For Quick Alerts
  ALLOW NOTIFICATIONS  
  For Daily Alerts

  ಸುಂದರ, ಸುಶೀಲ 'ಕತ್ರಿನಾ'ಗೆ ಸಲ್ಮಾನ್ ಸ್ವಾಗತ ಕೋರಿದ್ದು ಹೀಗೆ...

  By Harshitha
  |

  ಎಲ್ಲವೂ ಪ್ಲಾನ್ ಪ್ರಕಾರ ನಡೆದಿದ್ದರೆ, ಇಷ್ಟೊತ್ತಿಗೆ 'ಭಾರತ್' ಸಿನಿಮಾ ಸೆಟ್ ನಲ್ಲಿ ಪ್ರಿಯಾಂಕಾ ಛೋಪ್ರಾ ಇರಬೇಕಿತ್ತು. ಹತ್ತು ವರ್ಷಗಳ ಬಳಿಕ ಸಲ್ಮಾನ್-ಪ್ರಿಯಾಂಕಾ ತೆರೆಹಂಚಿಕೊಳ್ಳಬೇಕಿತ್ತು. ಆದ್ರೆ, ಇದಾಗಲಿಲ್ಲ.

  ''ಇದಕ್ಕೆ ಕಾರಣ ತುಂಬಾನೇ ಸ್ಪೆಷಲ್'' ಅಂತ 'ಭಾರತ್' ನಿರ್ದೇಶಕ ಅಲಿ ಅಬ್ಬಾಸ್ ಝಫರ್ ಕೂಡ ಟ್ವೀಟ್ ಮಾಡಿದ್ದರು. ಇದನ್ನ ನೋಡಿ ಪ್ರಿಯಾಂಕಾ ಛೋಪ್ರಾ-ನಿಕ್ ಜೊನಾಸ್ ಮದುವೆ ನಿಕ್ಕಿ ಆಗಿದೆ. ಹೀಗಾಗಿ, 'ಭಾರತ್' ಸಿನಿಮಾದಿಂದ ಪ್ರಿಯಾಂಕಾ ಹೊರಬಂದಿದ್ದಾರೆ ಎಂಬ ಗುಲ್ಲು ಹಬ್ಬಿದೆ.

  ಅದೇನೇ ಇರಲಿ, 'ಭಾರತ್' ಚಿತ್ರದಿಂದ ಪ್ರಿಯಾಂಕಾ ಔಟ್ ಆಗಿರುವುದು ಪಕ್ಕಾ. ಇದೀಗ ಅದೇ ಪ್ರಿಯಾಂಕಾ ಛೋಪ್ರಾ ಜಾಗಕ್ಕೆ ಕತ್ರಿನಾ ಕೈಫ್ ಬಂದಿರುವುದೂ ಅಷ್ಟೇ ಪಕ್ಕಾ. ಬೇಕಾದ್ರೆ, ಸಲ್ಮಾನ್ ಖಾನ್ ರವರ ಲೇಟೆಸ್ಟ್ ಇನ್ಸ್ಟಾಗ್ರಾಮ್ ಪೋಸ್ಟ್ ನ ನೀವೇ ನೋಡಿ...

  ''ಓರ್ವ ಸುಂದರ ಹಾಗೂ ಸುಶೀಲ ಯುವತಿ... ಆಕೆಯ ಹೆಸರು ಕತ್ರಿನಾ ಕೈಫ್... 'ಭಾರತ್' ಜಗತ್ತಿಗೆ ನಿಮಗೆ ಆತ್ಮೀಯ ಸ್ವಾಗತ'' ಅಂತ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಸಲ್ಮಾನ್ ಖಾನ್ ಬರೆದುಕೊಂಡಿದ್ದಾರೆ.

  'ಭಾರತ್' ಸಿನಿಮಾದಲ್ಲಿ ಪ್ರಿಯಾಂಕಾ ಬಿಟ್ಟ ಜಾಗವನ್ನ ತುಂಬುವವರು ಯಾರು.?'ಭಾರತ್' ಸಿನಿಮಾದಲ್ಲಿ ಪ್ರಿಯಾಂಕಾ ಬಿಟ್ಟ ಜಾಗವನ್ನ ತುಂಬುವವರು ಯಾರು.?

  ಅಲ್ಲಿಗೆ, 'ಭಾರತ್' ಚಿತ್ರದಲ್ಲೂ ಸಲ್ಮಾನ್ ಖಾನ್ ಜೊತೆಗೆ ಕತ್ರಿನಾ ಕೈಫ್ ಡ್ಯುಯೆಟ್ ಹಾಡುವುದು ಕನ್ಫರ್ಮ್. ಈಗಾಗಲೇ 'ಪಾರ್ಟ್ನರ್', 'ಯುವರಾಜ್', 'ಮೈನೇ ಪ್ಯಾರ್ ಕ್ಯೂ ಕಿಯಾ', 'ಏಕ್ತಾ ಟೈಗರ್', 'ಟೈಗರ್ ಝಿಂದಾ ಹೈ' ಸಿನಿಮಾಗಳಲ್ಲಿ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಜೋಡಿ ಮ್ಯಾಜಿಕ್ ಮಾಡಿದೆ.

  'ಭಾರತ್' ಚಿತ್ರದಿಂದ ಹೊರಬಂದ ಪ್ರಿಯಾಂಕಾ: ಸಲ್ಮಾನ್ ಅದಕ್ಕೆ ಕಾರಣ.?'ಭಾರತ್' ಚಿತ್ರದಿಂದ ಹೊರಬಂದ ಪ್ರಿಯಾಂಕಾ: ಸಲ್ಮಾನ್ ಅದಕ್ಕೆ ಕಾರಣ.?

  ಇದೀಗ 'ಭಾರತ್' ಸಿನಿಮಾದಲ್ಲೂ ಈ ಜೋಡಿಯ ಮೋಡಿ ಮುಂದುವರೆಯುತ್ತಾ ನೋಡಬೇಕು. ಅಂದ್ಹಾಗೆ, 'Ode to my Father' ಎಂಬ ಸೌತ್ ಕೊರಿಯನ್ ಚಿತ್ರದ ಹಿಂದಿ ಅವತರಣಿಕೆಯೇ ಈ 'ಭಾರತ್' ಸಿನಿಮಾ. ಕೊರಿಯನ್ ವಾರ್ ಬಳಿಕ ಕುಟುಂಬದಿಂದ ದೂರಾಗುವ ವ್ಯಕ್ತಿ ಮರಳಿ ಕುಟುಂಬದ ಜೊತೆ ಒಂದಾಗುವುದು ಹೇಗೆ ಎಂಬುದೇ ಚಿತ್ರದ ಕಥೆ. ಶೂಟಿಂಗ್ ಹಂತದಲ್ಲಿ ಇರುವ 'ಭಾರತ್' ಸಿನಿಮಾ ಮುಂದಿನ ವರ್ಷ ಬಿಡುಗಡೆ ಆಗಲಿದೆ.

  English summary
  Bollywood Actor Salman Khan welcomes Katrina Kaif for 'Bharat' film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X