»   » ರಿತೇಶ್-ಜೆನಿಲಿಯಾ ಪ್ರೀತಿಯ ಸಂಕೇತ ರಿಯಾನ್

ರಿತೇಶ್-ಜೆನಿಲಿಯಾ ಪ್ರೀತಿಯ ಸಂಕೇತ ರಿಯಾನ್

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಚಿತ್ರರಂಗಗಳಲ್ಲಿ ಒಂದು ಸುತ್ತು ಹಾಕಿಕೊಂಡು ಬಂದ ಹಸನ್ಮುಖಿ ಜೆನಿಲಿಯಾ ಡಿಸೋಜ ಅವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್ ಮುಖ್ ಅವರ ಪುತ್ರ ರಿತೇಶ್ ದೇಶ್‌ಮುಖ್ ಕೈ ಹಿಡಿದಿದಿದ್ದು ಎಲ್ಲರಿಗೂ ಗೊತ್ತೇ ಇದೆ. ಅಜ್ಜನ ಹುಟ್ಟುಹಬ್ಬದ ದಿನ ಮೊಮ್ಮಗನ ಮುದ್ದು ಮುಖವನ್ನು ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರದರ್ಶಿಸಲಾಗಿದೆ.

ಈ ದಂಪತಿಯ ಮುದ್ದಾದ ಮಗು ರಿಯಾನ್ ಗೆ ಈಗ ಆರು ತಿಂಗಳ ಹರೆಯ. ಬುಧವಾರ(ಮೇ.27) ದಿವಂಗತ ವಿಲಾಸ್ ರಾವ್ ದೇಶ್ ಮುಖ್ ಅವರ 70ನೇ ಹುಟ್ಟುಹಬ್ಬದ ಆಚರಣೆಯಲ್ಲಿ ಮುಂಬೈನಲ್ಲಿ ಅನೇಕ ಕಾರ್ಯಕ್ರಮಗಳು ಆಯೋಜನೆಗೊಂಡಿದೆ. ಇದೇ ಸಂದರ್ಭದಲ್ಲಿ ಮೊದಲ ಬಾರಿಗೆ ರಿಯಾನ್ ಚಿತ್ರಗಳನ್ನು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಮೂಲಕ ರಿತೇಶ್ ದೇಶ್ ಮುಖ್ ಹೊರ ಹಾಕಿದ್ದಾರೆ. [ಸೂಪರ್ ಸ್ಟಾರ್ ಕಿಡ್ ಅಬ್‌ರಾಮ್ ಖಾನ್]

2003ರಲ್ಲಿ ತೆರೆಕಂಡ 'ತುಜೆ ಮೇರಿ ಕಸಮ್' ಚಿತ್ರದಲ್ಲಿ ಇಬರು ಒಟ್ಟಿಗೆ ಅಭಿನಯಿಸಿದ್ದ ರಿತೇಶ್ ಹಾಗೂ ಜೆನಿಲಿಯಾ ಹತ್ತಾರು ವರ್ಷಗಳ ಕಾಲ ಪ್ರೇಮಿಗಳಾಗಿ ವಿಹರಿಸಿದ್ದವರು. ಕೊನೆಗೆ ಎರಡು ಮನೆ ಕಡೆ ಒಪ್ಪಿ ಫೆಬ್ರವರಿ 3, 2012ರಲ್ಲಿ ಸಪ್ತಪದಿ ತುಳಿದ ಜೆನಿಲಿಯಾ ಚಿತ್ರರಂಗದಿಂದ ಹೊರ ನಡೆದಿದ್ದರು, ರಿತೇಶ್ ಚಿತ್ರರಂಗದ ಜೊತೆಗೆ ಸಿಸಿಎಲ್ ಟೀಂ ನೋಡಿಕೊಂಡು ಹಾಯಾಗಿ ಇದ್ದರು. [ರಿತೇಶ್ ದೇಶ್‌ಮುಖ್ ಜೊತೆ ಜೆನಿಲಿಯಾ ಮದುವೆ]

ಈ ಪ್ರೇಮಜೋಡಿಯ ಪ್ರೀತಿಯ ಸಂಕೇತ ರಿಯಾನ್ ದೇಶ್ ಮುಖ್ ಚಿತ್ರಗಳನ್ನು ಛಾಯಾಗ್ರಾಹಕ ಮೃಣಾಲ್ ಕಲ್ಸೆಕರ್ ಉತ್ತಮವಾಗಿ ಸೆರೆಹಿಡಿದಿದ್ದಾರೆ. ರಿಯಾನ್ ಚಿತ್ರಗಳು ಇಲ್ಲಿವೆ...

ವಿಲಾಸ್ ರಾವ್ ದೇಶ್ ಮುಖ್ ಜನ್ಮದಿನ

ಮಹಾರಾಷ್ಟ್ರದ ಮುಖ್ಯಮಂತ್ರಿ, ಕೇಂದ್ರ ಸಚಿವ, ರಾಜ್ಯಸಭಾ ಸದಸ್ಯರಾಗಿದ್ದ ಕಾಂಗ್ರೆಸ್ ನಾಯಕ ವಿಲಾಸ್ ರಾವ್ ದೇಶ್ ಮುಖ್ ಅವರು 2012ರಲ್ಲಿ ನಿಧನರಾದರು. ಮದುವೆಯಾಗಿ ಕೆಲ ತಿಂಗಳಲ್ಲೇ ದೇಶ್ ಮುಖ್ ಅವರನ್ನು ಕಳೆದುಕೊಂಡ ರಿತೇಶ್ ಭಾರಿ ದುಃಖ ಅನುಭವಿಸಿದರು. ರಿತೇಶ್ ಗೆ ಧೀರಜ್ ಹಾಗೂ ಅಮಿತ್ ಎಂಬ ಇನ್ನಿಬ್ಬರು ಸೋದರರಿದ್ದಾರೆ. ಮೇ.27ರಂದು ದೇಶ್ ಮುಖ್ ಜನ್ಮದಿನಾಚರಣೆ ಹಲವೆಡೆ ಆಚರಿಸಲಾಗುತ್ತಿದೆ.

ದೇಶ್ ಮುಖ್ ಸ್ಮರಣೆಯಲ್ಲಿ ರಿಯಾನ್

ವಿಲಾಸ್ ರಾವ್ ದೇಶ್ ಮುಖ್ ಸ್ಮರಣೆಯಲ್ಲಿ ರಿಯಾನ್ ಜೊತೆ ರಿತೇಶ್ ದಂಪತಿ.

ರಿತೇಶ್, ಜೆನಿಲಿಯಾ ಹಾಗೂ ರಿಯಾನ್

ರಿತೇಶ್, ಜೆನಿಲಿಯಾ ಹಾಗೂ ರಿಯಾನ್ ಜೊತೆಗಿರುವ ಚಿತ್ರ ತೆಗೆದವರು ಮೃಣಾಲ್ ಕಲ್ಸೆಕರ್.

ರಿತೇಶ್ ಸೋದರ ಅಮಿತ್ ಟ್ವೀಟ್

ರಿತೇಶ್ ಸೋದರ ಅಮಿತ್ ಅವರಿಂದ ವಿಲಾಸ್ ರಾವ್ ದೇಶ್ ಮುಖ್ ಸ್ಮರಣೆ.

ದಂಪತಿಯ ಮುದ್ದಾದ ಮಗು ರಿಯಾನ್

ದಂಪತಿಯ ಮುದ್ದಾದ ಮಗು ರಿಯಾನ್ ಚಿತ್ರ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಲಭ್ಯವಾಗಿದೆ.

English summary
Riteish DeshmukhShares his six month old son Riaan's pictures via micro blogging site Twitter on Vilasrao Deshmukh's 70th birth anniversary.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada