For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ನನ್ನ ಶೂ ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದ ಎಂದ ಖ್ಯಾತ ನಟ

  |

  ಸಲ್ಮಾನ್ ಖಾನ್ ಇಂದು ಭಾರತದ ದೊಡ್ಡ ಸ್ಟಾರ್‌ಗಳಲ್ಲಿ ಒಬ್ಬರು. ಅವರ ಯಾವುದೇ ಸಿನಿಮಾ ಆದರೂ ನೂರಾರು ಕೋಟಿ ಗಳಿಕೆ ಪಕ್ಕಾ.

  ಬಾಲಿವುಡ್‌ನ ಸ್ಟಾರ್ ಆಗಿರುವ ಜೊತೆಗೆ ಬಾಲಿವುಡ್‌ನ ಅತ್ಯಂತ ಪವರ್‌ಫುಲ್ ನಟರೂ ಸಹ. ಬಾಲಿವುಡ್‌ನ ಹಲವು ನಟ-ನಟಿಯರು ಸಲ್ಮಾನ್ ಬಗ್ಗೆ ಮಾತನಾಡಲು ಸಹ ಭಯಪಡುತ್ತಾರೆ. ಅಷ್ಟು ಪವರ್‌ ಫುಲ್ ಇಮೇಜನ್ನು ಸಲ್ಮಾನ್ ಬಾಲಿವುಡ್‌ನಲ್ಲಿ ಸೃಷ್ಟಿಸಿಕೊಂಡಿದ್ದಾರೆ.

  ಆದರೆ ಹಿರಿಯ ನಟರೊಬ್ಬರು, ಸಲ್ಮಾನ್ ಖಾನ್ ನನ್ನ ಶೂಗಳನ್ನು, ಬಟ್ಟೆಗಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದ ಎಂದು ಹೇಳಿದ್ದಾರೆ. ಹಿರಿಯ ನಟ ಜಾಕಿ ಶ್ರಾಫ್ ಮಾಧ್ಯಮಗಳ ಮುಂದೆ ಈ ವಿಷಯ ಬಿಚ್ಚಿಟ್ಟಿದ್ದಾರೆ.

  ನಟ ಜಾಕಿ ಶ್ರಾಫ್ ಅವರು 1988 ರಲ್ಲಿ 'ಫಲಕ್' ಸಿನಿಮಾದಲ್ಲಿ ನಟಿಸುವಾಗ ಸಲ್ಮಾನ್ ಖಾನ್ ಆ ಸಿನಿಮಾದಲ್ಲಿ ಸಹಾಯಕ ನಿರ್ದೇಶಕ ಆಗಿದ್ದ. ನನ್ನ ಬಟ್ಟೆಗಳು, ಶೂಗಳನ್ನು ನೋಡಿಕೊಳ್ಳುವ ಕೆಲಸ ಸಲ್ಮಾನ್‌ಗೆ ವಹಿಸಲಾಗಿತ್ತು' ಎಂದಿದ್ದಾರೆ.

  ಹಲವು ನಿರ್ಮಾಪಕರಿಗೆ ಫೊಟೊ ತೋರಿಸಿದ್ದೆ: ಜಾಕಿ

  ಹಲವು ನಿರ್ಮಾಪಕರಿಗೆ ಫೊಟೊ ತೋರಿಸಿದ್ದೆ: ಜಾಕಿ

  'ಆ ಸಮಯದಲ್ಲಿ ಸಲ್ಮಾನ್‌ಗೆ ಅವಕಾಶ ಕೊಡಿಸುವಲ್ಲಿಯೂ ನನ್ನ ಪಾತ್ರವಿದೆ. ಸಹಾಯಕ ನಿರ್ದೇಶಕನಾಗಿದ್ದಾಗ ನಾನು ಸಲ್ಮಾನ್ ಅನ್ನು ಸಹೋದರನಂತೆ ನೋಡುತ್ತಿದ್ದೆ. ಅವನ ಚಿತ್ರಗಳನ್ನು ಕೆಲವು ಪರಿಚಿತ ನಿರ್ಮಾಪಕರಿಗೆ ತೋರಿಸಿ ಅವಕಾಶ ಕೊಡುವಂತೆ ಹೇಳುತ್ತಿದ್ದೆ' ಎಂದಿದ್ದಾರೆ ಜಾಕಿ.

  ಸಲ್ಮಾನ್ ಖಾನ್ ಯಶಸ್ಸಿನಲ್ಲಿ ನನ್ನ ಪಾಲೂ ಇದೆ: ಜಾಕಿ

  ಸಲ್ಮಾನ್ ಖಾನ್ ಯಶಸ್ಸಿನಲ್ಲಿ ನನ್ನ ಪಾಲೂ ಇದೆ: ಜಾಕಿ

  'ಕೊನೆಗೆ ಕೆ.ಸಿ.ಬಕೋಡಿಯಾ ಅವರ ಸಹೋದರ ಒಬ್ಬರು ಸಲ್ಮಾನ್ ಅನ್ನು 'ಮೈನೆ ಪ್ಯಾರ್ ಕಿಯಾ' ಸಿನಿಮಾದಲ್ಲಿ ಅವಕಾಶ ಕೊಟ್ಟರು ಆ ಸಿನಿಮಾ ಸೂಪರ್ ಹಿಟ್ ಆಗಿ ಸಲ್ಮಾನ್ ಖಾನ್ ಸ್ಟಾರ್ ಆದರು. ಇಂದಿರುವ ಹಂತಕ್ಕೆ ಏರಿದರು. ಸಲ್ಮಾನ್‌ ಸ್ಟಾರ್ ಆಗುವುದರಲ್ಲಿ ನನ್ನ ಯೋಗದಾನವೂ ಇದೆ' ಎಂದಿದ್ದಾರೆ ಜಾಕಿ.

  ನಾವು ಪ್ರತಿದಿನ ಸಿಗುವ ಗೆಳೆಯರಲ್ಲ: ಜಾಕಿ ಶ್ರಾಫ್

  ನಾವು ಪ್ರತಿದಿನ ಸಿಗುವ ಗೆಳೆಯರಲ್ಲ: ಜಾಕಿ ಶ್ರಾಫ್

  'ಹೀಗೆ ನಮ್ಮ ಗೆಳೆತನ ಶುರುವಾಯಿತು. ನಾವು ಪ್ರತಿದಿನ ಸಿಗುವ ಗೆಳೆಯರೇನೂ ಅಲ್ಲ ಆದರೆ ಸಲ್ಮಾನ್ ಯಾವುದೇ ದೊಡ್ಡ ಸಿನಿಮಾ ಮಾಡುವಾಗ ದೊಡ್ಡ ಯೋಚನೆ ಮಾಡುವಾಗ ಖಂಡಿತ ನನ್ನನ್ನು ನೆನಪು ಮಾಡಿಕೊಳ್ಳುತ್ತಾನೆ' ಎಂದಿದ್ದಾರೆ ಜಾಕಿ ಶ್ರಾಫ್.

  Yash ಗೆ ತುಂಬಾ Attitude‌ ಸಿನಿಮಾದಲ್ಲಿ ಯಶಸ್ಸು ಸಿಗಲ್ಲ ಅಂದಿದ್ರು Ramya | Fillmibeat Kannada
  ಕನ್ನಡದಲ್ಲಿಯೂ ನಟಿಸಿರುವ ಜಾಕಿ ಶ್ರಾಫ್

  ಕನ್ನಡದಲ್ಲಿಯೂ ನಟಿಸಿರುವ ಜಾಕಿ ಶ್ರಾಫ್

  ಕನ್ನಡದ 'ಅಣ್ಣಾ ಬಾಂಡ್' ಸಿನಿಮಾದಲ್ಲಿ ನಟಿಸಿರುವ ಜಾಕಿ ಶ್ರಾಫ್, ಸಲ್ಮಾನ್ ಖಾನ್ ನಟಿಸಿರುವ ಇತ್ತೀಚಿನ ಸಿನಿಮಾ 'ರಾಧೆ'ಯಲ್ಲಿ ನಟಿಸಿದ್ದಾರೆ. ಸಿನಿಮಾ ಸಾಕಷ್ಟು ಹಣ ಗಳಿಸಿದೆಯಾದರೂ ಸಿನಿಮಾ ಬಗ್ಗೆ ಬಹಳ ಋಣಾತ್ಮಕ ವಿಮರ್ಶೆ ಬಂದಿದೆ.

  English summary
  Actor Jacki Shroff said Salman Khan use to take care of my shoes and cloths when he is working as assistant director.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X