For Quick Alerts
  ALLOW NOTIFICATIONS  
  For Daily Alerts

  ಕರಣ್ ಜೋಹರ್ 'ಕಾಫಿ ವಿಥ್ ಕರಣ್' ಶೋಗೆ ಸಮಂತಾ ಕರೆದಿದ್ದು ಯಾಕೆ? ಏನಂತಿದೆ ಟಾಲಿವುಡ್?

  |

  ನಾಗಚೈತನ್ಯ ಜೊತೆ ವಿಚ್ಛೇದನದ ಬಳಿಕ ಸಮಂತಾ ಫುಲ್ ಬ್ಯುಸಿಯಾಗಿದ್ದಾರೆ. ತೆಲುಗು ಹಾಗೂ ಹಿಂದಿಯ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಬಿಡುವು ಸಿಕ್ಕಾಗಲೆಲ್ಲಾ ವಿದೇಶಕ್ಕೆ ಹಾರುತ್ತಿದ್ದಾರೆ. ಲೈಫ್ ಎಂಜಾಯ್ ಮಾಡುತ್ತಾರೆ.

  ಬಾಲಿವುಡ್‌ ಮಂದಿಗೆ ಸಮಂತಾ ಹೊಸ ಪರಿಚಯವಲ್ಲ. ಹಿಂದಿ ಪ್ರೇಕ್ಷಕರಿಗೂ ಸಮಂತಾ ಚೆನ್ನಾಗಿಯೇ ಪರಿಚಯವಿದೆ. ಅದರಲ್ಲೂ ವಿಚ್ಛೇದನದ ಬಳಿಕವಂತೂ ಸಮಂತಾ ಬೆಂಬಲಕ್ಕೆ ಪ್ರೇಕ್ಷಕರು ನಿಂತಿದ್ದರು. ಈಗ ಬಾಲಿವುಡ್‌ಗೂ ಎಂಟ್ರಿ ಕೊಡುವುದಕ್ಕೆ ಸಮಂತಾ ತುದಿಗಾಲಲ್ಲಿ ನಿಂತಿದ್ದಾರೆ.

  ವಿಚ್ಛೇದನದ ಬಳಿಕ ನಾಗಚೈತನ್ಯಗೆ ಮತ್ತೆ ಸಮಂತಾ ಮೇಲೆ ಲವ್? ಸುಳಿವು ಕೊಟ್ಟ ಆ ಫೋಟೊ ಯಾವುದು?ವಿಚ್ಛೇದನದ ಬಳಿಕ ನಾಗಚೈತನ್ಯಗೆ ಮತ್ತೆ ಸಮಂತಾ ಮೇಲೆ ಲವ್? ಸುಳಿವು ಕೊಟ್ಟ ಆ ಫೋಟೊ ಯಾವುದು?

  ಸದ್ಯ ಸಮಂತಾ ಬಾಲಿವುಡ್‌ನ ಸ್ಟಾರ್ ನಿರ್ದೇಶಕ ಕಮ್ ನಿರ್ಮಾಪಕ ಕರಣ್‌ ಜೋಹರ್ ನಡೆಸಿಕೊಡುವ 'ಕಾಫಿ ವಿಥ್ ಕರಣ್' ಶೋನಲ್ಲಿ ಭಾಗವಹಿಸಿದ್ದಾರೆ. ಬಾಲಿವುಡ್‌ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಜೊತೆ ಸಮಂತಾ ಕಾಣಿಸಿಕೊಳ್ಳಲಿದ್ದಾರೆ. ಅಷ್ಟಕ್ಕೂ 'ಕಾಫಿ ವಿಥ್ ಕರಣ್‌' ಸೀಸನ್‌ 7ಗೆ ಸಮಂತಾ ಎಂಟ್ರಿ ಕೊಟ್ಟಿದ್ದೇಕೆ? ಅನ್ನುವುದು ಟಾಲಿವುಡ್‌ನಲ್ಲಿ ಚರ್ಚೆಯಾಗ್ತಿದೆ. ಈ ವಿಷಯಕ್ಕೆ ಸ್ವತ: ಕರಣ್‌ ಜೋಹರ್ ಉತ್ತರವನ್ನೂ ನೀಡಿದ್ದಾರೆ. ಆದರೆ, ಟಾಲಿವುಡ್ ಮಾತ್ರ ಬೇರೆನೇ ಹೇಳುತ್ತಿದೆ.

