ಕೇರಳಕ್ಕೆ 12 ಕೋಟಿ ಕೊಟ್ಟ ಸಲ್ಮಾನ್ ಖಾನ್: ಟ್ವೀಟ್ ಮಾಡಿ ಡಿಲೀಟ್ ಮಾಡಿದ ನಟ
ಕೇರಳ ಸಂತ್ರಸ್ಥರ ಪರಿಹಾರ ನಿಧಿಗೆ ಸಿನಿಮಾ ನಟರು ದೊಡ್ಡ ಮಟ್ಟದಲ್ಲಿ ನೆರವಾಗಿದ್ದಾರೆ. ಆದ್ರೆ, ಕೆಲವು ನಟರು ಎಷ್ಟು ಹಣ ನೀಡಿದ್ದಾರೆ ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ.
ಈ ಹಿಂದೆ ಸನ್ನಿ ಲಿಯೋನ್ ಕೇರಳಗೆ 5 ಕೋಟಿ ನೀಡಿದ್ದಾರೆ ಎನ್ನಲಾಯಿತು. ಈ ಬಗ್ಗೆ ಕೇರಳ ಸರ್ಕಾರ ಆಗಲಿ ಅಥವಾ ಸನ್ನಿ ಲಿಯೋನ್ ಆಗಿ ಖಚಿತ ಪಡಿಸಿರಲಿಲ್ಲ. ನಂತರ ಸನ್ನಿಯ ಆಪ್ತರು ಈ ಸುದ್ದಿಯನ್ನ ಖಚಿತಪಡಿಸಿದರು. ಅದಾದ ನಂತರ ತಮಿಳು ನಟ ವಿಜಯ್ ಕೇರಳಗೆ 14 ಕೋಟಿ ಕೊಟ್ಟರು ಎನ್ನಲಾಯಿತು. ಇದು ಕೂಡ ಬಹಳ ದೊಡ್ಡ ಚರ್ಚೆಗೆ ಕಾರಣವಾಯಿತು.
ನಂತರ ವಿಜಯ್ ಅಭಿಮಾನಿ ಸಂಘದಿಂದ ಸ್ಪಷ್ಟ ಮಾಹಿತಿ ಹೊರಬಿತ್ತು. ವಿಜಯ್ 70 ಲಕ್ಷದ ವರೆಗೂ ಸಹಾಯ ಮಾಡಿದ್ದಾರೆ ಎಂಬುದು ಖಚಿತವಾಯಿತು. ಈಗ ಬಾಲಿವುಡ್ ನಟ ಸಲ್ಮಾನ್ ಖಾನ್ 12 ಕೋಟಿ ರೂಪಾಯಿಯನ್ನ ಕೇರಳಗೆ ನೀಡಿದ್ದಾರೆ ಎಂಬ ಸುದ್ದಿ ಸಿನಿಲೋಕದಲ್ಲಿ ಸದ್ದು ಮಾಡುತ್ತಿದೆ. ಹೀಗಂತಾ ಬಾಲಿವುಡ್ ನ ನಟರೊಬ್ಬರು ಟ್ವೀಟ್ ಮಾಡಿ, ಡಿಲೀಟ್ ಮಾಡಿದ್ದಾರೆ. ಮುಂದೆ ಓದಿ......

ಜಾವೀದ್ ಜಫೇರಿ ಟ್ವೀಟ್
''ಕೇರಳ ಜನರಿಗೆ ಸಲ್ಮಾನ್ ಖಾನ್ ಬಹುದೊಡ್ಡ ಸಹಾಯ ಮಾಡಿದ್ದಾರೆ. ನನ್ನ ಗಮನಕ್ಕೆ ಬಂದ ಪ್ರಕಾರ 12 ಕೋಟಿ ಮೊತ್ತವನ್ನ ಕೇರಳ ಜನತೆಗಾಗಿ ಸಲ್ಲು ಭಾಯ್ ನೀಡಿದ್ದಾರೆ'' ಎಂದು ಬಾಲಿವುಡ್ ನಟ ಜಾವೀದ್ ಜಫೇರಿ ಟ್ವೀಟ್ ಮಾಡಿದ್ದರು. ನಂತರ ಅದನ್ನ ಡಿಲೀಟ್ ಮಾಡಿ, ಮತ್ತೊಂದು ಟ್ವೀಟ್ ಮಾಡಿದರು.

ಖಚಿತವಾದ ನಂತರ ಹೇಳುತ್ತೇನೆ
''ಸಲ್ಮಾನ್ ಖಾನ್ ಕೇರಳಗೆ 12 ಕೋಟಿ ಕೊಟ್ಟಿದ್ದಾರೆ ಎಂದು ನಾನು ಟ್ವೀಟ್ ಮಾಡಿಲ್ಲ. 12 ಕೋಟಿದ್ದಾರೆ ಎಂಬ ವಿಷ್ಯ ನನ್ನ ಕಿವಿಗೂ ಬಿದ್ದಿದೆ ಎಂದು ಟ್ವೀಟ್ ಮಾಡಿದ್ದೆ. ಸಲ್ಲು ಅವರ ಟ್ರ್ಯಾಕ್ ರೆಕಾರ್ಡ್ ನೋಡಿದ್ರೆ, ಇದನ್ನ ಯಾರೂ ಬೇಕಾದ್ರು ನಂಬುತ್ತಾರೆ, ಹಾಗೆ ನಾನು ನಂಬಿದೆ. ಇದರ ಬಗ್ಗೆ ಖಚಿತ ಮಾಹಿತಿ ಸಿಗುವವರೆಗೂ ನನ್ನ ಟ್ವೀಟ್ ನ್ನ ಹಿಂದಕ್ಕೆ ಪಡೆದುಕೊಳ್ಳುತ್ತಿದ್ದೇನೆ'' ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.

ಸಲ್ಮಾನ್ ಖಾನ್ ಎಷ್ಟು ಕೊಟ್ರು.?
ಈಗ ಬಾಲಿವುಡ್ ನಲ್ಲಿ ಒಂದೇ ಚರ್ಚೆ. ಕೇರಳ ಸಂತ್ರಸ್ಥರಿಗಾಗಿ ಸಲ್ಮಾನ್ ಖಾನ್ ಎಷ್ಟು ಕೊಟ್ರು. ಸಹಾಯ ಮಾಡಿದ್ದಾರೋ ಅಥವಾ ಇಲ್ವೋ. ಮಾಡಿದ್ರೆ, ಎಷ್ಟು ಮಾಡಿದ್ದಾರೆ, ಅಥವಾ ಮಾಡದಿದ್ದರೇ ಯಾಕೆ ಮಾಡಿಲ್ಲ ಎಂಬ ಚರ್ಚೆ ನಡೆಯುತ್ತಿದೆ.

ಕೇರಳ ಜೊತೆ ಬಾಲಿವುಡ್ ಮಂದಿ
ಸುಶಾಂತ್ ಸಿಂಗ್ ರಜಪೂತ್ ಒಂದು ಕೋಟಿ, ಅಮಿತಾಬ್ ಬಚ್ಚನ್ 51 ಲಕ್ಷ, ವಿದ್ಯಾ ಬಾಲನ್, ಕಂಗನಾ ರನೌತ್, ಸನ್ನಿ ಲಿಯೋನ್, ಅನುಷ್ಕಾ ಶರ್ಮಾ ಸೇರಿದಂತೆ ಹಲವರು ನೆರವಾಗಿದ್ದಾರೆ. ತಮಿಳು ನಟ ಕಮಲ್ ಹಾಸನ್, ವಿಜಯ್, ಸೂರ್ಯ, ಕಾರ್ತಿ, ಹಾಗೂ ತೆಲುಗು ನಟರಾದ ಚಿರಂಜೀವಿ, ರಾಮ್ ಚರಣ್, ಅಲ್ಲು ಅರ್ಜುನ್, ಮಹೇಶ್ ಬಾಬು, ಕನ್ನಡದ ಪುನೀತ್ ರಾಜ್ ಕುಮಾರ್ ಕೂಡ ಕೇರಳ ಸಂತ್ರಸ್ಥರಿಗಾಗಿ ಸಹಾಯ ಮಾಡಿದ್ದಾರೆ.


Click it and Unblock the Notifications











