For Quick Alerts
  ALLOW NOTIFICATIONS  
  For Daily Alerts

  'ಏ ದಿಲ್ ಮುಷ್ಕಿಲ್' ಟಿಕೆಟ್ ಬೆಲೆ ಕೇಳಿದ್ರೆ ತಲೆ ಗಿರ್ರ್ ಅನ್ನೋದು ಪಕ್ಕಾ

  By ಸೋನು ಗೌಡ
  |

  ಕರಣ್ ಜೋಹರ್ ನಿರ್ದೇಶನದ 'ಏ ದಿಲ್ ಹೈ ಮುಷ್ಕಿಲ್' ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಪ್ರೀಮಿಯರ್ ಶೋ ನೋಡಿದ ಬಾಲಿವುಡ್ ತಾರೆಯರು ಸಿನಿಮಾದ ಕಥೆ ಮತ್ತು ನಟ-ನಟಿಯರ ಅಭಿನಯವನ್ನು ಹಾಡಿ ಹೊಗಳಿದ್ದಾರೆ.

  ಅಕ್ಟೋಬರ್ 28ರಂದು ತೆರೆ ಕಾಣುತ್ತಿರುವ ರೋಮ್ಯಾಂಟಿಕ್ ಡ್ರಾಮಾ 'ಏ ದಿಲ್ ಹೈ ಮುಷ್ಕಿಲ್' ಚಿತ್ರ ನೋಡಲು ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ ಆರಂಭವಾಗಿದ್ದು, ಸಿನಿ ಪ್ರಿಯರು ಮುಗಿ ಬಿದ್ದು ಬುಕ್ ಮೈ ಶೋ ಮೂಲಕ ಟಿಕೆಟ್ ಬುಕ್ ಮಾಡುತ್ತಿದ್ದಾರೆ.[18 ವರ್ಷದ ಹಿಂದಿನ ಹಳೇ ಫೋಟೋ ರಹಸ್ಯ ಬಯಲು ಮಾಡಿದ ಐಶ್ವರ್ಯ]

  ಪಾಕ್ ನಟ ಫವಾದ್ ಖಾನ್ ನಟಿಸಿದ್ದಾರೆ ಎಂಬ ಕಾರಣಕ್ಕೆ ಈ ಸಿನಿಮಾ ಭಾರಿ ಸುದ್ದಿಗೆ ಗ್ರಾಸವಾಗಿತ್ತು. ಇದೀಗ ಟಿಕೆಟ್ ಮೂಲಕ ಮತ್ತೊಮ್ಮೆ ಈ ಸಿನಿಮಾ ಸುದ್ದಿ ಮಾಡಿದೆ. ದೆಹಲಿಯ ಮಲ್ಟಿಪ್ಲೆಕ್ಸ್ ಒಂದರಲ್ಲಿ ಈ ಚಿತ್ರಕ್ಕೆ ನಿಗದಿ ಮಾಡಿರುವ ಟಿಕೆಟ್ ದರ ಕೇಳಿದ್ರೆ, ತಲೆ ತಿರುಗಿ ಬೀಳೋದು ಪಕ್ಕಾ.[5 ಕೋಟಿ ದೇಣಿಗೆ: ಪ್ರಾಯಶ್ಚಿತದೊಂದಿಗೆ 'ಏ ದಿಲ್ ಹೈ ಮುಷ್ಕಿಲ್' ಬಿಡುಗಡೆ]

  Rs 2200: The most expensive ticket available for 'ADHM'

  ನೀವು ಈ ಸಿನಿಮಾವನ್ನು 70 ರೂಪಾಯಿ ಕೊಟ್ಟು ಕೂಡ ನೋಡಬಹುದು, 2200 ರೂಪಾಯಿ ಕೂಡ ಕೊಟ್ಟು ನೋಡಬಹುದು. ಈ 2200 ರೂನ ದುಬಾರಿ ಟಿಕೆಟ್ ಹಂಚುತ್ತಿರುವ ಮಲ್ಟಿಪ್ಲೆಕ್ಸ್ ಥಿಯೇಟರ್ ಇರೋದು ನಮ್ಮ ರಾಜಧಾನಿ ದೆಹಲಿಯಲ್ಲಿ. 'PVR Director's Cut' ಎಂಬ ಮಲ್ಟಿಪ್ಲೆಕ್ಸ್ ನಲ್ಲಿ ದುಬಾರಿ ಟಿಕೆಟ್ ಹಂಚುತ್ತಿದೆ.[ರಣಬೀರ್ ಕಪೂರ್ ಗೆ 'ಅಪ್ಪ' ಅಂತ ಕರೆದ ಆರಾಧ್ಯ ಬಚ್ಚನ್]

  ಸಾಮಾನ್ಯವಾಗಿ ಈ ಮಲ್ಟಿಪ್ಲೆಕ್ಸ್ ದುಬಾರಿ ಟಿಕೆಟ್ ನಿಂದಾಗಿಯೇ ಭಾರಿ ಖ್ಯಾತಿ ಗಳಿಸಿದೆ. ಅದರಲ್ಲೂ ಕರಣ್ ಜೋಹರ್ ನಿರ್ದೇಶನದ 'ಏ ದಿಲ್ ಹೈ ಮುಷ್ಕಿಲ್' ಚಿತ್ರದ ಟಿಕೆಟ್ ದರವನ್ನು ಇಷ್ಟರಮಟ್ಟಿಗೆ ಏರಿಕೆ ಮಾಡಿರೋದು, ಅದೇ ಥಿಯೇಟರ್ ನಲ್ಲಿ ಸಿನಿಮಾ ನೋಡಬೇಕೆಂದಿದ್ದವರಿಗೆ ನುಂಗಲಾರದ ತುತ್ತಾಗಿದೆ.['ಮುಷ್ಕಿಲ್' ನಲ್ಲಿ ಕರಣ್: ಗೃಹ ಸಚಿವರ ಸಹಾಯ ಕೇಳಿದ ಚಿತ್ರತಂಡ]

  ನಟ ರಣಬೀರ್ ಕಪೂರ್, ನಟಿ ಐಶ್ವರ್ಯ ರೈ, ನಟಿ ಅನುಷ್ಕಾ ಶರ್ಮಾ, ಪಾಕ್ ನಟ ಫವಾದ್ ಖಾನ್ ಕಾಣಿಸಿಕೊಂಡಿರುವ ಈ ಸಿನಿಮಾ ಇದೇ ಶುಕ್ರವಾರ ತೆರೆ ಕಾಣುತ್ತಿದೆ.

  English summary
  Hindi Movie 'Ae Dil Hai Mushkil' with Director Karan Johar as a director is receiving a lot of good response even before the release. Rs 2200: The most expensive ticket available for 'ADHM'. Bollywood Actress Aishwarya Rai, Bollywood Actor Ranbir Kapoor, Bollywood Actress Anushka Sharma in the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X