»   » ಶ್ರುತಿ ಹಾಸನ್ ಬಗ್ಗೆ ಮೌನ ಮುರಿದ ತಾಯಿ ಸಾರಿಕಾ

ಶ್ರುತಿ ಹಾಸನ್ ಬಗ್ಗೆ ಮೌನ ಮುರಿದ ತಾಯಿ ಸಾರಿಕಾ

By: ಉದಯರವಿ
Subscribe to Filmibeat Kannada

ಹಾಟ್ ಬೆಡಗಿ ಶ್ರುತಿ ಹಾಸನ್ ಮೇಲೆ ಅಪರಿಚಿತನೊಬ್ಬ ದಾಳಿ ನಡೆಸಿದ್ದು ಗೊತ್ತೇ ಇದೆ. ಬಳಿಕ ಆತ ಪೊಲೀಸರ ಕೈಗೆ ಸಿಕ್ಕಿಬಿದ್ದದ್ದೂ ಆಯಿತು. ಇಷ್ಟೆಲ್ಲಾ ರಾದ್ಧಾಂತವಾದರೂ ಶ್ರುತಿ ಅವರ ತಂದೆ ಕಮಲ್ ಹಾಸನ್ ಅವರಾಗಲಿ ತಾಯಿ ಸಾರಿಕಾ ಆಗಲಿ ಪ್ರತಿಕ್ರಿಯಿಸದೇ ಮೌನವಾಗಿದ್ದದ್ದು ಎಲ್ಲರನ್ನೂ ಚಕಿತಗೊಳಿಸಿತ್ತು.

ಹೆತ್ತ ಮಗಳ ಮೇಲೆ ದಾಳಿ ನಡೆದರೂ ತಂದೆ ತಾಯಿ ಮೌನವಾಗಿದ್ದದ್ದು ಯಾಕೆ ಎಂಬ ಪ್ರಶ್ನೆಗಳು ಉದ್ಭವಿಸಿದ್ದವು. ಕಮಲ್ ಹಾಸನ್ ಅವರೇನೋ ಈ ಬಗ್ಗೆ ಸ್ಪಂದಿಸಿದ್ದರು. ಇಷ್ಟೆಲ್ಲಾ ಆದ ಮೇಲೆ ಶ್ರುತಿ ಅವರ ತಾಯಿ ಸಾರಿಕಾ (ಕಮಲ್ ಹಾಸನ್ ಮಾಜಿ ಪತ್ನಿ) ಇದೀಗ ಮೌನ ಮುರಿದಿದ್ದಾರೆ.

"ಈ ಘಟನೆಯನ್ನು ಊಹಿಸಿರಲಿಲ್ಲ. ಈ ರೀತಿಯ ಘಟನೆ ನಡೆದಾಗ ಹೇಗೆ ನಿಭಾಯಿಸಬೇಕು ಎಂಬುದನ್ನು ಎಲ್ಲರೂ ಕಲಿಯಬೇಕಾದ ಅವಶ್ಯಕತೆ ಇದೆ. ಈ ಬಗ್ಗೆ ಪತ್ರಿಕೆಯೊಂದರ ಜೊತೆ ಮಾತನಾಡುತ್ತಾ, "ಇತ್ತೀಚೆಗೆ ಈ ರೀತಿಯ ಘಟನೆಗಳು ಸಾಕಷ್ಟು ನಡೆಯುತ್ತಿವೆ. ಶ್ರುತಿ ಬಗ್ಗೆ ನನಗೆ ಯಾವಾಗಲೂ ಆತಂಕ ಇದ್ದೇ ಇತ್ತು. ಪ್ರತಿಯೊಬ್ಬರೂ ಈ ರೀತಿಯ ಘಟನೆಯನ್ನು ಎದುರಿಸಲು ಕಲಿಯಬೇಕು" ಎಂದಿದ್ದಾರೆ.

ಶ್ರುತಿ ಸದ್ಯಕ್ಕೆ ನನ್ನ ಬಳಿ ಇಲ್ಲ, ಸಾರಿಕಾ

ಇಂತಹ ಪರಿಸ್ಥಿತಿಯಲ್ಲಿ ಶ್ರುತಿ ಅವರು ಒಂಟಿಯಾಗಿರದೆ ಪೋಷಕರ ಬಳಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಎಲ್ಲರೂ ಅಭಿಪ್ರಾಯ ಪಡುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಾರಿಕಾ, "ಸದ್ಯಕ್ಕೆ ಶ್ರುತಿ ನನ್ನ ಬಳಿ ಇಲ್ಲ. ಕಾರಣ ಶ್ರುತಿ ತನ್ನ ದೃಷ್ಟಿಯನ್ನು ಕೆರಿಯರ್ ಮೇಲೆ ಕೇಂದ್ರೀಕರಿಸಿರುವುದು...

