»   » ಶಾರುಖ್-ಗೌರಿಗೆ ಬಿಸಿತುಪ್ಪವಾಗಿರುವ ಪ್ರಿಯಾಂಕಾ

ಶಾರುಖ್-ಗೌರಿಗೆ ಬಿಸಿತುಪ್ಪವಾಗಿರುವ ಪ್ರಿಯಾಂಕಾ

Posted By:
Subscribe to Filmibeat Kannada

ಶಾರುಖ್ ಖಾನ್ ಹಾಗೂ ಪ್ರಿಯಾಂಕಾ ಚೋಪ್ರಾ ಜೋಡಿಗೆ ಅದೇನಾಗಿದೆಯೋ. ಇತ್ತೀಚಿಗೆ ಶಾರುಖ್ ಖಾನ್ ಗ್ರಹಚಾರವಂತೂ ಸಂಪೂರ್ಣವಾಗಿ ಕೆಟ್ಟಿದೆ ಎನ್ನಬಹುದು. ಜೊತೆಗೆ ಪ್ರಿಯಾಂಕಾ ಜೊತೆ ಸೇರಿಕೊಂಡ ಶಾರುಖ್ ಹೆಸರು ಈಗ ಬಾಲಿವುಡ್ ಮಂದಿ ಸುದ್ದಿಯ ಬಿಸಿಬಿಸಿ ವಸ್ತು.

ಶಾರುಖ್ ಹಾಗೂ ಪ್ರಿಯಾಂಕಾ ಇತ್ತೀಚಿಗೆ ಅನಗತ್ಯಕ್ಕಿಂತ ಹೆಚ್ಚಾಗಿ ಸುದ್ದಿಯಾಗುತ್ತಿದ್ದಾರೆ. ತೀರಾ ಇತ್ತೀಚಿಗೆ ಕರಣ್ ಜೋಹರ್ ಜೊತೆ ಕಾಫೀ ಕಾರ್ಯಕ್ರಮ ನಿಮಗೂ ನೆನಪಿರಬಹುದು. ಆಗ ಎಲ್ಲರೆದುರು ಶಾರುಖ್ ಹಾಗೂ ಪ್ರಿಯಾಂಕಾ ನೀಡಿರುವ ಶೋ ಯಾರಿಗೂ ಇಷ್ಟವಾಗಿರಲಿಲ್ಲ. ಶಾರುಖ್ ಎಲ್ಲೇ ಹೊದರೂ ಅವರನ್ನು ಈ ಪಿಗ್ಗಿ ಹಿಂಬಾಲಿಸುತ್ತಿದ್ದರು.

ಅದು ಐಪಿಎಲ್ ಮ್ಯಾಚೇ ಇರಲಿ ಅಥವಾ KKR ಸಮಾರಂಭವೇ ಇರಲಿ, ಶಾರುಖ್ ಮತ್ತು ಪ್ರಿಯಾಂಕಾ 'ಜೊತೆಯಾಗಿ ಹಿತವಾಗಿ' ನಡೆಯುತ್ತಿದ್ದರು. ಅವರಿಬ್ಬರೂ ತಮ್ಮ ಹಿತಕ್ಕೆ ನಡೆಯುತ್ತಿದ್ದರೆ ಇತ್ತ ಶಾರುಖ್ ಪತ್ನಿ ಗೌರಿ ಮನಸ್ಸಿನಲ್ಲಿ ಬರಬಾರದ ಯೋಚನೆಗಳು ಬರುತ್ತಿದ್ದವು. ತಮ್ಮ ಜೊತೆ ನೆನಪಾಗಿ ಗೌರಿ ಖಾನ್ ಕಣ್ಣು ಮಂಜಾಗುತ್ತಿದ್ದವು.

ಗೌರಿ ಖಾನ್ ಹಾಗೂ ಶಾರುಖ್ ಮಧ್ಯೆ ಪ್ರಿಯಾಂಕಾ ವಿಷಯವಾಗಿ ಸಾಕಷ್ಟು ಜಗಳಗಳು, ಮನಸ್ತಾಪಗಳು ನಡೆದಿವೆ ಎನ್ನಲಾಗುತ್ತಿದೆ. ಆಗೆಲ್ಲಾ ಗೌರಿ ಖಾನ್ ಮಿತ್ರರು, ಬಾಲಿವುಡ್ ತಾರಾಪತ್ನಿಯರು ಗೌರಿ ಖಾನ್ ಪರವಾಗಿದ್ದು ಪ್ರಿಯಾಂಕಾರಿಗೆ ಸಿಕ್ಕಸಿಕ್ಕಲ್ಲೆಲ್ಲ ಬಿಸಿ ಮುಟ್ಟಿಸುತ್ತಿದ್ದರು. ಆದರೂ ಶಾರುಖ್-ಪ್ರಿಯಾಂಕಾ ಜೋಡಿ ಬೇರಾಗಲೂ ಇಲ್ಲ, ಒಟ್ಟಿಗೆ ಕಾಣಿಸುವುದನ್ನು ಕಡಿಮೆ ಮಾಡಲೂ ಇಲ್ಲ.

