For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಸದಾ ನನ್ನಲ್ಲಿ ನಂಬಿಕೆ ಇಟ್ಟಿದ್ದಾರೆ: ಕತ್ರಿನಾ ಹೀಗೆ ಹೇಳಿದ್ಯಾಕೆ?

  By Suneel
  |

  ಸಲ್ಮಾನ್ ಖಾನ್ ಮತ್ತು ಬಾರ್ಬಿ ಗರ್ಲ್ ಕತ್ರಿನಾ ಕೈಫ್ ಮಾಜಿ ಪ್ರೇಮಿಗಳು ಅನ್ನೋದು ಜಗಜ್ಜಾಹೀರು ಆಗಿರುವ ವಿಷಯ. ಇಬ್ಬರೂ ಜೊತೆಯಲ್ಲಿ ಇರುತ್ತಾರೋ.. ಇಲ್ಲವೋ ಆದರೆ ಒಬ್ಬರಿಗೊಬ್ಬರೂ ಸ್ಪೆಷಲ್.[ಪ್ಲೀಸ್.. ಸಲ್ಮಾನ್ ನನಗೆ ಬಿಟ್ಟುಬಿಡು: ಆಲಿಯಾ'ಗೆ ಕತ್ರಿನಾ ರಿಕ್ವೆಸ್ಟ್]

  'ಏಕ್ ಥ ಟೈಗರ್' ಜೋಡಿ ಕತ್ರಿನಾ ಮತ್ತು ಸಲ್ಲು ಸದ್ಯದಲ್ಲೇ 'ಟೈಗರ್ ಜಿಂದಾ ಹೈ' ಚಿತ್ರದಲ್ಲಿ ಮತ್ತೆ ತೆರೆ ಹಂಚಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೆ ಕತ್ರಿನಾ ಕೈಫ್ ಫಿಲ್ಮ್ ಫೇರ್ ಗೆ ನೀಡಿದ ಸಂದರ್ಶನದಲ್ಲಿ ಸಲ್ಮಾನ್ ಖಾನ್ ತಮಗೆ ನಿರಂತರವಾಗಿ ಹೇಗೆ ಮಾರ್ಗದರ್ಶನ ನೀಡುತ್ತಿದ್ದಾರೆ, ತಮ್ಮ ಜೀವನದಲ್ಲಿ ಹೇಗೆ ಪ್ರಭಾವ ಬೀರಿದ್ದಾರೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಸಲ್ಲು ಬಗ್ಗೆ ಕ್ಯಾಟ್ ಏನೆಲ್ಲಾ ಹೇಳಿದ್ರು ಅನ್ನೋದನ್ನ ಮುಂದೆ ಓದಿರಿ..

  ಕತ್ರಿನಾಗೆ ಶಕ್ತಿಯೇ ಸಲ್ಲು

  ಕತ್ರಿನಾಗೆ ಶಕ್ತಿಯೇ ಸಲ್ಲು

  ಸಂದರ್ಶನದಲ್ಲಿ ಸಲ್ಮಾನ್ ಕುರಿತು ಕ್ಯಾಟ್, "ಸಲ್ಮಾನ್ ಜನರಿಗೆ ಸಹಾಯ ಮಾಡುವ ಮಾತೃ ಹೃದಯ ಹೊಂದಿರುವವರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಸಲ್ಲು ನನ್ನ ಜೀವನದ ಗ್ರೇಟೆಸ್ಟ್ ಸ್ಟ್ರೆಂತ್ (ದೊಡ್ಡ ಶಕ್ತಿ)" ಎಂದು ಹೇಳಿದ್ದಾರೆ.[ಸಲ್ಮಾನ್ ಬಗ್ಗೆ ಬೇಸರಗೊಂಡ ಕತ್ರಿನಾ ಕೈಫ್: ಏಕೆ ಗೊತ್ತಾ?]

  ಪ್ರತಿ ಹಂತದಲ್ಲೂ ಪ್ರೋತ್ಸಾಹಿಸಿದ್ದಾರೆ

  ಪ್ರತಿ ಹಂತದಲ್ಲೂ ಪ್ರೋತ್ಸಾಹಿಸಿದ್ದಾರೆ

  "ಸಲ್ಮಾನ್ ಖಾನ್ ನನ್ನೊಂದಿಗಿನ ಗೆಳೆತನದಲ್ಲಿ ಯಾವತ್ತು ಬದಲಾಗಿಲ್ಲ. ಪ್ರತಿ ಸಂದರ್ಭದಲ್ಲೂ ಪ್ರೋತ್ಸಾಹಿಸಿದ್ದಾರೆ. ಹಾರ್ಡ್ ವರ್ಕ್‌ ಮಾಡಿ ಸಿನಿಮಾ ಜಗತ್ತಿನಲ್ಲಿ ನನ್ನ ಕಾಲ ಮೇಲೆ ನಾನು ನಿಲ್ಲಲು ಸಹಕರಿಸಿದ್ದಾರೆ" - ಕತ್ರಿನಾ ಕೈಫ್

  ಸಲ್ಲು ಜೊತೆಗಿನ ಒಳ್ಳೆಯ ಮತ್ತು ಕೆಟ್ಟ ಕ್ಷಣಗಳು

  ಸಲ್ಲು ಜೊತೆಗಿನ ಒಳ್ಳೆಯ ಮತ್ತು ಕೆಟ್ಟ ಕ್ಷಣಗಳು

  ಈ ಬಗ್ಗೆ ವಿವರಿಸಿದ ಕತ್ರಿನಾ, "ನನ್ನಲ್ಲಿ ಸದಾ ನಂಬಿಕೆ ಇಟ್ಟಿದ್ದಾರೆ ಅವರು. ನಾನು 2003 ರಲ್ಲಿ 'ಸಾಯ' ಚಿತ್ರಕ್ಕಾಗಿ ದೆವ್ವದ ಪಾತ್ರದಲ್ಲಿ ರಾತ್ರಿ ಇಡೀ ಒಮ್ಮೆ ನಟಿಸಿದ್ದೆ. ಈ ಪಾತ್ರಕ್ಕಾಗಿ ಎರಡು ದಿನ ಅಭಿನಯಿಸಿದ ನಂತರ ಚಿತ್ರತಂಡದಿಂದ ಹೊರಹೋಗುತ್ತೇನೆ ಎಂದು ಹೇಳಿಬಂದಿದ್ದೆ. ಕಾರಣ ಕಣ್ಣಿಗೆ ತುಂಬಾ ತೊಂದರೆ ಆಗಿತ್ತು. ನಂತರ ಒಮ್ಮೆ ಸಲ್ಮಾನ್ ಜೊತೆ ನನ್ನ ಸಿನಿ ಕೆರಿಯರ್ ಮುಗಿಯಿತು, ಮೊದಲ ಚಿತ್ರದಿಂದಲೇ ಹೊರಬಂದಿದ್ದೇನೆ ಎಂದು ಅಳಲು ತೋಡಿಕೊಂಡಿದ್ದೆ. ಆದರೆ ಸಲ್ಲು ನಾನು ಈ ರೀತಿ ಹೇಳಬೇಕಾದ್ರೆ ಸಿಕ್ಕಾಪಟ್ಟೆ ನಕ್ಕಿದ್ದರು. ಅದನ್ನ ಮರೆಯಲು ಆಗೊಲ್ಲ" - ಕತ್ರಿನಾ ಕೈಫ್

  ಇದೆ ಕೊನೆಯಲ್ಲ ಎಂದು ಹೇಳಿದ ಸಲ್ಲು

  ಇದೆ ಕೊನೆಯಲ್ಲ ಎಂದು ಹೇಳಿದ ಸಲ್ಲು

  "ನಂತರ ನನಗೆ ಸಮಾಧಾನ ಮಾಡಿ, ನೀನು ಇನ್ನೂ ಚಿತ್ರ ಜಗತ್ತನ್ನು ಅರ್ಥ ಮಾಡಿಕೊಂಡಿಲ್ಲ. ಆ ರೀತಿ ಏನು ಆಗೋದಿಲ್ಲ. ಇದೆಲ್ಲ ಮಾಮೂಲು. ಆದರೆ ಹಾರ್ಡ್‌ ವರ್ಕ್ ಮಾಡುವುದರ ಮೇಲೆ ಗಮನ ಹರಿಸು ಎಂದು ಹೇಳಿ... ಬಾಲಿವುಡ್ ನಲ್ಲಿ ನೆಲೆ ಕಂಡುಕೊಳ್ಳಲು ಸಹಾಯ ಮಾಡಿದರು" -ಕತ್ರಿನಾ ಕೈಫ್

  English summary
  Salman Khan and Katrina Kaif, Whether they are together or not, but they have always been special for each other. During a recent interview with Filmfare Katrina Kaif opened up about Salman Khan, shared how he has been a constant mentor in her life.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X