»   » ನಟ ಸಲ್ಮಾನ್ ಖಾನ್ ಮದುವೆಗೆ ಮುಹೂರ್ತ ಫಿಕ್ಸ್

ನಟ ಸಲ್ಮಾನ್ ಖಾನ್ ಮದುವೆಗೆ ಮುಹೂರ್ತ ಫಿಕ್ಸ್

Posted By:
Subscribe to Filmibeat Kannada

ತನ್ನ ತಂಗಿ ಅರ್ಪಿತಾ ಖಾನ್ ಮದುವೆಯನ್ನು ಅದ್ದೂರಿಯಾಗಿ ಮಾಡಿ ಮುಗಿಸಿದ ಸಲ್ಮಾನ್ ಖಾನ್ ಗೆ ಈ ರೂಟ್ ಕ್ಲಿಯರ್ ಆಗಿದೆ. ಶೀಘ್ರದಲ್ಲೇ ಅವರು ತನ್ನ ಬ್ಯಾಚುಲರ್ ಲೈಫ್ ಗೆ ಗುಡ್ ಬೈ ಹೇಳಲು ಸಿದ್ಧವಾಗಿದ್ದಾರೆ.

ಇತ್ತೀಚೆಗೆ ಬಿಗ್ ಸ್ಟಾರ್ ಎಂಟರ್ ಟೈನ್ ಮೆಂಟ್ ಅವಾರ್ಡ್ಸ್ 2014ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು ತಮ್ಮ ಮದುವೆ ಬಗ್ಗೆ ಬಾಯ್ಬಿಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಅವರಿಗೊಂದು ಪ್ರಶ್ನೆ ತೂರಿಬಂತು. 2015ರಲ್ಲಿ ತಾವು ಏನು ಬದಲಾವಣೆ ಬಯಸಿದ್ದೀರಿ ಎಂಬುದೇ ಆ ಪ್ರಶ್ನೆ. [ತಂಗಿ ಮದುವೆಯಲ್ಲಿ ಸಲ್ಮಾನ್ ಖಾನ್ ಗರ್ಲ್ ಫ್ರೆಂಡ್]

Actor Salman Khan

2015ರಲ್ಲಿ ಮದುವೆಯಾಗಬೇಕೆಂದಿದ್ದೀರಾ ಅಥವಾ ಖಾನ್ ತ್ರಯರಾದ ಸಲ್ಮಾನ್, ಶಾರುಖ್ ಖಾನ್ ಹಾಗೂ ಅಮೀರ್ ಖಾನ್ ಒಟ್ಟಿಗೆ ಸಿನಿಮಾದಲ್ಲಿ ಅಭಿನಯಿಸಬೇಕೆಂದಿದ್ದೀರಾ ಎಂದು ಕೇಳಿದಾಗ. ಮೂವರು ಖಾನ್ ಗಳು ಒಂದೇ ಚಿತ್ರದಲ್ಲಿ ಅಭಿನಯಿಸುವುದಕ್ಕಿಂತ ತಾನು ಮದುವೆಯಾಗಲು ಬಯಸುತ್ತೇನೆ ಎಂದಿದ್ದಾರೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಕಡೆಗೂ ಸಲ್ಲು ಮದುವೆ ಮಾಡಿಕೊಳ್ಳಲು ಮನಸ್ಸು ಮಾಡಿದರಲ್ಲಪ್ಪಾ ಹೋಗಲಿ ಬಿಡಿ. ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು ಎಂದು ಅವರ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಲೇಟಾಗಿಯಾದರೂ ಮದುವೆಯಾಗುತ್ತಿದ್ದಾರಲ್ಲಾ ಎಂಬುದೇ ಅವರಿಗೆ ಸಮಾಧಾನಕರ ಸಂಗತಿ.

ಈ ಹಿಂದೆ ಸಲ್ಲು ಹಲವರೊಂದಿಗೆ ಡೇಟಿಂಗ್ ನಡೆಸಿದ್ದರು. ಸೋಮಿ ಅಲಿ, ಸಂಗೀತಾ ಬಿಜಲಾನಿ, ಐಶ್ವರ್ಯಾ ರೈ, ಕತ್ರಿನಾ ಕೈಫ್. ಆದರೆ ಇವರಾರು ಸಲ್ಲುಗೆ ಬಾಳಸಂಗಾತಿಯಾಗಲಿಲ್ಲ. ಆದರೆ ಈ ಬಾರಿ ಮಾತ್ರ 'ಬಾಡಿಗಾರ್ಡ್' ಸಲ್ಮಾನ್ ಮದುವೆ ಬಗ್ಗೆ ಸೀರಿಯಸ್ ಆಗಿದ್ದಾರೆ.

English summary
Salman Khan is the only actor in his league who is still single and remains as one of the hottest and most eligible bachelor in Bollywood. Salman attended the Big Star Entertainment Awards 2014 in Mumbai on Thursday when the actor ended up revealing his new year wish.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada