Don't Miss!
- News
ಗಣರಾಜ್ಯೋತ್ಸವ ಪರೇಡ್ಗೆ ಪಂಜಾಬ್ ಟ್ಯಾಬ್ಲೋ ತಿರಸ್ಕಾರ: ಎಎಪಿ ಆಕ್ರೋಶ
- Sports
ಕಿಂಗ್ ಕೊಹ್ಲಿಯಿಂದ ಶುಭ್ಮನ್ ಗಿಲ್ಗೆ ವಿಶಿಷ್ಟ ಉಡುಗೊರೆ; ರಹಸ್ಯವಾಗಿ ಈ ವಿಚಾರ ತಿಳಿಸಿದ ಗಿಲ್
- Automobiles
ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾಗುತ್ತಿದೆ 2023ರ ಹೋಂಡಾ ಸಿಟಿ ಕಾರು
- Finance
ಉದ್ಯೋಗಿಗಳ ಸಂಬಳ ಕಡಿತಕ್ಕೆ ಕರೆ ನೀಡಿದ ಭಾರತೀಯ ಉದ್ಯಮಿ ಯಾರು? ರೊಚ್ಚಿಗೆದ್ದ ನೆಟ್ಟಿಗರು ಏನೆಂದರು?
- Technology
ಭಾರತದಲ್ಲಿ ವಿಶ್ವದ ಮೊದಲ PTZ ಕ್ಯಾಮೆರಾ ಪರಿಚಯಿಸಿದ ಸೋನಿ! ಇದರ ಕಾರ್ಯವೈಖರಿ ಹೇಗಿದೆ?
- Lifestyle
ಜ್ವರ ರಾತ್ರಿ ಹೊತ್ತಿನಲ್ಲಿ ಹೆಚ್ಚಾಗುವುದೇಕೆ? ಜ್ವರ ಕಡಿಮೆಯಾಗಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಡ್ವಾನ್ಸ್ ಬುಕಿಂಗ್‌ನಿಂದ 20 ಕೋಟಿ ರೂ. ಗಡಿದಾಟಿದ 'ಪಠಾಣ್':'ಕೆಜಿಎಫ್ 2' ದಾಖಲೆ ಮೇಲೆ ಕಣ್ಣು?
ಶಾರುಖ್ ಖಾನ್ ಸಿನಿಮಾ 'ಪಠಾಣ್' ಕಲೆಕ್ಷನ್ ಮೇಲೆ ಎಲ್ಲರ ಕಣ್ಣಿದೆ. ನಾಲ್ಕು ವರ್ಷಗಳ ಗ್ಯಾಪ್ ಬಳಿಕ ಮತ್ತೆ ಬಾಲಿವುಡ್‌ಗೆ ಮರಳುತ್ತಿರುವ ಕಿಂಗ್ ಖಾನ್ ಸಿನಿಮಾ ದಾಖಲೆ ಮಾಡುತ್ತಾ ಅಂತ ಬಾಲಿವುಡ್ ಎದುರು ನೋಡುತ್ತಿದೆ.
ಕೆಲವು ದಿನಗಳ ಹಿಂದೆ 'ಪಠಾಣ್' ಸಿನಿಮಾದ ಅಡ್ವಾನ್ಸ್ ಬುಕಿಂಗ್ ಆರಂಭ ಆಗಿತ್ತು. ಇಲ್ಲಿವರೆಗೂ ಆನ್‌ಲೈನ್‌ನಲ್ಲಿ ಸುಮಾರು 10 ಲಕ್ಷ ಟಿಕೆಟ್‌ಗಳು ಬುಕ್ ಮೈ ಶೋನಲ್ಲಿ ಬುಕಿಂಗ್ ಆಗಿದೆ ಎಂದು ವರದಿಯಾಗಿದೆ.
'ಪಠಾಣ್'
ಬುಕಿಂಗ್:
ಬೆಂಗಳೂರು,
ಮುಂಬೈ,
ದೆಹಲಿಗಳಲ್ಲಿ
ಎಷ್ಟಿದೆ
ಟಿಕೆಟ್
ದರ?
ಹೆಚ್ಚು
ದುಬಾರಿ
ಎಲ್ಲಿ?
'ಪಠಾಣ್' ವಿಶ್ವದಾದ್ಯಂತ ಸಿನಿಮಾ ಸುಮಾರು 3500 ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣಲಿದೆ. ಹಿಂದಿ, ತೆಲುಗು, ತಮಿಳು ಮೂರು ಭಾಷೆಗಳಲ್ಲಿ ಸಿನಿಮಾ ತೆರೆಕಾಣುತ್ತಿದ್ದು, ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಆಗುವ ನಿರೀಕ್ಷೆಯಿದೆ. ಇದೇ ವೇಳೆ 'ಕೆಜಿಎಫ್ 2' ಸಿನಿಮಾದ ಫಸ್ಟ್ ಡೇ ಕಲೆಕ್ಷನ್ ಬ್ರೇಕ್ ಮಾಡಬಹುದು ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ.

20 ಕೋಟಿ ರೂ. ಕಲೆಕ್ಷನ್
ಕಿಂಗ್ ಖಾನ್ ಶಾರುಖ್ ಕಮ್‌ಬ್ಯಾಕ್ ಮಾಡುತ್ತಿರೋದ್ರಿಂದ ಅಡ್ವಾನ್ಸ್ ಬುಕಿಂಗ್‌ಗೆ ಬೇಡಿಕೆ ಬಂದಿದೆ. ದೇಶಾದ್ಯಂತ 'ಪಠಾಣ್' ಸಿನಿಮಾ ಕಲೆಕ್ಷನ್ ನೋಡಿ ಬಾಲಿವುಡ್‌ನಲ್ಲಿ ಹೊಸ ಭರವಸೆ ಮೂಡಿದೆ. ಇಲ್ಲಿವರೆಗೂ ಅಡ್ವಾನ್ಸ್ ಬುಕಿಂಗ್‌ನಿಂದಲೇ ಸುಮಾರು 20 ಕೋಟಿ ರೂ. ಕಲೆಕ್ಷನ್ ಆಗಿದೆ. ಇನ್ನೂ ಒಂದು ದಿನ ಬಾಕಿ ಉಳಿದಿರುವುದರಿಂದ ಮತ್ತಷ್ಟು ಕಲೆಕ್ಷನ್ ಆಗುವ ಸಾಧ್ಯತೆಯಿದೆ. ಅಂದ್ಹಾಗೆ 'ಬ್ರಹ್ಮಾಸ್ತ್ರ' ಸಿನಿಮಾ ಅಡ್ವಾನ್ಸ್ ಬುಕಿಂಗ್‌ನಿಂದ 19.66 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

ಸೌತ್‌ನಿಂದಲೇ ಹೆಚ್ಚು ಬುಕಿಂಗ್
'ಪಠಾಣ್' ಸಿನಿಮಾದ ಅಡ್ವಾನ್ಸ್ ಬುಕಿಂಗ್ ಜೋರಾಗಿ ಆಗಿದೆ. 10 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಸೇಲ್ ಆಗಿವೆ. ಇದರಲ್ಲಿ ದಕ್ಷಿಣ ಭಾರತದಿಂದಲೇ ಶೇ.30ರಷ್ಟು ಅಡ್ವಾನ್ಸ್ ಬುಕಿಂಗ್ ಆಗಿದೆ. ಹೈದರಾಬಾದ್, ಬೆಂಗಳೂರು ಸೇರಿದಂತೆ ಹಲವೆಡೆ ಸಿನಿಮಾಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಹೀಗೆ ಇನ್ನೂ ಒಂದು ದಿನದಲ್ಲಿ ಮತ್ತಷ್ಟು ಕಲೆಕ್ಷನ್ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಎಕ್ಸ್‌ಟ್ರಾ ಶೋಗಳನ್ನು ಪ್ಲ್ಯಾನ್ ಮಾಡುತ್ತಿದೆ.

'ಕೆಜಿಎಫ್ 2'ದಾಖಲೆ ಬ್ರೇಕ್ ಮಾಡುತ್ತಾ?
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಫಸ್ಟ್ ಡೇ 53 ಕೋಟಿ ರೂ. ಕಲೆಕ್ಷನ್ ಮಾಡಿತ್ತು. 'ಪಠಾಣ್' ಸಿನಿಮಾದ ಅಡ್ವಾನ್ಸ್ ಬುಕಿಂಗ್ ಕ್ರೇಜ್ ನೋಡುತ್ತಿದ್ದರೆ, ಮೊದಲ ದಿನವೇ 'ಕೆಜಿಎಫ್ 2' ದಾಖಲೆಯನ್ನು ಉಡೀಸ್ ಮಾಡುತ್ತೆ ಎಂದೇ ಲೆಕ್ಕಾಚಾರ ಹಾಕಲಾಗುತ್ತಿದೆ. ಈಗಾಗಲೇ ಟಿಕೆಟ್ ವಿಚಾರದಲ್ಲಿ 'ಕೆಜಿಎಫ್ 2' ದಾಖಲೆ ಮುಗಿದೆ. ಅಡ್ವಾನ್ಸ್ ಬುಕಿಂಗ್ ಓಪನ್ ಆದ 24 ಗಂಟೆಗಳಲ್ಲಿ 'ಕೆಜಿಎಫ್ 2' ಸುಮಾರು 5.15 ಲಕ್ಷ ಟಿಕೆಟ್‌ಗಳು ಸೇಲ್ ಆಗಿದ್ದವು. 'ಪಠಾಣ್' ಈಗಾಗಲೇ 1 ಲಕ್ಷ ಟಿಕೆಟ್ ಸೇಲ್ ಆಗಿದೆ.

'ಪಠಾಣ್' ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?
ಶಾರುಖ್ ಖಾನ್ ಸಿನಿಮಾ 'ಪಠಾಣ್' ಮೊದಲ ದಿನವೇ ಸುಮಾರು 100 ಕೋಟಿ ರೂ. ಕಲೆಕ್ಷನ್ ಮಾಡುತ್ತೆ ಅಂತ ಟ್ರೇಡ್ ಎಕ್ಸ್‌ಪರ್ಟ್ ಲೆಕ್ಕ ಹಾಕಿದ್ದಾರೆ. ಈ ಸಿನಿಮಾ ಶಾರುಖ್ ಖಾನ್‌ಗೆ ಹಾಗೂ ಬಾಲಿವುಡ್‌ಗೆ ಮರುಜೀವ ಕೊಡಲಿದೆ ಎಂದು ಅಂದಾಜು ಹಾಕಲಾಗಿದೆ. ಅಲ್ಲದೆ ಮೊದಲ ವಾರವೇ ವಿಶ್ವದಾದ್ಯಂತ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಆಗುತ್ತೆ ಅನ್ನೋ ಮಾತುಗಳು ಕೂಡ ಕೇಳಿಬರುತ್ತಿವೆ.