»   » 10 ವರ್ಷಗಳ ನಂತರ ಒಂದೇ ಚಿತ್ರದಲ್ಲಿ ಶಾರುಖ್‌ ಮತ್ತು ಸಲ್ಮಾನ್‌

10 ವರ್ಷಗಳ ನಂತರ ಒಂದೇ ಚಿತ್ರದಲ್ಲಿ ಶಾರುಖ್‌ ಮತ್ತು ಸಲ್ಮಾನ್‌

Posted By:
Subscribe to Filmibeat Kannada

ಬಾಲಿವುಡ್‌ ಬಾದ್‌ ಶಾ ಶಾರುಖ್ ಖಾನ್‌ ಮತ್ತು ಸೂಪರ್ ಸ್ಟಾರ್ ಸಲ್ಮಾನ್‌ ಖಾನ್‌ ರನ್ನು ಸಿನಿಮಾ ಗಳಲ್ಲಿ ಜೊತೆಯಲ್ಲಿ ನೋಡಿ ಹತ್ತು ವರ್ಷವೇ ಆಯಿತು. ಸಿನಿಮಾ ಆಗಲಿ ಅಥವಾ ಅಟ್‌ ಲೀಸ್ಟ್ ಯಾವುದೇ ಕಾರ್ಯಕ್ರಮದಲ್ಲಿ ಇಬ್ಬರು ಜೊತೆಯಲ್ಲಿ ಕುಳಿತಿರುವುದಕ್ಕೆ ಮತ್ತು ವೇದಿಕೆ ಮೇಲೆ ಕಾಣಿಸಿಕೊಂಡಿರುವುದಕ್ಕೆ ಉದಾಹರಣೆಗಳು ಇಲ್ಲಾ. ಹಾಗೆ ಅವರಿಬ್ಬರೂ ಜೊತೆಯಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಆದ್ರೆ ಈಗ ಇಬ್ಬರ ಬಗ್ಗೆ ಶಾಕಿಂಗ್ ನ್ಯೂಸ್ ಬಿ ಟೌನ್‌ ನಿಂದ ಕೇಳಿಬಂದಿದೆ.[62ನೇ ಫಿಲ್ಮ್‌ ಫೇರ್ ಪ್ರಶಸ್ತಿ: ಖಾನ್‌ ಗಳ ನಡುವೆ ಪೈಪೋಟಿ]

ಶಾರುಖ್‌ ಮತ್ತು ಸಲ್ಮಾನ್‌ ಫ್ಯಾನ್‌ ಗಳಿಗೆ ಈಗೊಂದು ಸಿಹಿ ಸುದ್ದಿ ಬಾಲಿವುಡ್ ಅಂಗಳದಿಂದ ಕೇಳಿಬಂದಿದೆ. ಅದೇನಂದ್ರೆ.. ಈ ಇಬ್ಬರು ಖಾನ್‌ ಗಳನ್ನು ಸದ್ಯದಲ್ಲೇ ಒಂದೇ ಚಿತ್ರದಲ್ಲಿ ನೋಡುವ ಅವಕಾಶ ಸಿನಿ ಪ್ರಿಯರಿಗೆ ಸಿಗುತ್ತಿದೆ. ಹೌದು, ದೀರ್ಘಕಾಲ ಮಾತನ್ನು ಆಡದೇ ಯಾವುದೇ ವೇದಿಕೆಗಳಲ್ಲಿ ಜೊತೆಯಲ್ಲು ಕಾಣದ ಶಾರುಖ್ ಮತ್ತು ಸಲ್ಮಾನ್‌ ಇಬ್ಬರು 10 ವರ್ಷಗಳ ನಂತರ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕುತೂಹಲಕಾರಿ ಮಾಹಿತಿ ಎಂದರೆ, ಶಾರುಖ್ ಖಾನ್‌, ಸಲ್ಮಾನ್‌ ಖಾನ್‌ ಹೋಮ್‌ ಬ್ಯಾನರ್‌ ನಲ್ಲಿ ನಿರ್ಮಿಸುತ್ತಿರುವ ಚಿತ್ರದಲ್ಲಿ ನಟಿಸುತ್ತದ್ದಾರೆ. ಸಿನಿಮಾ ಯಾವುದು? ಶಾರುಖ್ ಪಾತ್ರ ಏನು ಎಂಬಿತ್ಯಾದಿ ಮಾಹಿತಿ ತಿಳಿಯಲು ಮುಂದೆ ಓದಿ..

ಟ್ಯೂಬ್‌ಲೈಟ್

ಎಸ್, ಸಲ್ಮಾನ್‌ ಖಾನ್‌ ತಮ್ಮ ಹೋಮ್‌ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿರುವ 'ಟ್ಯೂಬ್‌ಲೈಟ್' ಚಿತ್ರದಲ್ಲಿ ಶಾರುಖ್‌ ಅಭಿನಯಿಸುತ್ತಿದ್ದಾರೆ. 10 ವರ್ಷಗಳ ನಂತರ ಸಲ್ಮಾನ್‌ ಖಾನ್‌ ಮತ್ತು ಶಾರುಖ್‌ ಖಾನ್‌ ಈ ಚಿತ್ರದ ಮೂಲಕ ಒಂದಾಗುತ್ತಿದ್ದಾರೆ.[ಕಳೆದ ವರ್ಷ ಸಲ್ಲು ಆದಾಯ ಬರೋಬ್ಬರಿ 270 ಕೋಟಿ ರು.!]

ದೀರ್ಘಕಾಲದ ನಂತರ ಒಂದಾದ ಖಾನ್‌ ಗಳು

ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಈ ಹಿಂದೆ 'ಓಂ ಶಾಂತಿ ಓಂ' ಎಂಬ ಟೈಟಲ್‌ ಸಾಂಗ್‌ ನಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ಆದಾದ ನಂತರ ಯಾವುದೇ ಚಿತ್ರದಲ್ಲಿ ಆಗಲಿ ಅಥವಾ ವೇದಿಕೆಗಳಲ್ಲಿ ಇಬ್ಬರೂ ಸಹ ಒಟ್ಟಿಗೆ ಕಾಣಿಸುತ್ತಿರಲಿಲ್ಲ. ಅಸಲಿ ಅವರು ಮಾತು ಬಿಟ್ಟಿದ್ರಾ? ಉತ್ತರ ಕ್ಕಾಗಿ ಮುಂದೆ ಓದಿರಿ..[ಬೆಂಗಳೂರಿನ ದೌರ್ಜನ್ಯ ಘಟನೆಗಳಿಗೆ ಬಾಲಿವುಡ್‌ ಬಾದ್‌ ಶಾ ಹೇಳಿದ್ದೇನು?]

ಶಾರುಖ್‌ ಖಾನ್ ಮತ್ತು ಸಲ್ಮಾನ್‌ ಖಾನ್‌ ಮಾತು ಬಿಟ್ಟಿದ್ರಾ?

ಶಾರುಖ್‌ ಖಾನ್ ಮತ್ತು ಸಲ್ಮಾನ್‌ ಖಾನ್‌ ಮಾತು ಬಿಟ್ಟಿರಲಿಲ್ಲಾ. ಆದರೆ ಇಬ್ಬರ ನಡುವಿನ ಬಾಂಧವ್ಯ ಅಷ್ಟೊಂದು ಚೆನ್ನಾಗಿರಲಿಲ್ಲ. ಸಲ್ಮಾನ್‌ ಖಾನ್‌ ಒಮ್ಮೆ ಐಶ್ವರ್ಯ ರೈ ಚಿತ್ರೀಕರಣ ದಲ್ಲಿ ಇರುವ ವೇಳೆ ಪಾರ್ಟಿಗೆ ಬರುವಂತೆ ಗಲಾಟೆ ಮಾಡಿದ್ದರು. ಆ ಸಂದರ್ಭದಲ್ಲಿ ಶಾರುಖ್‌ ಮಧ್ಯ ಪ್ರವೇಶಿಸಿದ್ದರು. ಆಗಿನಿಂದ ಇಬ್ಬರ ಬಾಂಧವ್ಯ ಚೆನ್ನಾಗಿರಲಿಲ್ಲ ಎಂಬ ಗಾಳಿ ಸುದ್ದಿಗಳು ಇವೆ. ಆದ್ರೆ ಶಾರುಖ್ ಖಾನ್‌ ಬಿಗ್ ಬಾಸ್ ಪ್ರಮೋಶನ್‌ ಗಳಲ್ಲಿ ಸಲ್ಮಾನ್‌ ಖಾನ್‌ ಜೊತೆ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ಇಬ್ಬರು ಜೊತೆಯಲ್ಲಿ ನಟಿಸಿದ ಸಿನಿಮಾಗಳಿವು..

ಕಿಂಗ್ ಖಾನ್‌ ಮತ್ತು ಸಲ್ಮಾನ್ ಖಾನ್‌ ಈ ಹಿಂದೆ 1995 ರ ಹಿಟ್ ಸಿನಿಮಾ 'ಕರಣ್ ಅರ್ಜುನ್‌' ಮತ್ತು 1998 ರ 'ಕುಚ್‌ ಕುಚ್ ಹೋತಾ ಹೈ' ಚಿತ್ರಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದರು. ಕೊನೆಯದಾಗಿ 'ಓಂ ಶಾಂತಿ ಓಂ' ಎಂಬ ಟೈಟಲ್‌ ಸಾಂಗ್ ಒಂದರಲ್ಲಿ ಕಾಣಿಸಿಕೊಂಡಿದ್ದರು.

ಮುಖ್ಯ ಪಾತ್ರದಲ್ಲಿ ಶಾರುಖ್ ಖಾನ್

"ಸಲ್ಮಾನ್‌ ಖಾನ್‌ ತಾವು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ 'ಟ್ಯೂಬ್‌ಲೈಟ್' ಚಿತ್ರದಲ್ಲಿ ಶಾರುಖ್ ಖಾನ್‌ ಮುಖ್ಯ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಕನ್ಫರ್ಮ್ಡ್ ನ್ಯೂಸ್, ಗ್ರೇಟ್ ನ್ಯೂಸ್. ಹೋಲ್ಡ್ ಯುವರ್ ಬ್ರೀಥ್" ಎಂದು ಸಿನಿಮಾ ಮಾಹಿತಿ ಸಂಪಾದಕ ಮತ್ತು ಪ್ರಕಾಶಕ ಕೋಮಲ್ ನಾಟ್ಹಾ ಸಾಮಾಜಿಕ ತಾಣ ಪೇಜ್‌ ನಲ್ಲಿ ಬರೆದಿದ್ದಾರೆ.

English summary
Bollywood fans have all the reasons to rejoice as they will get to see Shah Rukh Khan and Salman Khan share screen space after a gap of 10 years. Filmmaker Kabir Khan has finally done the unthinkable- bringing SRK and Salman together for a film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada