For Quick Alerts
  ALLOW NOTIFICATIONS  
  For Daily Alerts

  ಚಿರು ಜೊತೆ ಸಲ್ಲು ನಟಿಸಿದ್ದಾಯ್ತು.. ಈಗ ಭಾಯ್ಜಾನ್ ಚಿತ್ರದಲ್ಲಿ ಚರಣ್ ನಟಿಸೋದು ಕನ್ಫರ್ಮ್!

  |

  ಬಾಲಿವುಡ್ ಸ್ಟಾರ್ಸ್ ಸೌತ್ ಸಿನಿಮಾಗಳಲ್ಲಿ ನಟಿಸೋದು, ಸೌತ್ ಸ್ಟಾರ್ಸ್ ಬಿಟೌನ್ ಸಿನಿಮಾಗಳಲ್ಲಿ ನಟಿಸೋದು ಕಾಮನ್ ಆಗಿಬಿಟ್ಟಿದೆ. ಚಿರಂಜೀವಿ ಜೊತೆಗಿನ ಸ್ನೇಹಕ್ಕಾಗಿ 'ಗಾಡ್‌ಫಾದರ್' ಚಿತ್ರದಲ್ಲಿ ಸಲ್ಮಾನ್ ಖಾನ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಇದೀಗ ಸಲ್ಲು ಚಿತ್ರದಲ್ಲಿ ಚರಣ್ ನಟಿಸೋ ಸುದ್ದಿ ಬಂದಿದೆ. ಸ್ವತಃ ಸಲ್ಮಾನ್ ಖಾನ್ ಇದನ್ನು ಸ್ಪಷ್ಟಪಡಿಸಿದ್ದಾರೆ.

  ರಾಮ್‌ಚರಣ್ ತೇಜಾಗೆ ಬಾಲಿವುಡ್ ಹೊಸದೇನು ಅಲ್ಲ. 'ಮಗಧೀರ' ಸಿನಿಮಾ ಸಕ್ಸಸ್ ಬೆನ್ನಲ್ಲೇ ಚರಣ್ ಕ್ರೇಜ್‌ ಹಾಗೂ ಆಕ್ಟಿಂಗ್ ನೋಡಿ ಬಾಲಿವುಡ್‌ನಿಂದ ಬುಲಾವ್ ಬಂದಿತ್ತು. ಅಮಿತಾಬ್ ಬಚ್ಚನ್ ನಟನೆಯ 'ಜಂಜೀರ್' ರೀಮೆಕ್‌ನಲ್ಲಿ ಚರಣ್ ನಟಿಸಿದ್ದರು. ಆದರೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಆ ನಂತರ ಚೆರ್ರಿ ಮತ್ತೆ ಬಾಲಿವುಡ್ ಕಡೆ ಹೋಗುವ ಮನಸ್ಸು ಮಾಡಲಿಲ್ಲ. ಸಲ್ಲು 'ಗಾಡ್‌ಫಾದರ್' ಚಿತ್ರದಲ್ಲಿ ನಟಿಸಿದ ತಾನು ಹಠ ಮಾಡಿ ಸಲ್ಮಾನ್ ಖಾನ್ ಚಿತ್ರದಲ್ಲಿ ಚರಣ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ.

  "ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಇದೆ": ಸಲ್ಮಾನ್ ಖಾನ್ ಹೇಳಿಕೆ ವೈರಲ್!

  ಸಲ್ಮಾನ್ ಖಾನ್ ಸದ್ಯ ತಮಿಳಿನ 'ವೀರಂ' ಸಿನಿಮಾ ರೀಮೆಕ್‌ನಲ್ಲಿ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದಲ್ಲಿ ನಟಿಸ್ತಿದ್ದಾರೆ. ಈ ಚಿತ್ರದ ಕನ್ನಡ ರೀಮೆಕ್‌ 'ಒಡೆಯ' ಚಿತ್ರದಲ್ಲಿ ದರ್ಶನ್ ನಟಿಸಿದ್ದರು. ಹೈದರಾಬಾದ್‌ನಲ್ಲಿ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ಶೂಟಿಂಗ್ ವೇಳೆ ಚರಣ್ ಸೆಟ್‌ಗೆ ಬಂದಿದ್ದರು. ನಾನು ಈ ಚಿತ್ರದಲ್ಲಿ ನಟಿಸ್ತೀನಿ ಅಂದರಂತೆ. ಸಲ್ಲು ಯಾವ ಪಾತ್ರ ಮಾಡ್ತೀರಾ ಎಂದರಂತೆ. ಅದೆಲ್ಲ ಗೊತ್ತಿಲ್ಲ ನಾನು ನಿಮ್ಮ ಜೊತೆ ಇರಬೇಕು ಎಂದು ಚರಣ್ ಹೇಳಿದ್ದಾರೆ. ಸರಿ ಈಗ ಹೊರಡಿ ಎಂದು ಚರಣ್‌ನ ಸಾಗ ಹಾಕಿದ್ದರಂತೆ. ಆದರೆ ಮಾರನೇ ದಿನ ಕಾಸ್ಟ್ಯೂಮ್ ಸಮೇತ ಚರಣ್ ಸೆಟ್‌ ಹೋಗಿ ನಟಿಸ್ತೀನಿ ಎಂದರಂತೆ. ಸಲ್ಲು ಕೂಡ ಓಕೆ ಎಂದಿದ್ದಾರೆ. ಹೀಗೆ ಇಬ್ಬರು ಒಂದೇ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ.

  Salman Khan confirms Ram Charan’s cameo in his kisi ka bhai kisi ki jaan

  ಫರ್ಹಾದ್ ಸಮ್ಜಿ ನಿರ್ದೇಶನದ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸ್ತಿದ್ದಾರೆ. ಚಿತ್ರಕ್ಕೆ 'KGF' ಸಿನಿಮಾ ಖ್ಯಾತಿಯ ಕನ್ನಡಿಗ ರವಿಬಸ್ರೂರು ಹಿನ್ನೆಲೆ ಸಂಗೀತ ಸಂಯೋಜನೆ ಮಾಡ್ತಿರೋದು ವಿಶೇಷ. ಸದ್ಯ ಚಿತ್ರದ ಟೀಸರ್ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ.ಲುಗಿನ ವಿಕ್ಟರಿ ವೆಂಕಟೇಶ್ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ಸ್ಪೆಷಲ್ ರೋಲ್‌ನಲ್ಲಿ ನಟಿಸ್ತಿದ್ದಾರೆ. ಇನ್ನು ಸಹೋದರರ ಪಾತ್ರಗಳಲ್ಲಿ ರಾಘವ್ ಜಯಲ್, ಜೆಸ್ಸಿ ಗಿಲ್, ಸಿದ್ಧಾರ್ಥ್ ನಿಗಮ್ ನಟಿಸುತ್ತಿದ್ದಾರೆ. ಶೆಹನಾಜ್ ಗಿಲ್, ಮಾಳವಿಕಾ ಶರ್ಮಾ ತಾರಾಗಣದಲ್ಲಿದ್ದಾರೆ.

  English summary
  Salman Khan confirms Ram Charan’s cameo in his kisi ka bhai kisi ki jaan. Know More.
  Sunday, October 2, 2022, 18:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X