹ ಹಾಜರು

  ಸುಶಾಂತ್ ಸಿಂಗ್‌ನ ಮಾಜಿ ಬ್ಯುಸಿನೆಸ್ ಮ್ಯಾನೇಜರ್ ಶ್ರುತಿ ಮೋದಿ ಗೆ ಸಹ ಹಾಜರಾಗಲು ಇಡಿ ಸೂಚಿಸಿತ್ತು. ಅಂತೆಯೇ ರಿಯಾ ವಿಚಾರಣೆ ಬಳಿಕ ಶ್ರುತಿ ಮೋದಿ ಸಹ ಇಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳ ಮುಂದೆ ಹಾಜರಾಗಿ ಉತ್ತರಗಳನ್ನು ನೀಡಿದರು.

  ಖಾತೆಯಿಂದ ಕೋಟ್ಯಂತರ ಹಣ ವರ್ಗಾವಣೆ

  ಖಾತೆಯಿಂದ ಕೋಟ್ಯಂತರ ಹಣ ವರ್ಗಾವಣೆ

  ಸುಶಾಂತ್ ಸಿಂಗ್ ಖಾತೆಯಿಂದ ಕೋಟ್ಯಂತರ ಹಣವನ್ನು ರಿಯಾ ಖರ್ಚು ಮಾಡಿದ್ದಾರೆ. ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ ಎಂಬ ಕಾರಣದಿಂದಾಗಿ ಇಡಿಯು ಪ್ರಕರಣವನ್ನು ದಾಖಲಿಸಿಕೊಂಡಿದ್ದು. ಇದೇ ಕಾರಣದಿಂದ ಇಂದು ರಿ ವಿಚಾರಣೆ ನಡೆಸಲಾಗಿದೆ.

  ಸುಪ್ರೀಂಕೋರ್ಟ್‌ನಲ್ಲಿ ರಿಯಾ ಅರ್ಜಿ

  ಸುಪ್ರೀಂಕೋರ್ಟ್‌ನಲ್ಲಿ ರಿಯಾ ಅರ್ಜಿ

  ರಿಯಾ ಹಾಗೂ ಅವರ ಕುಟುಂಬದವರು ಸೇರಿ ಒಟ್ಟು ಐದು ಮಂದಿಯ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಬಾರದು ಎಂದೂ ಸಹ ರಿಯಾ ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ. ಅದರ ವಿಚಾರಣೆ ನಡೆಯಬೇಕಿದೆ.

  English summary
  Sushant Singh's girlfriend Rhea Chakraborthy appears before ED for questioning. Shruti Modi also appeared before ED today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X