For Quick Alerts
  ALLOW NOTIFICATIONS  
  For Daily Alerts

  ಶಾರುಖ್ ಬೆದರಿಸಿದ ಸಲ್ಲು; ಅಜಯ್ ಗೆ ಸಪೋರ್ಟ್

  |

  ಸದ್ಯದ ಮಾಹಿತಿ ಪ್ರಕಾರ, ಶಾರುಖ್ ಖಾನ್ ನಾಯಕತ್ವದ 'ಜಬ್ ತಕ್ ಹೈ ಜಾನ್' ಹಾಗೂ ಅಜಯ್ ದೇವಗನ್ ನಾಯಕತ್ವದ 'ಸನ್ ಆಫ್ ಸರ್ದಾರ್' ಚಿತ್ರಗಳೆರಡೂ ಒಂದೇ ದಿನ ಬಿಡುಗಡೆಯಾಗಲಿವೆ. ಇತ್ತೀಚಿಗಷ್ಟೇ ವಿಧಿವಶರಾಗಿರುವ ಬಾಲಿವುಡ್ ಖ್ಯಾತ ನಿರ್ದೇಶಕ ಯಶ್ ಚೋಪ್ರಾರ ಕೊನೆಯ ಚಿತ್ರವಾಗಿರುವ 'ಜಬ್ ತಕ್ ಹೈ ಜಾನ್', ಶಾರುಖ್ ಖಾನ್ ಹಾಗೂ ಕತ್ರಿನಾ ಕೈಫ್ ಜೋಡಿ ನಟನೆಯ ಚಿತ್ರವಾಗಿದೆ.

  ಇನ್ನು ಸನ್ ಆಫ್ ಸರದಾರ್ ಚಿತ್ರವು ಅಜಯ್ ದೇವಗನ್ ನಾಯಕತ್ವದ ಚಿತ್ರವಾಗಿದೆ. ಸಲ್ಲಾನ್ ಖಾನ್ ಅವರು ಶಾರುಖ್ ಖಾನ್ ಗೆ ನೀಡಿರುವ ಎಚ್ಚರಿಕೆ ಸಂದೇಶ ಈ 'ಸನ್ ಆಫ್ ಸರ್ದಾರ್' ಚಿತ್ರಕ್ಕೆ ಸಂಬಂಧಪಟ್ಟಿದೆ. ಈ 'ಸನ್ ಆಫ್ ಸರ್ದಾರ್' ಚಿತ್ರದ ಹಾಡೊಂದರಲ್ಲಿ ಬಾಲಿವುಡ್ ಇತ್ತೀಚಿನ ಸೂಪರ್ ಸ್ಟಾರ್ ಸಲ್ಲೂ ಕಾಣಿಸಿಕೊಂಡಿದ್ದಾರೆ. ಅಜಯ್ ದೇವಗನ್ ಹಾಗೂ ಸಂಜಯ್ ದತ್ತ್ ಜೊತೆ ಈ ಚಿತ್ರದ 'ಪೋ..ಪೋ..' ಹಾಡಿನಲ್ಲಿ ಸಲ್ಲೂ ಡಾನ್ಸ್ ಮಾಡಿದ್ದಾರೆ. ಹೀಗಾಗಿ ಸಲ್ಲೂಗೆ 'ಸನ್ ಆಫ್ ಸರ್ದಾರ್' ಚಿತ್ರ ಅಚ್ಚುಮೆಚ್ಚು.

  ಒಂದೇ ದಿನ ಬಿಡುಗಡೆ ಆಗಲಿರುವ ಈ ಎರಡು ಚಿತ್ರಗಳ ಪೈಕಿ ಜಬ್ ತಕ್ ಹೈ ಜಾನ್ ನಾಯಕ ಶಾರುಖ್ ಖಾನ್ ಅವರನ್ನೇ ಗಮನದಲ್ಲಿಟ್ಟು ಮೈಕ್ರೋ ಬ್ಲಾಂಗಿಂಗ್ ಸೈಟ್ 'ಟ್ವಿಟ್ಟರ್'ನಲ್ಲಿ ಸಲ್ಲೂ ಟ್ವೀಟ್ ಮಾಡಿದ್ದಾರೆ. "Pathan Ke Yaar Se Panga Mat lena. Sorry yaar..Diwali bekaar without Son of Sardaar." ಎಂಬ ಸಲ್ಲೂ ಟ್ವೀಟ್ ನಲ್ಲಿ ಪಠಾಣ್ ಎಂಬುದು ಅವರನ್ನೇ ಕುರಿತು ಹೇಳಿಕೊಂಡಿದ್ದು. ಅಜಯ್ ದೇವಗನ್ ಅವರಿಗೆ ಸಪೋರ್ಟ್ ಮಾಡುವ ಮೂಲಕ ಸಲ್ಲೂ, ಶಾರುಖ್ ಕಾಲು ಎಳೆದಿದ್ದಾರೆ.

  ಶಾರುಖ್ ಜೊತೆ ಒಂದೇ ದಿನ ಬಿಡುಗಡೆ ಆಗಲಿರುವ ಈ ಎರಡು ಚಿತ್ರಗಳ ಪೈಕಿ ಜಬ್ ತಕ್ ಹೈ ಜಾನ್ ಚಿತ್ರದ ನಾಯಕ ಶಾರುಖ್ ಖಾನ್ ಅವರನ್ನೇ ಗಮನದಲ್ಲಿಟ್ಟು ಸಲ್ಲೂ ಮೈಕ್ರೋ ಬ್ಲಾಂಗಿಂಗ್ ಸೈಟ್ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. "Pathan Ke Yaar Se Panga Mat lena. Sorry yaar..Diwali bekaar without Son of Sardaar." ಎಂಬ ಸಲ್ಲೂ ಟ್ವೀಟ್ ನಲ್ಲಿ ಪಠಾಣ್ ಎಂಬುದು ಅವರನ್ನೇ ಕುರಿತು ಹೇಳಿಕೊಂಡಿದ್ದು. ಅಜಯ್ ದೇವಗನ್ ಅವರಿಗೆ ಸಪೋರ್ಟ್ ಮಾಡುವ ಮೂಲಕ ಸಲ್ಲೂ, ಶಾರುಖ್ ಕಾಲು ಎಳೆದಿದ್ದಾರೆ. (ಏಜೆನ್ಸೀಸ್)

  English summary
  Salman Khan, who has also shot a special song for Son Of Sardar with Ajay Devgn and Sanjay Dutt, openly warned Shahrukh Khan through twitter.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X