For Quick Alerts
  ALLOW NOTIFICATIONS  
  For Daily Alerts

  ಮತ್ತಷ್ಟು ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ ರಿಯಾ ಚಕ್ರವರ್ತಿ ಕಾಲ್ ಡೀಟೈಲ್ಸ್

  |

  ಸುಶಾಂತ್ ಸಿಂಗ್ ರಜಪೂತ್ ಪ್ರೇಯಸಿ ರಿಯಾ ಚಕ್ರವರ್ತಿ, ಅಕ್ರಮ ಹಣ ವರ್ಗಾವಣೆ, ಹಣ ದುರುಪಯೋಗ ಆರೋಪಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಿದ್ದಾರೆ. ಸುಶಾಂತ್ ಅವರ ನಾಲ್ಕು ಬ್ಯಾಂಕ್ ಖಾತೆಗಳ ಪೈಕಿ ಎರಡರಿಂದ ರಿಯಾ ಚಕ್ರವರ್ತಿ ಖಾತೆಗೆ ಹಣ ವರ್ಗಾವಣೆಯಾಗಿದೆ.

  Kushee Ravi Alias Dia Soup Photoshoot | Filmibeat Kannada

  ಈ ನಡುವೆ ರಿಯಾ ಚಕ್ರವರ್ತಿ ಅವರ ಮೊಬೈಲ್‌ನಿಂದ ಮಾಡಲಾದ ಕರೆ ವಿವರದ ದಾಖಲೆ (ಸಿಡಿಆರ್) ಬಹಿರಂಗವಾಗಿದೆ. ಕಳೆದ ಒಂದು ವರ್ಷದಲ್ಲಿ ರಿಯಾ ಯಾವ ಯಾವ ವ್ಯಕ್ತಿಗಳಿಗೆ ಎಷ್ಟು ಬಾರಿ ಕರೆ ಮಾಡಿದ್ದಾರೆ, ಅವರೊಂದಿಗೆ ಎಷ್ಟು ಸಮಯ ಮಾತನಾಡಿದ್ದಾರೆ ಇತ್ಯಾದಿ ಮಾಹಿತಿಗಳು ಹೊರಬಿದ್ದಿದ್ದು, ಆಘಾತಕಾರಿ ಸಂಗತಿಗಳು ಬಹಿರಂಗವಾಗಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ನಡೆಸುತ್ತಿರುವ ಮುಂಬೈನ ಹಿರಿಯ ಪೊಲೀಸ್ ಅಧಿಕಾರಿಯ ಜತೆಗೆ ರಿಯಾ ಸಂಪರ್ಕ ಇರುವುದು ಗೊತ್ತಾಗಿದೆ. ಮುಂದೆ ಓದಿ...

  ಯಾರಿಗೆ ಎಷ್ಟು ಕರೆ?

  ಯಾರಿಗೆ ಎಷ್ಟು ಕರೆ?

  ಕಳೆದ ಒಂದು ವರ್ಷದಲ್ಲಿ ನಿರ್ದೇಶಕ ಮಹೇಶ್ ಭಟ್‌ಗೆ ರಿಯಾ 16 ಬಾರಿ ಕರೆ ಮಾಡಿದ್ದಾರೆ. ತಂದೆ ಇಂದ್ರಜಿತ್ ಚಕ್ರವರ್ತಿ ಜತೆ 1122 ಬಾರಿ ಮಾತನಾಡಿದ್ದಾರೆ. ಹಾಗೆಯೇ ತಮ್ಮ ಶೌವಿಕ್ ಚಕ್ರವರ್ತಿಗೆ 886, ಅಮ್ಮ ಸಂಧ್ಯಾ ಚಕ್ರವರ್ತಿ 537 ಮತ್ತು ಸುಶಾಂತ್‌ರ ಮಾಜಿ ಬಿಜಿನೆಸ್ ಮ್ಯಾನೇಜರ್ ಹಾಗೂ ತಮ್ಮ ಮ್ಯಾನೇಜರ್ ಶ್ರುತಿ ಮೋದಿಗೆ 808 ಬಾರಿ ಕರೆ ಮಾಡಿದ್ದಾರೆ.

  ಕೊನೆಗೂ ವಿಚಾರಣೆಗೆ ಹಾಜರಾದ ಸುಶಾಂತ್ ಪ್ರೇಯಸಿ ರಿಯಾಕೊನೆಗೂ ವಿಚಾರಣೆಗೆ ಹಾಜರಾದ ಸುಶಾಂತ್ ಪ್ರೇಯಸಿ ರಿಯಾ

  ಬಾಂದ್ರಾ ಡಿಸಿಪಿ ಜತೆ ಸಂಪರ್ಕ

  ಬಾಂದ್ರಾ ಡಿಸಿಪಿ ಜತೆ ಸಂಪರ್ಕ

  ಸುಶಾಂತ್ ನಿಧನದ ನಂತರ ಜೂನ್‌ನಿಂದ ಜುಲೈ ನಡುವೆ ಬಾಂದ್ರಾದ ಡಿಸಿಪಿ ಅಭಿಷೇಕ್ ತ್ರಿಮುಖೆ ಜತೆ ರಿಯಾ ಮಾತನಾಡಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಈ ಅವಧಿಯಲ್ಲಿ ನಾಲ್ಕು ಫೋನ್ ಕತೆ ಹಾಗೂ ಒಂದು ಸಂದೇಶ ಅವರ ನಡುವೆ ವಿನಿಮಯವಾಗಿದೆ.

  ಡಿಸಿಪಿ ಜತೆಗಿನ ಕರೆ ವಿವರ

  ಡಿಸಿಪಿ ಜತೆಗಿನ ಕರೆ ವಿವರ

  ಜೂನ್ 21ರಂದು ರಿಯಾ ಚಕ್ರವರ್ತಿಯಿಂದ ಡಿಸಿಪಿಗೆ 28 ಸೆಕೆಂಡ್‌ಗಳ ಮಾತುಕತೆ. ಜೂನ್ 22ರಂದು ಡಿಸಿಪಿಯಿಂದ ರಿಯಾಗೆ ಟೆಕ್ಸ್ಟ್ ಮೆಸೇಜ್. ಜೂನ್ 22ರಂದು ಡಿಸಿಪಿಯಿಂದ ರಿಯಾಗೆ ಕರೆ-29 ಸೆಕೆಂಡ್ ಮಾತುಕತೆ. ಜುಲೈ 1ರಂದು ಡಿಸಿಪಿಯಿಂದ ರಿಯಾಗೆ 66 ಸೆಕೆಂಡ್‌ಗಳ ಕರೆ ಮತ್ತು ಜುಲೈ 18ರಂದು ರಿಯಾರಿಂದ ಡಿಸಿಪಿಗೆ 61 ಸೆಕೆಂಡ್‌ಗಳ ಕರೆ ಹೋಗಿದೆ. ಇದು ತನಿಖೆಗೆ ಸಂಬಂಧಿಸಿದ ಮಾಡಿ ಕರೆ ಎಂದು ಮುಂಬೈ ಪೊಲೀಸರು ಹೇಳಿಕೆ ನೀಡಿದ್ದಾರೆ.

  ಅಂದು ಕೇಳಿದ್ದೊಂದು, ಈಗ ಹೇಳುವುದು ಇನ್ನೊಂದು: ಉಲ್ಟಾ ಹೊಡೆದ ರಿಯಾ ಚಕ್ರವರ್ತಿಅಂದು ಕೇಳಿದ್ದೊಂದು, ಈಗ ಹೇಳುವುದು ಇನ್ನೊಂದು: ಉಲ್ಟಾ ಹೊಡೆದ ರಿಯಾ ಚಕ್ರವರ್ತಿ

  ಸುಶಾಂತ್ ಜತೆ ಮಾತುಕತೆ

  ಸುಶಾಂತ್ ಜತೆ ಮಾತುಕತೆ

  2020ರ ಜನವರಿ 20ರಿಂದ 24ರವರೆಗೆ ಸುಶಾಂತ್ ಸಿಂಗ್, ಚಂಡೀಗಡದಲ್ಲಿರುವ ತಮ್ಮ ಅಕ್ಕನ ಮನೆಗೆ ಹೋಗಿದ್ದರು. ಈ ಅವಧಿಯಲ್ಲಿ ಸುಶಾಂತ್‌ಗೆ ರಿಯಾ 25 ಬಾರಿ ಕರೆ ಮಾಡಿದ್ದಾರೆ. ಸುಶಾಂತ್ ಜತೆ ರಿಯಾ ಕಳೆದ ಆರು ತಿಂಗಳಲ್ಲಿ 147 ಬಾರಿ ಮಾತನಾಡಿರುವ ಮಾಹಿತಿ ಲಭ್ಯವಾಗಿದೆ. ಸುಶಾಂತ್ ಮ್ಯಾನೇಜರ್ ಸಾಮ್ಯುಯೆಲ್ ಮಿರಾಂಡಾಗೆ ರಿಯಾ 289 ಬಾರಿ ಕರೆ ಮಾಡಿದ್ದರು.

  ಎರಡು ಆಸ್ತಿ ಖರೀದಿಸಿರುವ ರಿಯಾ ಕುಟುಂಬ

  ಎರಡು ಆಸ್ತಿ ಖರೀದಿಸಿರುವ ರಿಯಾ ಕುಟುಂಬ

  ಸುಶಾಂತ್ ಸಿಂಗ್ ಕೋಟಕ್ ಮಹೀಂದ್ರಾ ಬ್ಯಾಂಕ್, ಎಚ್‌ಡಿಎಫ್‌ಸಿ ಮತ್ತು ಸ್ಟ್ಯಾಂಡರ್ಸ್ ಚಾರ್ಟರ್ಡ್ ಬ್ಯಾಂಕ್‌ಗಳಲ್ಲಿ ಮುಖ್ಯವಾಗಿ ಖಾತೆಗಳನ್ನು ಹೊಂದಿದ್ದರು. ಅವುಗಳಲ್ಲಿ ಕೋಟಕ್ ಮತ್ತು ಎಚ್‌ಡಿಎಫ್‌ಸಿ ಖಾತೆಗಳಿಂದ ರಿಯಾ ಖಾತೆಗೆ ಭಾರಿ ಮೊತ್ತದ ಹಣ ವರ್ಗಾವಣೆಯಾಗಿದೆ. ರಿಯಾ ಮತ್ತು ಆಕೆಯ ಕುಟುಂಬ ಇತ್ತೀಚೆಗಷ್ಟೇ ಮುಂಬೈನ ಮುಖ್ಯ ಪ್ರದೇಶದಲ್ಲಿ ಎರಡು ಆಸ್ತಿಗಳನ್ನು ಖರೀದಿಸಿದೆ. ಈ ಆಸ್ತಿಗಳ ಎಲ್ಲ ದಾಖಲೆಗಳನ್ನು ನೀಡುವಂತೆ ಜಾರಿ ನಿರ್ದೇಶನಾಲಯ ರಿಯಾಗೆ ಸೂಚಿಸಿದೆ.

  ಇನ್ನಿಬ್ಬರಿಗೆ ಇ.ಡಿ ಸಮನ್

  ಇನ್ನಿಬ್ಬರಿಗೆ ಇ.ಡಿ ಸಮನ್

  ರಿಯಾ ಚಕ್ರವರ್ತಿಯ ವಿಚಾರಣೆ ಬಳಿಕ ಜಾರಿ ನಿರ್ದೇಶನಾಲಯ ಸುಶಾಂಗ್ ಸಿಂಗ್ ಸ್ನೇಹಿತ ಸಿದ್ಧಾರ್ಥ್ ಪಟಾನಿ ಮತ್ತು ಅವರ ಮಾಜಿ ಬಿಜಿನೆಸ್ ಮ್ಯಾನೇಜರ್ ಶ್ರುತಿ ಮೋದಿ ಅವರಿಗೆ ಸಮನ್ ನೀಡಿದೆ. ಶ್ರುತಿ ಮೋದಿ ಶುಕ್ರವಾರವೇ ಹಾಜರಾಗಬೇಕಿದ್ದು, ಸಿದ್ಧಾರ್ಥ್‌ಗೆ ಶನಿವಾರ ಹಾಜರಾಗುವಂತೆ ಸೂಚಿಸಲಾಗಿದೆ. ಮುಂಬೈನ ಹೊರವಲಯ ಪಾವನಿಯಲ್ಲಿ ಚಿಕ್ಕದೊಂದು ಫಾರ್ಮ್ ಹೌಸ್, ಮುಂಬೈ ಸಮೀಪ ಗೊರೆಗಾಂವ್‌ನಲ್ಲಿ ಅಪಾರ್ಟ್‌ಮೆಂಟ್, ಲೋನ್ ಹೊಂದಿರುವ ಎರಡು ಕಾರುಗಳು ಸುಶಾಂತ್ ಬಳಿ ಇದ್ದವು.

  English summary
  Rhea Chakraborty's call record details has revealed that she was in touch with Bandra DCP Abhishek Trimukhe after Sushant Singh demised.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X