  'ಕಾಫಿ ವಿಥ್ ಕರಣ್ ಶೋ'ಗೆ ಸಮಂತಾ ಎಂಟ್ರಿ ಯಾಕೆ?

  'ಕಾಫಿ ವಿಥ್ ಕರಣ್ ಶೋ'ಗೆ ಸಮಂತಾ ಎಂಟ್ರಿ ಯಾಕೆ?

  ಸಮಂತಾ ಜೊತೆ ಅಕ್ಷಯ್ ಕುಮಾರ್ ಕೂಡ ಬಂದಿರುವುದರಿಂದ ಫ್ಯಾನ್ಸ್ ಕೊಂಚ ಉತ್ಸುಕರಾಗಿದ್ದಾರೆ. ಅಕ್ಷಯ್ ಕುಮಾರ್ ಹಾಗೂ ಸಮಂತಾ ಇಬ್ಬರೂ ಸಿನಿಮಾ ಮಾಡುತ್ತಾರಾ? ಎಂಬ ಅನುಮಾನ ಮೂಡಿದೆ. ಆದರೆ, ಕರಣ್ ಜೋಹರ್ ಹೇಳುವುದೇ ಬೇರೆ. "ಓರ್ಮ್ಯಾಕ್ಸ್ ಒಂದು ಸರ್ವೆಯನ್ನು ರಿಲೀಸ್ ಮಾಡಿತ್ತು. ಇದರಲ್ಲಿ ಸಮಂತಾ ಪ್ಯಾನ್ ಇಂಡಿಯಾ ಪಟ್ಟಿಯಲ್ಲಿ ಟಾಪ್‌ನಲ್ಲಿದ್ದರು. ಹಾಗೇ ಓರ್ಮ್ಯಾಕ್ಸ್ ಪಟ್ಟಿಯಲ್ಲಿದ್ದ ಏಕೈಕ ಬಾಲಿವುಡ್‌ ನಟ ಅಕ್ಷಯ್ ಕುಮಾರ್ ಆಗಿದ್ದರು. ಈ ಕಾರಣಕ್ಕೆ ಇಬ್ಬರನ್ನು ಒಟ್ಟಿಗೆ ಕರೆತಂದಿದ್ದೇವೆ." ಎಂದು ಹೇಳಿಕೆ ನೀಡಿದ್ದರು.

  ಹಲ್-ಚಲ್ ಎಬ್ಬಿಸಿದ ಸಮಂತಾ ಇನ್‌ಸ್ಟಾಗ್ರಾಂ ಪೋಸ್ಟ್: ಕೂಡಲೇ ಡಿಲೀಟ್!ಹಲ್-ಚಲ್ ಎಬ್ಬಿಸಿದ ಸಮಂತಾ ಇನ್‌ಸ್ಟಾಗ್ರಾಂ ಪೋಸ್ಟ್: ಕೂಡಲೇ ಡಿಲೀಟ್!

  ಸಮಂತಾಗೆ ಕರಣ್ ಸಹಾಯಹಸ್ತ

  ಸಮಂತಾಗೆ ಕರಣ್ ಸಹಾಯಹಸ್ತ

  ಕರಣ್ ಜೋಹಾರ್ ಏನೇ ಹೇಳಿದರೂ, ಟಾಲಿವುಡ್ ಮಾತ್ರ ಬೇರೆನೇ ಹೇಳುತ್ತಿದೆ. ಸಮಂತಾ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿರುವ ವಿಚಾರ ಗೊತ್ತೇ ಇದೆ. ಈಗಾಗಲೇ ಕೆಲವು ಪ್ರಾಜೆಕ್ಟ್‌ಗಳು ಕೂಡ ಸಮಂತಾಗೆ ಸಿಕ್ಕಿವೆ. ಸಿನಿಮಾ ಸಿಕ್ಕಿದರೂ ಗಟ್ಟಿಯಾಗಿ ನೆಲೆಯೂರಲು ಗಾಢ್ ಫಾದರ್ ಬೇಕೇ ಬೇಕು. ಅದಕ್ಕೆ ಸಮಂತಾ ಬಾಲಿವುಡ್ ಎಂಟ್ರಿಗೆ ಕರಣ್‌ ಜೋಹರ್ ಸಹಾಯ ಮಾಡುತ್ತಿದ್ದಾರೆ. ಈ ಕಾರಣಕ್ಕೆ ನಟಿಯನ್ನು ತಮ್ಮ ಫೇಮಸ್ ಶೋ 'ಕಾಫಿ ವಿಥ್ ಕರಣ್: ಸೀಸನ್ 7"ಗೆ ಕರೆದಿದ್ದಾರೆ ಎಂದು ಟಾಲಿವುಡ್ ಹೇಳುತ್ತಿದೆ.

  ವೆಬ್ ಸಿರೀಸ್‌ನಲ್ಲಿ ಮಿಂಚಿದ್ದ ಸಮಂತಾ

  ವೆಬ್ ಸಿರೀಸ್‌ನಲ್ಲಿ ಮಿಂಚಿದ್ದ ಸಮಂತಾ

  ಸಮಂತಾ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿಲ್ಲ ಅಷ್ಟೇ. ಆದರೆ, ಈಗಾಗಲೇ ಸ್ಯಾಮ್ ' ದಿ ಫ್ಯಾಮಿ ಮ್ಯಾನ್ 2' ವೆಬ್ ಸಿರೀಸ್ ಮೂಲಕ ಬಾಲಿವುಡ್ ತಾರೆಯರೊಂದಿಗೆ ಕೆಲಸ ಮಾಡಿದ್ದಾರೆ. ರಾಜಿ ಪಾತ್ರದಲ್ಲಿ ಸಮಂತಾ ಒಟಿಟಿ ಪ್ರಿಯರ ಮೆಚ್ಚುಗೆ ಗಳಿಸಿದ್ದರು. ಇಲ್ಲಿಂದ ಸಮಂತಾ ಬಾಲಿವುಡ್ ಎಂಟ್ರಿ ಬಗ್ಗೆ ಚರ್ಚೆಯಾಗುತ್ತಲೇ ಇದೆ. ಕೊನೆಗೂ ಸಮಂತಾ ಎಂಟ್ರಿಗೆ ವೇದಿಕೆ ಸಜ್ಜಾಗಿದೆ.

  ಬಾಲಿವುಡ್‌ ನಲ್ಲಿ ಸಮಂತಾ ಬ್ಯುಸಿ

  ಬಾಲಿವುಡ್‌ ನಲ್ಲಿ ಸಮಂತಾ ಬ್ಯುಸಿ

  ಸಮಂತಾ ಬಾಲಿವುಡ್‌ನಲ್ಲಿ ಈಗಾಗಲೇ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಮೂಲಗಳ ಪ್ರಕಾರ, ಸಮಂತಾ ನಟ ಆಯುಷ್ಮಾನ್ ಖುರಾನ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಅಕ್ಷಯ್ ಕುಮಾರ್ ಹಾಗೂ ವಿಕ್ಕಿ ಕೌಶಲ್ ಜೊತೆನೂ ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಸಮಂತಾ ಇದೂವರೆಗೂ ಅಧಿಕೃತ ಹೇಳಿಕೆ ನೀಡಿಲ್ಲ.

  English summary
  Rumour Is That Karan Johar Helping Samantha To entere Bollywood and Establish Herself, Know More.
  Saturday, July 9, 2022, 18:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X