For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ 'ಏಕ್ ಥಾ ಟೈಗರ್' ಬೊಂಬಾಟ್ ಗಳಿಕೆ

  |

  ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಜೋಡಿಯ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಇತ್ತೀಚಿನ ಚಿತ್ರ 'ಏಕ್ ಥಾ ಟೈಗರ್', ಇಂಡಿಯನ್ ಬಾಕ್ಸ್ ಆಫೀಸ್ ನಲ್ಲಿ ಭಾರಿ ಗಳಿಕೆ ದಾಖಲಿಸಿದೆ. ಈ ಚಿತ್ರವು ಮೊದಲ 5 ದಿನದಲ್ಲೇ ಬರೋಬ್ಬರಿ ರು. 100 ಕೋಟಿ ಗಳಿಸುವುದು ಪಕ್ಕಾ ಎನ್ನಲಾಗಿದೆ. ಈಗಾಗಲೇ 4 ದಿನಗಳಲ್ಲಿ ರು. 77.10 ಕೋಟಿ ಗಳಿಸಿ ಭರ್ಜರಿ 'ಹೌಸ್ ಫುಲ್' ಪ್ರದರ್ಶನ ಕಾಣುತ್ತಿರುವ ಈ 'ಟೈಗರ್', ದಿನೇ ದಿನೇ ಗಳಿಕೆಯಲ್ಲಿ ಏರಿಕೆ ದಾಖಲಿಸುತ್ತಿದೆ.

  ಮೊದಲ ದಿನವೇ ಹೃತಿಕ್ ರೋಶನ್ ಅವರ 'ಅಗ್ನಿಪಥ್' ಗಳಿಕೆ (ರು. 23 ಕೋಟಿ)ಯನ್ನು ಹಿಮ್ಮೆಟ್ಟಿಸಿದ ಕೀರ್ತಿಗೆ ಪಾತ್ರವಾಗಿದ್ದ 'ಟೈಗರ್', ಮೊದಲ ವಾರದ ಗಳಿಕೆಯಲ್ಲಿ ಸಲ್ಲೂ ಈ ಮೊದಲಿನ ಚಿತ್ರ 'ಬಾಡಿಗಾರ್ಡ್' ಗಳಿಕೆಯನ್ನು ಮೀರಿಸಿದೆ. ಒಂದು ವಾರದಲ್ಲಿ ಬಾಡಿಗಾರ್ಡ್ ಚಿತ್ರ ಗಳಿಸಿದ್ದ ರು. 85.50 ನ್ನು ಈ 'ಟೈಗರ್' ಚಿತ್ರವು ನಾಲ್ಕೇ ದಿನಗಳಲ್ಲಿ ರು. 77.10 ಕೋಟಿ ಗಳಿಸಿ ಅದನ್ನು ಸಮೀಪಿಸಿ ಆ ದಾಖಲೆ ಧೂಳಿಪಟ ಗ್ಯಾರಂಟಿ ಎಂಬ ಸಂದೇಶ ನೀಡಿದೆ.

  ಕಬೀರ್ ಖಾನ್ ನಿರ್ದೇಶನದ ಏಕ್ ಥಾ ಟೈಗರ್ ಚಿತ್ರವು, ಮೊದಲ ದಿನವೇ ರು. 32.92 ಕೋಟಿ ಗಳಿಸಿ ದಾಖಲೆ ಮೆರೆದಿದೆ. ನಂತರ ಎರಡನೆ ದಿನ ರು. 14.50, ಮೂರನೆ ದಿನ ರು. 12.90 ಹಾಗೂ ನಾಲ್ಕನೆ ದಿನ ರು. 16.75 ಗಳಿಸಿ ಬರೋಬ್ಬರಿ ರು. 77.10 ಕೋಟಿ ಗಳಿಸಿರುವ ಈ ಚಿತ್ರ ಐದನೇ ದಿನ ಅಂದರೆ ಭಾನುವಾರ ರು. 23 ಕೋಟಿ ಗಳಿಸಿದರೆ ಒಟ್ಟೂ ರು. 100 ಕೋಟಿ ಗಳಿಸಿದಂತಾಗುತ್ತದೆ. ಸಿಕ್ಕ ಮಾಹಿತಿ ಪ್ರಕಾರ ಭಾನುವಾರ ರು. 23 ಕೋಟಿ ಗಳಿಸುವುದು ಪಕ್ಕಾ ಎನ್ನಲಾಗಿದೆ.

  ಈ ಮೂಲಕ ಕೇವಲ ಐದೇ ದಿನದಲ್ಲಿ ರು. 100 ಕೋಟಿ ಗಳಿಸಿ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಬರೆಯಲಿರುವ 'ಏಕ್ ಥಾ ಟೈಗರ್' ಚಿತ್ರದ ಪ್ರಮುಖ ಆಕರ್ಷಣೆ ನಟ ಸಲ್ಮಾನ್ ಖಾನ್ ಎಂಬುದು ನಿಸ್ಸಂದೇಹ. ಜತೆಯಾಗಿರುವ ಕತ್ರಿನಾ ಜಾದೂ ಕೂಡ ಗಳಿಕೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವುದನ್ನು ಅಲ್ಲಗಳೆಯಲಾಗದು. ಇಷ್ಟೇ ಅಲ್ಲ, ನೈಜ ಕಥೆ, ನವಿರಾದ ಸಂಗೀತ, ಅಮೋಘ ಎನ್ನಿಸುವ ಕ್ಯಾಮರಾ ವರ್ಕ್ ಇವೂ ಕೂಡ ಯಶಸ್ಸಿಗೆ ಸಖತ್ ಸಾಥ್ ನೀಡಿವೆ. (ಏಜೆನ್ಸೀಸ್)

  English summary
  Salman Khan and Katrina Kaif starrer latest Hindi movie Ek Tha Tiger, released on August 15, has done superb collections at the Indian Box Office. It has scored Rs 77.10 crores nett at the Indian collection centers in four days. It would add Rs 23 crores nett on Sunday to make it Rs 100 crore in its first weekend at the Box Office.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X