For Quick Alerts
  ALLOW NOTIFICATIONS  
  For Daily Alerts

  ಬಾಕ್ಸಾಫೀಸಲ್ಲಿ 100 ಕೋಟಿ ದಾಟಿದ ರೌಡಿ ರಾಥೋಡ್

  By Rajendra
  |

  ಬಾಲಿವುಡ್ ಚಿತ್ರರಂಗದಲ್ಲಿ ಇದೊಂದು ಹೊಸ ದಾಖಲೆ ಎನ್ನಬಹುದು. 'ಅಗ್ನಿಪಥ್', 'ಬಾಡಿಗಾರ್ಡ್' ಚಿತ್ರಗಳ ಗಳಿಕೆಯನ್ನು ಅಕ್ಷಯ್ ಕುಮಾರ್ ಹಾಗೂ ಸೋನಾಕ್ಷಿ ಸಿನ್ಹಾ ಅಭಿನಯದ 'ರೌಡಿ ರಾಥೋಡ್' ಚಿತ್ರ ನಾಮಾವಶೇಷ ಮಾಡಿದೆ. ಬಾಕ್ಸಾಫೀಸರಲ್ಲಿ ನೂರು ಕೋಟಿ ಬಾಚಿ ಮುನ್ನುಗ್ಗುತ್ತಿದೆ 'ರೌಡಿ ರಾಥೋಡ್'.

  ಚಿತ್ರದಲ್ಲಿ ಬಾಲಿವುಡ್ ಪ್ರೇಕ್ಷಕ ವರ್ಗ ಇಷ್ಟಪಡುವ ಫ್ಯಾಮಿಲಿ ಡ್ರಾಮಾ, ಮದುವೆ ಸಂಭ್ರಮ, ಪ್ರೇಮ ಗೀಮ, ಹೂವು ಹಣ್ಣು ಇದ್ಯಾವುದೂ ಇಲ್ಲ. ಒಬ್ಬ ಖಡಕ್ ಪೊಲೀಸ್ ಅಧಿಕಾರಿಯೊಬ್ಬನ ಪವರ್‌ಫುಲ್ ಕತೆಯೇ ರೌಡಿ ರಾಥೋಡ್. ಸಾಹಸ ಪ್ರಧಾನದ ರೀಮೇಕ್ ಚಿತ್ರವೊಂದು ಈ ಮಟ್ಟದಲ್ಲಿ ಸಕ್ಸಸ್ ಆಗಿರುವುದು ಬಾಲಿವುಡ್‌ ಮಂದಿಯನ್ನು ಅಚ್ಚರಿಯಲ್ಲಿ ಮುಳುಗಿಸಿದೆ.

  'ರೌಡಿ ರಾಥೋಡ್' ಚಿತ್ರ ಎರಡನೇ ವಾರದಲ್ಲಿ ರು. 22 ಕೋಟಿ ಗಳಿಸಿದ್ದು ಇದುವರೆಗೂ ಒಟ್ಟಾರೆ ರು.101.5 ಕೋಟಿ ಗಳಿಸಿದೆ. ಸಿಂಗಲ್ ಸ್ಕ್ರೀನ್ ಸೇರಿದಂತೆ ಮಲ್ಟಿಫೆಕ್ಸ್‌ಗಳಲ್ಲೂ 'ರೌಡಿ ರಾಥೋಡ್' ಭರ್ಜರಿ ಪ್ರದರ್ಶನ ಕಾಣುತ್ತಿರುವುದು ವಿಶೇಷ. ಡಾನ್ಸ್ ಮಾಸ್ಟರ್ ಪ್ರಭುದೇವ ವೃತ್ತಿ ಜೀವನದಲ್ಲೂ ಚಿತ್ರ ಭರ್ಜರಿ ತಿರುವು ನೀಡಿದೆ.

  ಅಕ್ಷಯ್ ಕುಮಾರ್ ವೃತ್ತಿಜೀವನದಲ್ಲೂ ಈ ಚಿತ್ರದ ಬಂಪರ್ ಕ್ರಾಪ್ ನೀಡಿದೆ. ಅವರ ಯಾವುದೇ ಚಿತ್ರ ಈ ಪಾಟಿ ದುಡ್ಡು ಮಾಡಿದ ಉದಾಹರಣೆ ಇಲ್ಲ. ಒಟ್ಟು ರು.48 ಕೋಟಿ ಬಜೆಟ್‌ನಲ್ಲಿ ನಿರ್ಮಿಸಿದ ಈ ಚಿತ್ರ ಬಿಡುಗಡೆಯಾದ ದಿನವೇ ರು.15.10 ಕೋಟಿ ಬಾಚಿತ್ತು. ದಿನದಿಂದ ದಿನಕ್ಕೆ ಗಳಿಕೆ ಹೆಚ್ಚಿಸಿಕೊಳ್ಳುತ್ತಾ ಮುನ್ನುಗ್ಗುತ್ತಾ ಬಾಕ್ಸಾಫೀಸ್ ಚಿಂದಿ ಉಡಾಯಿಸುತ್ತಿದೆ.

  'ರೌಡಿ ರಾಥೋಡ್' ಚಿತ್ರದ ಬಗ್ಗೆ ವಿಮರ್ಶಕರಿಂದಲೂ ಒಳ್ಳೆಯ ಮಾತುಗಳು ಕೇಳಿಬಂದಿವೆ. ಭಾರತದಾದ್ಯಂತ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಶೇ.95ರಿಂದ 100ರಷ್ಟಿದೆ ಭರ್ಜರಿ ಪ್ರದರ್ಶನ ಕಂಡಿದೆ. ಇನ್ನು ಮಲ್ಟಿಸ್ಕ್ರೀನ್‌ಗಳಲ್ಲಿ ಶೇ.55ರಿಂದ 70ರಷ್ಟು ಪ್ರದರ್ಶನ ಕಂಡಿದೆ ಎನ್ನುತ್ತವೆ ಮೂಲಗಳು.

  'ರೌಡಿ ರಾಥೋಡ್' ಚಿತ್ರ ತೆಲುಗಿನ 'ವಿಕ್ರಮಾರ್ಕುಡು' ರೀಮೇಕ್. ಇದೇ ಚಿತ್ರ ಕನ್ನಡದಲ್ಲಿ 'ಈ ಶತಮಾನದ ವೀರಮದಕರಿ' ಎಂದು ರೀಮೇಕ್ ಆಗಿತ್ತು. ಸುದೀಪ್ ಹಾಗೂ ರಾಗಿಣಿ ಮುಖ್ಯಭೂಮಿಕೆಯಲ್ಲಿದ್ದ ಈ ಚಿತ್ರದ ಜನಪ್ರಿಯ ಹಾಡು, "ಕಾಲೇಜು ಕನ್ಯೆಯರ ಬಸ್ಸು ಯಾವ್ ಸೀಟು ನೋಡು ರಷ್ಶು, ಬ್ರೇಕು ಬಿದ್ರೆ ದೊಡ್ಡ ಇಷ್ಯೂ ಹುಡುಗರಿಗೆ ಡಿಶ್ಯುಂ ಡಿಶ್ಯು....ಜಿಂತಾತ ಚಿತ ಚಿತ ಜಿಂತಾತತ..." ಪಡ್ಡೆಗಳು ಇನ್ನೂ ಮರೆತಿರಕ್ಕಿಲ್ಲ. (ಏಜೆನ್ಸೀಸ್)

  English summary
  Akshay Kumar and Sonakshi Sinha starrer and Prabhudeva directed film 'Rowdy Rathore' joins the 100 crore club. 'Rowdy Rathore' is a remake of Telugu film 'Vikramarkudu'. This is Sonakshi Sinha’s second big Bollywood blockbuster after 'Dabangg'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X