'ರೋಡ್' ಖ್ಯಾತಿಯ ಸಿನಿಮಾ ನಿರ್ದೇಶಕ ರಜತ್ ಮುಖರ್ಜಿ ನಿಧನ

'ಪ್ಯಾರೆ ತುನೆ ಕ್ಯಾ ಕಿಯಾ', 'ರೋಡ್'ದಂತಹ ಸಿನಿಮಾಗಳನ್ನು ನಿರ್ದೇಶಿಸಿದ್ದ ಹಿಂದಿ ಚಿತ್ರರಂಗದ ನಿರ್ದೇಶಕ ರಜತ್ ಮುಖರ್ಜಿ ಸುದೀರ್ಘ ಕಾಲದ ಅನಾರೋಗ್ಯದ ಬಳಿಕ ಭಾನುವಾರ ಜೈಪುರದಲ್ಲಿ ನಿಧನರಾದರು.

Recommended Video

Jogi Prem : ಅಮ್ಮನನ್ನು ನೆನೆದು ಭಾವುಕರಾದ ಪ್ರೇಮ್ | Filmibeat Kannada

ರಜತ್ ಮುಖರ್ಜಿ ಅವರ ನಿಧನಕ್ಕೆ ಚಿತ್ರರಂಗದ ವಿವಿಧ ಕಲಾವಿದರು, ತಂತ್ರಜ್ಞರು ಸಂತಾಪ ವ್ಯಕ್ತಪಡಿಸಿದ್ದಾರೆ. 'ನನ್ನ ಸ್ನೇಹಿತ, 'ರೋಡ್' ಚಿತ್ರದ ನಿರ್ದೇಶಕ ರಜತ್ ಮುಖರ್ಜಿ ಸುದೀರ್ಘ ಕಾಲದ ಅನಾರೋಗ್ಯದ ವಿರುದ್ಧ ಹೋರಾಟ ನಡೆಸಿ ಇಂದು ಮುಂಜಾನೆ ಜೈಪುರದಲ್ಲಿ ನಿಧನರಾಗಿದ್ದಾರೆ. ನಾವು ಮುಂದೆಂದೂ ಭೇಟ ಮಾಡುವುದಿಲ್ಲ ಮತ್ತು ನಮ್ಮ ಕೆಲಸದ ಬಗ್ಗೆ ಚರ್ಚಿಸುವುದಿಲ್ಲ ಎನ್ನುವುದನ್ನು ನಂಬಲಾಗುತ್ತಿಲ್ಲ' ಎಂದು ನಟ ಮನೋಜ್ ಬಾಜಪೇಯಿ ಹೇಳಿದ್ದಾರೆ.

'ಮತ್ತೊಬ್ಬ ಸ್ನೇಹಿತ ಬೇಗನೆ ಹೊರಟು ಹೋದರು. ಜೈಪುರದಲ್ಲಿದ್ದ ಅವರು ಕೆಲವು ತಿಂಗಳಿನಿಂದ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಒಳಗಾಗಿದ್ದರು' ಎಂದು ಅನುಭವ್ ಸಿನ್ಹಾ ಸಂತಾಪ ಸೂಚಿಸಿದ್ದಾರೆ.

Road Director Rajat Mukherjee Passes Away In Jaipur

2002ರಲ್ಲಿ ಬಿಡುಗಡೆಯಾಗಿದ್ದ ರಜತ್ ಮುಖರ್ಜಿ ಅವರ 'ರೋಡ್' ಚಿತ್ರದಲ್ಲಿ ಮನೋಜ್ ಬಾಜಪೇಯಿ, ವಿವೇಕ್ ಒಬೆರಾಯ್, ಅಂತರಾ ಮಾಲಿ, ವಿಜಯ್ ರಾಜ್ ಮತ್ತು ಮಕರಂದ್ ದೇಶಪಾಂಡೆ ನಟಿಸಿದ್ದರು. ಪ್ಯಾರ್ ತುನೆ ಕ್ಯಾ ಕಿಯಾ 2001ರಲ್ಲಿ ತೆರೆಕಂಡಿತ್ತು. ಊರ್ಮಿಳಾ ಮಾತೋಂಡ್ಕರ್, ಫರ್ದೀನ್ ಖಾನ್, ಸೋನಾಲಿ ಕುಲಕರ್ಣಿ ಅಭಿನಯಿಸಿದ್ದರು. 2004ರಲ್ಲಿ ಬಿಡುಗಡೆಯಾಗಿದ್ದ ಅವರ 'ಲವ್ ಇನ್ ನೇಪಾಳ್' ಚಿತ್ರದಲ್ಲಿ ಸೋನು ನಿಗಮ್, ರಾಜ್‌ಪಾಲ್ ಯಾದವ್ ಮತ್ತು ಫ್ಲೋರಾ ಸೈನಿ ನಟಿಸಿದ್ದರು.

More from Filmibeat

English summary
Filmmaker Rajat Mukherjee who directed Road, Pyaar Tune Kya Kiya and other movies passed away on Sunday morning in Jaipur.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X