Don't Miss!
- Automobiles
ಮುಂಬರಲಿರುವ ಹೋಂಡಾ ಬೈಕ್ಗಳಿಗೆ DL ಬೇಡ್ವಂತೆ: 10ಕ್ಕೂ ಹೆಚ್ಚು EV ಬಿಡುಗಡೆಗೆ ಸಿದ್ಧತೆ!
- News
Bengaluru Airport: ವಿಮಾನ ನಿಲ್ದಾಣ ಸ್ಪೋಟಿಸುವುದಾಗಿ ಯುವತಿಯಿಂದ ಬೆದರಿಕೆ
- Technology
ಟೆಲಿಗ್ರಾಮ್ನಲ್ಲಿ ವಾಟ್ಸಾಪ್ ಅನ್ನೇ ಮೀರಿಸುವ ಫೀಚರ್ಸ್!; ಬಳಕೆದಾರರಿಗೆ ಸಾಕಷ್ಟು ಅನುಕೂಲ
- Finance
ಅದಾನಿ ಡಾಲರ್ ಬಾಂಡ್ ವಿರುದ್ಧ ಸಾಲ ನೀಡಲು ಸ್ಟಾಡರ್ಡ್ ಚಾರ್ಟೆಡ್ ನಕಾರ: ವರದಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಲ್ಮಾನ್-ಕತ್ರಿನಾ ರಹಸ್ಯ ಸಂಬಂಧ ಇನ್ನೂ ಜೀವಂತ!
ಇತ್ತೀಚಿಗೆ ತಮ್ಮಿಬ್ಬರ ಜೋಡಿಯ 'ಏಕ್ತಾ ಟೈಗರ್' ಚಿತ್ರದ ಪ್ರಚಾರಕಾರ್ಯಕ್ಕಾಗಿ ಈ ಜೋಡಿ ಬಂದಿತ್ತು. 'ಡಿಐಡಿ ಲಿಟ್ಲ್ ಮಾಸ್ಟರ್ಸ್' ವೇದಿಕೆಯಲ್ಲಿ ಈ ಜೋಡಿ ಪ್ರಮೋಶನ್ ಸಲುವಾಗಿ ಕಾಣಿಸಿಕೊಂಡಾಗ, ಜೊತೆಯಲ್ಲಿದ್ದ ಶೋ ಗ್ರಾಂಡ್ ಮಾಸ್ಟರ್ ಮಿಥುನ್ "ಈ ಜೋಡಿಯನ್ನು ನೋಡಿದರೆ ನಮಗೆಲ್ಲಾ ಈಗಲೂ ಇವರಿಬ್ಬರ ಮಧ್ಯೆ ರಹಸ್ಯ ಸಂಬಂಧವಿದೆ ಎನಿಸುತ್ತಿದೆ. ಅದೆಷ್ಟು ಆತ್ಮೀಯತೆ ಇವರಿಬ್ಬರಲ್ಲಿ ಮನೆಮಾಡಿದೆ" ಎಂದು ಆಶ್ವರ್ಯ ವ್ಯಕ್ತಪಡಿಸಿದ್ದಾರೆ.
ಮುಂದುವರಿದ ಮಿಥುನ್ "ಈ ಏಕ್ತಾ ಟೈಗರ್ ಚಿತ್ರದ ಟೈಗರ್ ಪಾತ್ರವನ್ನು ಕೇವಲ ಸಲ್ಮಾನ್ ಖಾನ್ ಮಾತ್ರ ಮಾಡಲು ಸಾಧ್ಯ" ಎಂದು ಸಲ್ಲೂರನ್ನು ಹೊಗಳಿದ್ದಾರೆ. ಅಷ್ಟೇ ಅಲ್ಲ, "ಕತ್ರಿನಾ ಕೈಫ್ ಈ ಬಗ್ಗೆ ಹೆಚ್ಚು ಹೇಳದಿದ್ದರೂ ಸಲ್ಲೂ ಮತ್ತು ಕತ್ರಿನಾ ಯಾವತ್ತೂ ಹೀಗೆ ಬೆಸ್ಟ್ ಫ್ರೆಂಡ್ಸ್ ಆಗಿರಲಿ ಎಂದು ನಾನು ಪ್ರಾರ್ಥಿಸುತ್ತೇನೆ" ಎಂದಿದ್ದಾರೆ. ಈ ಮಾತಿನ ಮೂಲಕ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿ ಸಲ್ಲೂ-ಕತ್ರಿನಾ ಜೋಡಿಯ ಮಧ್ಯೆ ಈಗಲೂ ಸಂಬಂಧವಿದೆ ಎಂಬುದನ್ನು ಜಗಜ್ಜಾಹೀರು ಮಾಡಿದ್ದಾರೆ.
ಈಗಲೂ ಮುಂದುವರಿದಿರುವ ಅವರಿಬ್ಬರ ರಹಸ್ಯ ಸಂಬಂಧಕ್ಕೆ ಇದೊಂದೇ ಸಾಕ್ಷಿಯೇನಲ್ಲ, ಇನ್ನೂ ಬೇಕಾದಷ್ಟಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಸಲ್ಮಾನ್ ಕತ್ರಿನಾ ಕುರಿತು ಸಾಕಷ್ಟು ಹೊಗಳಿದ್ದಾರೆ. ಅಷ್ಟೇ ಅಲ್ಲ, ಕತ್ರಿನಾ ಕೂಡ ಸಲ್ಮಾನ್ ಬಗ್ಗೆ ಭಾರಿ ಹೊಗಳಿಕೆ ವ್ಯಕ್ತಪಡಿಸಿದ್ದಾರೆ. "ನಾನೊಬ್ಬಳೇ ಈ ಚಿತ್ರದ ಪ್ರಚಾರಕಾರ್ಯದಲ್ಲಿ ಭಾಗಿಯಾಗುವುದಿಲ್ಲ, ಸಲ್ಮಾನೊಟ್ಟಿಗೆ ಹೋಗುತ್ತೇನೆ" ಎನ್ನುವ ಮೂಲಕ ಕತ್ರಿನಾ ತಾವಿಬ್ಬರು ಈಗಲೂ ಬೆಸ್ಟ್ ಫ್ರೆಂಡ್ಸ್ ಎನ್ನುವುದಕ್ಕೆ ಬೇಕಾದಷ್ಟು ಸಾಕ್ಷಿ ಒದಗಿಸಿದ್ದಾರೆ. (ಏಜೆನ್ಸೀಸ್)