»   » ನಾನು 'ಸಿಂಗಲ್' ಅಲ್ಲವೇ ಅಲ್ಲ: ಸಲ್ಮಾನ್ ಖಾನ್

ನಾನು 'ಸಿಂಗಲ್' ಅಲ್ಲವೇ ಅಲ್ಲ: ಸಲ್ಮಾನ್ ಖಾನ್

Posted By:
Subscribe to Filmibeat Kannada

'ಏಕ್ ಥಾ ಟೈಗರ್' ಮೂಲಕ ಬಾಲಿವುಡ್ ನಲ್ಲಿ ನಿರೀಕ್ಷೆಗೂ ಮೀರಿ ಮಿಂಚುತ್ತಿರುವ ನಟ ಸಲ್ಮಾನ್ ಖಾನ್, ಸಿಂಗಲ್' ಅಲ್ವಂತೆ. ಎಲ್ಲರಿಗೂ ಗೊತ್ತಿರುವ ಪ್ರಕಾರ, ಸಲ್ಲೂಗೆ ಇನ್ನೂ ಮದುವೆಯಾಗಿಲ್ಲ. ಆದರೆ ಸಲ್ಮಾನ್ ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ನಾನು ಸಿಂಗಲ್ ಅಲ್ಲ ಎಂದಿದ್ದಾರೆ. ಸಲ್ಲೂ ಮಾತಿನಿಂದ ಬಾಲಿವುಡ್ ಸುದ್ದಿ ಮಾಧ್ಯಮವೀಗ ತಲೆ ಕೆರೆದುಕೊಂಡು ಕೂತಿದೆ.

ಎಲ್ಲರೂ ಸಲ್ಲೂ ಸಿಂಗಲ್, ಮದುವೆ ಯಾವಾಗ ಎಂದು ಬೊಬ್ಬೆ ಹೊಡೆಯುತ್ತಿದ್ದರೆ, ಅತ್ತ ಸಲ್ಲೂ ಮಾತ್ರ "ನಾನು ಸಿಂಗಲ್ ಅಲ್ಲವೇ ಅಲ್ಲ, ತೆರೆಯ ಹಿಂದೆ ಬಹಳಷ್ಟು ರೊಮಾನ್ಸ್ ಮಾಡುತ್ತಿದ್ದೇನೆ" ಎಂದಿದ್ದಾರೆ. ಆದರೆ ಯಾರ ಜೊತೆ ಎಂಬುದನ್ನು ಹೇಳಿಲ್ಲ. ಎಲ್ಲರೂ ನಟಿ ಕತ್ರಿನಾ ಕೈಫ್ ಮೇಲೆ ದೃಷ್ಟಿ ನೆಟ್ಟಿದ್ದಾರೆ. ಆದರೆ ಅದಕ್ಕೆ ತಕ್ಕ ಪುರಾವೆ ಸಿಗುತ್ತಿಲ್ಲ.

ಸಂದರ್ಶನವೊಂದರಲ್ಲಿ 'ನೀವು ರೊಂಮ್ಯಾಂಟಿಕ್ ಮೂವಿ ಮಾಡಲು ಬಯಸುತ್ತೀರಾ?' ಎಂದು ಸಲ್ಮಾನ್ ಖಾನ್ ಅವರಿಗೆ ಕೇಳಲಾಗಿ, ಹೌದು. ನನಗೆ ಚಿತ್ರದಲ್ಲಿ ರೊಮಾನ್ಸ್ ಮಾಡಲು ಸಖತ್ ಇಷ್ಟ. ನಾನು ಹೆಚ್ಚಾಗಿ ರೊಮಾನ್ಸ್ ಮಾಡುತ್ತಲೇ ಇರುತ್ತೇನೆ, ಆದರೆ ಅವೆಲ್ಲ ತೆರೆಯ ಮೇಲಲ್ಲ, ನಿಜ ಜೀವನದಲ್ಲಿ ಎಂಬ ಬಾಂಬ್ ಸ್ಫೋಟಿಸಿದ್ದಾರೆ. ಅಷ್ಟು ಹೇಳಿದ ಸಲ್ಲೂ ಯಾರ ಜೊತೆ ಎಂದು ಹೇಳದೇ ರಹಸ್ಯ ಕಾಪಾಡಿಕೊಂಡಿದ್ದಾರೆ.

"ನಾನು ಮದುವೆ ಎಂಬ ಸಂಪ್ರದಾಯದಲ್ಲಿ ನಂಬಿಕೆ ಹೊಂದಿದ್ದೇನೆ. ನಾನು ಯಾವತ್ತೂ ಬ್ಯಾಚುಲರ್ ಆಗಿಯೇ ಇರಲಾರೆ. ನನಗೂ ಭವಿಷ್ಯದಲ್ಲಿ ಮದುವೆಯಾಗುವ ಯೋಚನೆ ಇದೆ. ಆದರೆ ಸದ್ಯಕ್ಕೆ ಯಾವುದೂ ನಿರ್ಧಾರವಾಗಿಲ್ಲ" ಎಂದಿದ್ದಾರೆ. ಸಲ್ಲೂ ಈ ಮಾತಿನಿಂದ ಅವರು ಮದುವೆಯಾಗುವುದು ಖಾತ್ರಿ ಎಂಬುದು ಜಗಜ್ಜಾಹೀರಾಗಿದೆ. ಮತ್ತದೇ ಪ್ರಶ್ನೆ, ಹುಡುಗಿ ಯಾರು?

'ಏಕ್ ಥಾ ಟೈಗರ್ 'ಸೆಟ್ ನಿಂದ ಬಂದಿರುವ ವದಂತಿ ಪ್ರಕಾರ, ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಮಧ್ಯೆ ಮತ್ತೆ ಸಂಬಂಧ ಗಟ್ಟಿಯಾಗಿದೆ. ಪ್ರೇಮಿಗಳಾಗಿದ್ದ ಈ ಇಬ್ಬರು ಪರಸ್ಪರ ದೂರವಾಗಿ ಕೇವಲ ಸ್ನೇಹಿತರಾಗಿದ್ದರು. ಆದರೆ ಈ ನಡುವೆ, ಏಕ್ ಥಾ ಟೈಗರ್ ಚಿತ್ರ ಅವರಿಬ್ಬರನ್ನೂ ಮತ್ತೆ ಅತಿ ಹತ್ತಿರಕ್ಕೆ ತಂದಿದೆ. ಅಂದರೆ ಅವರಿಬ್ಬರೂ ಮದುವೆಯಾಗಲಿದ್ದಾರೆಯೇ? ಅದು ಮಾತ್ರ ಸಂದೇಹವೇ!

ಕಾರಣ, ಕತ್ರಿನಾ ಕೈಫ್ ಅವರ ನಿಕಟವರ್ತಿಗಳ ಪ್ರಕಾರ ಕತ್ರಿನಾ 'ಲವ್ ಮ್ಯಾರೇಜ್' ಆಗುವುದಿಲ್ಲ. ಅದರಲ್ಲೂ ಬಾಲಿವುಡ್ ನ ಯಾವುದೇ ನಟರನ್ನು ಅವರು ಮದುವೆಯಾಗಲಾರರು. ಕತ್ರಿನಾ ಕೇವಲ ಅರೇಂಜ್ಡ್ ಮದುವೆಯಲ್ಲಿ ಮಾತ್ರ ನಂಬಿಕೆ ಹೊಂದಿರುವವರು. ಹೀಗಾಗಿ, ಸಲ್ಲೂ-ಕತ್ರಿನಾ ಹಸಮಣೆ ಏರುವುದು ಸಂಶಯವೇ. ಹಾಗಾದರೆ ತೆರೆಯ ಹಿಂದೆ ಸಲ್ಲೂ ರೊಮಾನ್ಸ್ ನಡೆಸುತ್ತಿರುವುದು ಯಾರ ಜೊತೆ? ಉತ್ತರಕ್ಕೆ ಮತ್ತೆ ಕತ್ರಿನಾ ಕಡೆ ನೋಡುತ್ತೀರೇಕೆ! (ಏಜೆನ್ಸೀಸ್)

English summary
Salman Khan is not single anymore. Bollywood hunk Salman Khan has recently said that he is doing a lot of romantic stuff off screen. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada