»   » ಶಾಹೀದ್ ಕಪೂರ್ ಪೀ..ಪೀ..ಪೀ ಡುಂ ಡುಂಗೆ ರೆಡಿ

ಶಾಹೀದ್ ಕಪೂರ್ ಪೀ..ಪೀ..ಪೀ ಡುಂ ಡುಂಗೆ ರೆಡಿ

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಅಸಂಖ್ಯ ಯುವತಿಯರ ಹೃದಯ ಕದ್ದ ಚೋರ, ಒಂದು ಕಾಲಕ್ಕೆ ಏಷ್ಯಾದ ಮನ್ಮಥ ಎನಿಸಿಕೊಂಡಿದ್ದ ಪ್ರತಿಭಾವಂತ ನಟ ಶಾಹೀದ್ ಕಪೂರ್ ವರ್ಷಾಂತ್ಯಕ್ಕೆ ಹಸೆಮಣೆ ಏರುತ್ತಿದ್ದಾರೆ. ಈ ಮುಂಚೆ ಫಿಲ್ಮಿಬೀಟ್ ನಲ್ಲಿ ಜನವರಿ ತಿಂಗಳಲ್ಲಿ ಬರೆದ ಸುದ್ದಿಯೊಂದು ಈಗ ಪಕ್ಕಾ ಆಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಡಿಸೆಂಬರ್ ನಲ್ಲಿ ಶಾಹೀದ್ ಅವರು ಮದ್ವೆಯಾಗುವುದು ಗ್ಯಾರಂಟಿ.

ಜನವರಿ 14ರ ಮಕರ ಸಂಕ್ರಾಂತಿ ಹಬ್ಬದಂದು ಜೀವನದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದ್ದ ಶಾಹೀದ್ ಕಪೂರ್ ಅವರು ಅದೇ ದೆಲ್ಲಿ ಹುಡುಗಿ ಮೀರಾ ರಾಜ್ ಪುಟ್ ಕೈ ಹಿಡಿಯುತ್ತಿದ್ದಾರೆ. ಶಾಹೀದ್ ಕಪೂರ್ ಕೊನೆಗೂ ಮನೆ ಸಂಸಾರದ ಬಗ್ಗೆ ಗಂಭೀರವಾಗಿ ಯೋಚಿಸತೊಡಗಿರುವುದು ಕಂಡು ಅಪ್ಪ ಪಂಕಜ್ ಕಪೂರ್ (ಕರಮ್ ಚಂದ್ ಖ್ಯಾತಿ) ಅವರು ಫುಲ್ ಖುಷ್ ಆಗಿದ್ದಾರೆ.[ಕರೀನಾ ಕೈಕೊಟ್ಟ ಶಾಹೀದ್ ನಿಶ್ಚಿತಾರ್ಥ.?]

Confirm: Shahid Kapoor getting married to Delhi girl Mira Rajput

ರಾಧಾ ಸೊಯಾಮಿ ಸತ್ಸಂಗ ಬೀಯಾಸ್ ಧಾರ್ಮಿಕ ಶಿಬಿರದಲ್ಲಿ ಮೀರಾರನ್ನು ಮೊದಲ ಬಾರಿಗೆ ಶಾಹೀದ್ ಭೇಟಿ ಮಾಡಿದ್ದಂತೆ. ವಸಂತ್ ವ್ಯಾಲಿ ಸ್ಕೂಲ್ ನಲ್ಲಿ ಇಂಗ್ಲೀಷ್(ಹಾನರ್ಸ್) ಮೂರನೇ ವರ್ಷ ಓದುತ್ತಿರುವ ಮೀರಾ ಅವರನ್ನು ನೋಡಿದ ಮೊದಲ ಕ್ಷಣವೇ ಶಾಹೀದ್ ಮನಸೋತನಂತೆ.

ಇತ್ತೀಚೆಗೆ ಪಂಕಜ್ ಕಪೂರ್ ಅವರ ಪರಿವಾರ ಮೀರಾ ಅವರ ಛತರ್ ಪುರ್ ಮನೆಗೆ ಭೇಟಿ ನೀಡಿ ಮದುವೆ ಮಾತುಕತೆ ಆರಂಭಿಸಿದೆ. ಶಾಹೀದ್ ಇಚ್ಛೆಯಂತೆ ಸಿನಿಮಾ ಜಗತ್ತಿಗೆ ಸಂಬಂಧ ಪಡದ ಯುವತಿಯನ್ನು ಕೈ ಹಿಡಿಯುತ್ತಿದ್ದಾರೆ. ಸಿನಿಮಾ ಜಗತ್ತಿನಲ್ಲಿ ಹಲವು ಏಳು ಬೀಳುಗಳನ್ನು ಕಂಡಿರುವ ಶಾಹೀದ್ ಇತ್ತೀಚೆಗೆ ಹೈದರ್ ಚಿತ್ರದ ಮೂಲಕ ಮತ್ತೊಮ್ಮೆ ಯಶಸ್ಸಿನ ಹಾದಿ ಹಿಡಿದಿದ್ದಾರೆ.

ಕರೀನಾ ಕಪೂರ್ ಜೊತೆ ಬಹುಕಾಲದ ಪ್ರೇಮಗಾಥೆ ಮುರಿದು ಬಿದ್ದ ಮೇಲೆ ಶಾಹೀದ್ ಹೆಸರು ಪ್ರಿಯಾಂಕಾ ಛೋಪ್ರಾ, ವಿದ್ಯಾಬಾಲನ್ ಹಾಗೂ ಸೋನಾಕ್ಷಿ ಸಿನ್ಹಾ ಜೊತೆ ಸೇರಿಸಿ ಗಾಸಿಪ್ ಕಾಲಂನಲ್ಲಿ ಒಂದಷ್ಟು ದಿನ ಓಡಾಡತೊಡಗಿತ್ತು. ಈಗ ಎಲ್ಲಕ್ಕೂ ಫುಲ್ ಸ್ಟಾಪ್ ಇಟ್ಟಿರುವ ಶಾಹೀದ್ ವಸಂತ ಮಾಸದ ಆರಂಭದಲ್ಲೇ ಹೊಸ ಜೀವನದ ಬಗ್ಗೆ ಯೋಚಿಸುತ್ತಿದ್ದಾರೆ.

English summary
Actor Shahid Kapoor getting married to Delhi girl Mira Rajput in december, 2015. Shahid reportedly engaged to Mira on Makar Sankranti day (Jan.14)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada