For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್‌ ಪ್ರಕರಣ: ಇಬ್ಬರು ಟಾಪ್ ನಟಿಯರ ಹೆಸರು ಹೇಳಿದ ರಿಯಾ ಚಕ್ರವರ್ತಿ?

  |

  ಸುಶಾಂತ್ ಸಿಂಗ್ ಸಾವು ಪ್ರಕರಣದ ತನಿಖೆಯು ಬಾಲಿವುಡ್‌ನ ಡ್ರಗ್ಸ್ ನಂಟನ್ನು ಬಿಚ್ಚಿಡುತ್ತಿದ್ದು, ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರಿಯಾ ಚಕ್ರವರ್ತಿ ಹಾಗೂ ಇನ್ನಿತರರಿಂದ ಇನ್ನಷ್ಟು ಬಾಲಿವುಡ್ ಸೆಲೆಬ್ರಿಟಿ ಹೆಸರುಗಳು ಹೊರಗೆ ಬೀಳುತ್ತಿವೆ.

  ಡ್ರಗ್ಸ್ ಪೆಡ್ಲರ್ ಜೊತೆಗೆ ನಂಟು, ಡ್ರಗ್ಸ್ ವ್ಯಸನ, ಡ್ರಗ್ಸ್ ಕೊಳ್ಳಲು ಹಣ ಸಂದಾಯ ಆರೋಪದಲ್ಲಿ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿಯನ್ನು ಎನ್‌ಸಿಬಿ (ನಾರ್ಕೊಟಿಕ್ ಕಂಟ್ರೋಲ್ ಬ್ಯೂರೋ) ಅಧಿಕಾರಿಗಳು ಬಂಧನಕ್ಕೆ ಒಳಗಾಗಿದ್ದಾರೆ.

  ಹೇಗಿದೆ ರಿಯಾ ಚಕ್ರವರ್ತಿ ಜೈಲು ಕೋಣೆ? ಯಾರು ಆಕೆಯ 'ನೆರೆ-ಹೊರೆ'?ಹೇಗಿದೆ ರಿಯಾ ಚಕ್ರವರ್ತಿ ಜೈಲು ಕೋಣೆ? ಯಾರು ಆಕೆಯ 'ನೆರೆ-ಹೊರೆ'?

  ಬಂಧನಕ್ಕೆ ಮುನ್ನಾ ಸತತ ಮೂರು ದಿನಗಳ ಕಾಲ ರಿಯಾರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಎನ್‌ಸಿಬಿ ಅಧಿಕಾರಿಗಳೇ ಮಾಧ್ಯಮಗಳಿಗೆ ಹೇಳಿದಂತೆ, ರಿಯಾ ವಿಚಾರಣೆಗೆ ಚೆನ್ನಾಗಿ ಸಹಕರಿಸುತ್ತಿದ್ದು, ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದರಂತೆ. ಅಂತೆಯೇ ಎನ್‌ಸಿಬಿ ಅಧಿಕಾರಿಗಳ ಮುಂದೆ ಬಾಲಿವುಡ್‌ನ ಇನ್ನಷ್ಟು ಡ್ರಗ್ಸ್ ವ್ಯಸನಿ ನಟಿಯರ ಹೆಸರು ಹೇಳಿದ್ದಾರೆ ಎನ್ನಲಾಗುತ್ತಿದೆ.

  20 ಪುಟದ ದೀರ್ಘ ಹೇಳಿಕೆ ದಾಖಲು

  20 ಪುಟದ ದೀರ್ಘ ಹೇಳಿಕೆ ದಾಖಲು

  ಕೆಲವು ಇಂಗ್ಲಿಷ್‌ ಮಾಧ್ಯಮಗಳು ವರದಿ ಮಾಡಿರುವಂತೆ, ಎನ್‌ಸಿಬಿ ಅಧಿಕಾರಿಗಳಿಗೆ 20 ಪುಟದ ದೀರ್ಘ ಉತ್ತರಗಳನ್ನು, ಹೇಳಿಕೆಗಳನ್ನು, ಸ್ಪಷ್ಟನೆಗಳನ್ನು ರಿಯಾ ಚಕ್ರವರ್ತಿ ನೀಡಿದ್ದಾರಂತೆ. ಈ ಉತ್ತರಗಳ ನಡುವೆ, ಇಬ್ಬರು ಖ್ಯಾತ ನಟಿಯರು ಡ್ರಗ್ಸ್ ಸೇವಿಸುವ ಬಗ್ಗೆಯೂ ಬಾಯಿ ಬಿಟ್ಟಿದ್ದಾರಂತೆ!

  ಇಬ್ಬರು ಸ್ಟಾರ್ ನಟಿಯರ ಹೆಸರು

  ಇಬ್ಬರು ಸ್ಟಾರ್ ನಟಿಯರ ಹೆಸರು

  ಹೌದು, ದಕ್ಷಿಣದಲ್ಲೂ ಖ್ಯಾತ ನಟಿಯಾಗಿರುವ ರಾಕುಲ್ ಪ್ರೀತ್ ಸಿಂಗ್ ಹಾಗೂ ಖ್ಯಾತ ನಟ ಸೈಫ್ ಅಲಿ ಖಾನ್ ಮಗಳು, ನಟಿ ಸಾರಾ ಅಲಿ ಖಾನ್ ಡ್ರಗ್ಸ್ ಸೇವನೆ ಮಾಡುತ್ತಾರೆಂದು ರಿಯಾ ಎನ್‌ಸಿಬಿ ಅಧಿಕಾರಿಗಳ ಮುಂದೆ ಹೇಳಿದ್ದಾರೆನ್ನಲಾಗುತ್ತಿದೆ.

  ರಿಯಾ ಚಕ್ರವರ್ತಿ-ಸುಶಾಂತ್ 'ಧೂಮಲೀಲೆ' ವಿಡಿಯೋ ವೈರಲ್ರಿಯಾ ಚಕ್ರವರ್ತಿ-ಸುಶಾಂತ್ 'ಧೂಮಲೀಲೆ' ವಿಡಿಯೋ ವೈರಲ್

  ಆತ್ಮೀಯ ಗೆಳೆಯರಾಗಿದ್ದ ಸುಶಾಂತ್-ಸಾರಾ ಅಲಿ ಖಾನ್

  ಆತ್ಮೀಯ ಗೆಳೆಯರಾಗಿದ್ದ ಸುಶಾಂತ್-ಸಾರಾ ಅಲಿ ಖಾನ್

  ಸುಶಾಂತ್ ಹಾಗೂ ಸಾರಾ ಅಲಿ ಖಾನ್ ಮೊದಲು ಆತ್ಮೀಯ ಗೆಳೆಯರಾಗಿದ್ದರು. ಅವರಿಬ್ಬರೂ ಪ್ರೀತಿಯಲ್ಲಿದ್ದಾರೆ ಎನ್ನಲಾಗಿತ್ತು, ಇಬ್ಬರೂ ಖಾಸಗಿ ವಿದೇಶಿ ಪ್ರವಾಸಗವನ್ನೂ ಕೈಗೊಂಡಿದ್ದರು. ಆ ಪ್ರವಾಸದ ಉದ್ದೇಶವೇ ಡ್ರಗ್ಸ್ ಸೇವನೆ ಆಗಿರುತ್ತಿತ್ತು ಎಂಬ ಆರೋಪವೂ ಇದೆ.

  ಆರೋಗ್ಯದ ಕಾಳಜಿ ವಹಿಸುವ ರಾಕುಲ್ ಪ್ರೀತ್ ಸಿಂಗ್

  ಆರೋಗ್ಯದ ಕಾಳಜಿ ವಹಿಸುವ ರಾಕುಲ್ ಪ್ರೀತ್ ಸಿಂಗ್

  ರಾಕುಲ್ ಪ್ರೀತ್ ಸಿಂಗ್ ಹೆಸರು ಡ್ರಗ್ಸ್ ಪ್ರಕರಣದಲ್ಲಿ ಕೇಳಿಬಂದಿರುವುದು ಅಭಿಮಾನಿಗಳಿಗೆ ಭಾರಿ ಆಶ್ಚರ್ಯ ತಂದಿದೆ. ರಾಕುಲ್ ಶಿಸ್ತಿನ ಜೀವನ ನಿರ್ವಹಿಸುವವರು. ಪ್ರತಿನಿತ್ಯ ತಪ್ಪದೆ ಯೋಗ ಮಾಡುವವರು, ಪೂರ್ಣ ಸಸ್ಯಾಹಾರಿ ಆಗಿರುವ ರಿಯಾ, ಹಾಲಿನ ಉತ್ಪನ್ನಗಳನ್ನು ಸಹ ಸೇವಿಸುವುದಿಲ್ಲ. ತಮ್ಮ ಆರೋಗ್ಯದ ಬಗ್ಗೆ ಇಷ್ಟೋಂದು ಕಾಳಜಿ ವಹಿಸಿರುವವರು ಡ್ರಗ್ಸ್ ಸೇವಿಸಲು ಹೇಗೆ ಸಾಧ್ಯ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.

  Rakesh Adiga spiritual Rap , ಕನ್ನಡಧ Rapperಗಳಿಗೆ ಕಿವಿಮಾತು | Rakesh Adiga | Filmibeat Kannada
  ಡ್ರಗ್ಸ್ ಕೊಂಡಿದ್ದಾಗಿ ಒಪ್ಪಿಕೊಂಡಿರುವ ರಿಯಾ

  ಡ್ರಗ್ಸ್ ಕೊಂಡಿದ್ದಾಗಿ ಒಪ್ಪಿಕೊಂಡಿರುವ ರಿಯಾ

  ರಿಯಾ, ಸಾರಾ ಅಲಿ ಖಾನ್ ಹಾಗೂ ರಾಕುಲ್ ಪ್ರೀತ್ ಸಿಂಗ್ ಹೆಸರು ಹೇಳಿರುವುದು ಪೂರ್ಣ ಖಾತ್ರಿಯಾಗಿಲ್ಲ. ಆದರೆ ಸುಶಾಂತ್ ಗಾಗಿ ಡ್ರಗ್ಸ್ ಕೊಳ್ಳುತ್ತಿದ್ದುದಾಗಿ, ಸುಶಾಂತ್‌ಗೆ ಗಾಂಜಾ ಸೇವನೆಯ ಅಭ್ಯಾಸವಿದ್ದುದಾಗಿ ಒಪ್ಪಿಕೊಂಡಿದ್ದಾರೆ. ಇದೀಗ ವೈರಲ್ ಆಗಿರುವ ಹಳೆಯ ವಿಡಿಯೋ ಒಂದರಲ್ಲಿ ಸುಶಾಂತ್ ಹಾಗೂ ರಿಯಾ ಒಟ್ಟಿಗೆ ಗಾಂಜಾ ಸೇವನೆ ಮಾಡುತ್ತಿದ್ದಾರೆ.

  ಮತ್ತೆ ಮೂರು ದಿನ ಸಿಸಿಬಿ ವಶಕ್ಕೆ ರಾಗಿಣಿ-ಸಂಜನಾಮತ್ತೆ ಮೂರು ದಿನ ಸಿಸಿಬಿ ವಶಕ್ಕೆ ರಾಗಿಣಿ-ಸಂಜನಾ

  English summary
  Media reports saying that Rhea Chakraborty told two actress names in related to drugs case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X