ಮಕ್ಕಳು ದೊಡ್ಡವರಾದಂತೆ ಸ್ವತಂತ್ರವಾಗಿರಲು ಬಯಸುತ್ತಾರೆ

"ಶೂಟಿಂಗ್ ಕಾರಣ ಬೇರೆಬೇರೆ ಸ್ಥಳಗಳಿಗೆ ಭೇಟಿ ಕೊಡಬೇಕಾಗುತ್ತದೆ. ಮಕ್ಕಳು ಬೆಳೆಯುತ್ತಾ ದೊಡ್ಡವರಾದಂತೆ ಸ್ವತಂತ್ರವಾಗಿರಬೇಕೆಂದು ಬಯಸುತ್ತಾರೆ. ಆದರೆ ಹುಷಾರಾಗಿರುವಂತೆ ಸಲಹೆ ನೀಡುತ್ತಿರುತ್ತೇವೆ. ಅಷ್ಟೇ ಹೊರತು ಬಲವಂತವಾಗಿ ಅವರನ್ನು ತಮ್ಮ ಬಳಿ ಇರುವಂತೆ ಮಾಡಲು ಸಾಧ್ಯವಿಲ್ಲ" ಎಂದಿದ್ದಾರೆ.

ಪೊಲೀಸರ ಕೈಗೆ ಸಿಕ್ಕಿಬಿದ್ದ ಸ್ಪಾಟ್ ಬಾಯ್

ಸಿಸಿಟಿವಿಯಲ್ಲಿ ದಾಖಲಾಗಿರುವ ವಿಡಿಯೋ ಮೂಲಕ ಪೊಲೀಸರು ದಾಳಿ ಮಾಡಿದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಅಶೋಕ್ ಶಂಕರ್ ತ್ರಿಮುಖೇ (45) ಎಂದು ಗುರುತಿಸಲಾಗಿದೆ. ಫಿಲಂ ಸಿಟಿಯಲ್ಲಿ ಸ್ಪಾಟ್ ಬಾಯ್ ಆಗಿ ಬಂಧಿತ ಆರೋಪಿ ಕೆಲಸ ಮಾಡುತ್ತಿದ್ದಾನೆ.

ತನಗೆ ಯಾವುದೇ ದುರುದ್ದೇಶವಿರಲಿಲ್ಲ

"ತಾನು ತನ್ನ ಸಹೋದರನಿಗೆ ಉದ್ಯೋಗ ಕೊಡಿಸುವ ಸಂಬಂಧ ಶ್ರುತಿ ಹಾಸನ್ ಮನೆಗೆ ಹೋಗಿದ್ದೆ. ತಾನು ಅವರಿಗೆ ಈ ವಿಷಯ ಹೇಳಲು ಪ್ರಯತ್ನಿಸುತ್ತಿದ್ದಂತೆ ಅವರು ರಫ್ ಎಂದು ಡೋರ್ ಹಾಕಿದರು. ಅಷ್ಟೇ ಹೊರತು ಅವರನ್ನು ಬೆದರಿಸಬೇಕೆಂಬ ಉದ್ದೇಶ ತಮಗಿರಲಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಆದರೆ ಆತನ ಮಾತುಗಳನ್ನು ಶ್ರುತಿ ಹಾಸನ್ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

ದುರುದ್ದೇಶದಿಂದಲೇ ಈತ ತನ್ನ ಫ್ಲಾಟ್ ಗೆ ಬಂದಿದ್ದ

ಅಶೋಕ್ ಶಂಕರ್ ವಾದವನ್ನು ಪೊಲೀಸರೂ ನಂಬುತ್ತಿಲ್ಲ. ಒಂಟಿಯಾಗಿರುವ ಒಬ್ಬ ಮಹಿಳೆಯ ಅಪಾರ್ಟ್ ಮೆಂಟ್ ಗೆ ರಾತ್ರಿ 9.30 ಗಂಟೆಗೆ ಹೋಗುವ ಅವಶ್ಯಕತೆಯಾದರೂ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ಹಲವಾರು ಸಲ ಶೂಟಿಂಗ್ ಸ್ಪಾಟ್ ನಲ್ಲಿ ಈತ ತನಗೆ ಕಾಣಿಸುತ್ತಿದ್ದ. ಆಗ ತನ್ನ ಬಗ್ಗೆಯಾಗಲಿ ತನ್ನ ಸಹೋದರನ ಬಗ್ಗೆಯಾಗಲಿ ಯಾಕೆ ಪ್ರಸ್ತಾಪಿಸಲಿಲ್ಲ. ದುರುದ್ದೇಶದಿಂದಲೇ ಈತ ತನ್ನ ಫ್ಲಾಟ್ ಗೆ ಬಂದಿದ್ದಾನೆ ಎಂಬುದಕ್ಕೆ ಇದಕ್ಕಿಂತಲೂ ಸಾಕ್ಷಿ ಇನ್ನೇನು ಬೇಕು ಎಂದಿದ್ದಾರೆ ಶ್ರುತಿ ಹಾಸನ್.

English summary
A stalker's attack on actress Shruti Hassan at her Bandra residence in Mumbai has created quite stir in the media, but her Superstar father Kamal Hassan and actress mother Sarika kept mum on this issue, which had surprised many in the industry. Finally breaking her silence, her mother has said that it is an unfortunate incident, but one needs to learn to handle such situations.
Please Wait while comments are loading...