For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್ ಸಿನಿಮಾಗೆ ಸಾಥ್ ನೀಡಿದ ಕಮಲ್, ಸಲ್ಮಾನ್, ಮೋಹನ್ ಲಾಲ್

  |

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷೆಯ 'ದರ್ಬಾರ್' ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಬರ್ಜರಿಯಾಗಿ ನಡೆಯುತ್ತಿದೆ. ಇತ್ತೀಚಿಗಷ್ಟೆ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈಗ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಗೆ ತಯಾರಿ ಮಾಡಿಕೊಳ್ಳುತ್ತಿದೆ. 'ಪೆಟ್ಟ' ಸಿನಿಮಾದ ನಂತರ ರಜಿನಿಕಾಂತ್ ದರ್ಬಾರ್ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.

  ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿರುವ ದರ್ಬಾರ್ ಚಿತ್ರದ ಮೋಶನ್ ಪೋಸ್ಟರ್ ಇದೆ ತಿಂಗಳು 7ಕ್ಕೆ ಬಿಡುಗಡೆಯಾಗುತ್ತಿದೆ. ವಿಶೇಷ ಅಂದರೆ ದರ್ಬಾರ್ ಮೋಷನ್ ಪೋಸ್ಟರ್ ಅನ್ನು ಬೇರೆ ಬೇರೆ ಭಾಷೆಯ ಸ್ಟಾರ್ ನಟರು ರಿಲೀಸ್ ಮಾಡುತ್ತಿದ್ದಾರೆ. ಹೌದು, ದರ್ಬಾರ್ ಸಿನಿಮಾ ತಮಿಳು ಸೇರಿದಂತೆ, ಹಿಂದಿ, ತೆಲುಗು ಮತ್ತು ಮಲಯಾಳಂನಲ್ಲಿಯೂ ತೆರೆಗೆ ಬರುತ್ತಿದೆ.

  ಒಟ್ಟಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ ರಜನಿಕಾಂತ್ ಮತ್ತು ಅಮಿತಾಭ್ ಬಚ್ಚನ್ಒಟ್ಟಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ ರಜನಿಕಾಂತ್ ಮತ್ತು ಅಮಿತಾಭ್ ಬಚ್ಚನ್

  ದರ್ಬಾರ್ ಹಿಂದಿ ಪೋಸ್ಟರ್ ಅನ್ನು ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ರಿಲೀಸ್ ಮಾಡುತ್ತಿದ್ದಾರೆ. ಮಲಯಾಳಂ ಮೋಷನ್ ಪೋಸ್ಟರ್ ನಟ ಮೋಹನ್ ಲಾಲ್ ರಿಲೀಸ್ ಮಾಡಲಿದ್ದಾರೆ. ಇನ್ನು ವಿಶೇಷ ಅಂದರೆ ತಮಿಳು ಮತ್ತು ತೆಲುಗು ಮೋಷನ್ ಪೋಸ್ಟರ್ ಅನ್ನು ಸಕಲಕಲಾವಲ್ಲಭ ಕಮಲ್ ಹಾಸನ್ ರಿಲೀಸ್ ಮಾಡುತ್ತಿದ್ದಾರೆ.

  ನವೆಂಬರ್ 7 ಸಂಜೆ 5.30ಕ್ಕೆ ದರ್ಬಾರ್ ಚಿತ್ರದ ಮೋಷನ್ ಪೋಸ್ಟರ್ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ರಜನಿಕಾಂತ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅನೇಕ ವರ್ಷಗಳ ಬಳಿಕ ಸೂಪರ್ ಸ್ಟಾರ್ ಖಾಕಿ ಧರಿಸಿ ಖದರ್ ತೋರಿಸಲು ಸಜ್ಜಾಗಿದ್ದಾರೆ. ರಜನಿಕಾಂತ್ ಗೆ ನಾಯಕಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. ಇನ್ನು ಸೂಪರ್ ಸ್ಟಾರ್ ವಿರುದ್ಧ ಬಾಲಿವುಡ್ ನಟ ಸುನೀಲ್ ಶೆಟ್ಟಿ ವಿಲನ್ ಆಗಿ ಅಬ್ಬರಿಸಿದ್ದಾರೆ. ಚಿತ್ರಕ್ಕೆ ಖ್ಯಾತ ನಿರ್ದೇಶಕ ಎ ಆರ್ ಮುರುಗದಾಸ್ ಆಕ್ಷನ್ ಕಟ್ ಹೇಳಿದ್ದಾರೆ.

  English summary
  Super star Rajinikanth starrer Darbar film motion poster will released by Bollywood actor Salman Khan, Tamil star actor Kamal Hassan and Malayalam Actor Mohan Lal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X