ಕರಣ್ ಜೋಹರ್ 40 ನೇ ವರ್ಷದ ಹುಟ್ಟುಹಬ್ಬದಲ್ಲಿ ಪ್ರಿಯಾಂಕಾ ಬರಲಿಕ್ಕಿಲ್ಲವೆಂದೇ ಎಲ್ಲರೂ ಭಾವಿಸಿದ್ದರು. ಆದರೆ ಪ್ರಿಯಾಂಕಾ ಅಲ್ಲಿ ಪ್ರತ್ಯಕ್ಷವಾಗಿದ್ದರು. ಅದಕ್ಕೆ ಕಾರಣ, ಬರ್ತ್ ಡೇ ಬಾಯ್ ಕರಣ್, ಪ್ರಿಯಾಂಕಾಗೆ 'ಆಮಂತ್ರಣ ಪತ್ರಿಕೆ' ಕಳುಹಿಸಿಯೇ ಕರೆದಿದ್ದರು. ಹೀಗಾಗಿ ಸಹಜವಾಗಿ ಪ್ರಿಯಾಂಕಾ ಖುಷಿಖುಷಿಯಾಗೇ ಬಂದಿದ್ದರು. ಆದರೆ ಗೌರಿ ಖಾನ್ ಕತೆ?

ಆಶ್ಚರ್ಯವೆಂದರೆ, ಗೌರಿ ಖಾನ್ ಅಪ್ಪಣೆ ಪಡೆದೇ ಕರಣ್ ಜೋಹರ್ ಪ್ರಿಯಾಂಕಾರನ್ನು ಕರೆದಿದ್ದರು. ಜೊತೆಗೆ ಫರ್ಹಾನ್ ಅಖ್ತರ್ ಪ್ರಿಯಾಂಕರನ್ನು ಕರೆಯಲು ಕರಣ್ ಜೋಹರ್ ಅವರಿಗೆ ತಾಕೀತು ಮಾಡಿದ್ದರು. ಹೀಗಾಗಿ, ಪ್ರಿಯಾಂಕಾ ಹೆಸರನ್ನು ಡ್ರಾಪ್ ಮಾಡಿದ್ದ ಕರಣ್, ಪ್ರಿಯಾಗೆ ಇನ್ವಿಟೇಷನ್ ನೀಡಿದ್ದರು.

ಆದರೆ, ಶಾರುಖ್ ಹಾಗೂ ಪ್ರಿಯಾಂಕಾ ಇಬ್ಬರಿಗೂ ಗೌರಿ ಖಾನ್ ಬಂದ ಕೆಲಸ ಮುಗಿಸಿಕೊಂಡು ತೆಪ್ಪಗೆ ಹೊರಡಲು ಸೂಚಿಸಿದ್ದರು ಎನ್ನಲಾಗಿದೆ. ಹಾಗಾಗಿ, ಕರಣ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಶಾರುಖ್-ಪ್ರಿಯಾಂಕಾ ಜೋಡಿ ಸಭ್ಯತೆಯ ಎಲ್ಲೆ ಮೀರದೇ ಗೌರಿ ಖಾನ್ ಗೆ ಆಗುಬಹುದಾಗಿದ್ದ ಮುಜುಗರ ತಪ್ಪಿಸಿದ್ದಾರೆ.

ಇಷ್ಟಾದ ಮೇಲೂ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುವುದನ್ನು ನಿಲ್ಲಿಸಿಲ್ಲ. ಮೊನ್ನೆ ಮೊನ್ನೆ ಐಪಿಎಲ್ ಗೆದ್ದ ಶಾರುಖ್ ತಂಡಕ್ಕೆ ಪ್ರಿಯಾಂಕಾ ""Congrats team KKR sooo well deserved!! Played like champions! Super parade in Kolkata comin up! Congrats @iamsrk (sic)." ಎಂದು ಟ್ವೀಟ್ ಮಾಡಿದ್ದರು.

ಇದೆಲ್ಲಾ ನೋಡಿದರೆ ಬಹುಶಃ ಶಾರುಖ್ ಹಾಗೂ ಪ್ರಿಯಾಂಕಾ ಬೆಸ್ಟ್ ಫ್ರೆಂಡ್ಸ್ ಇರಬಹುದು. ಅಥವಾ 'ಯಾರೇನೇ ಅಂದರೂ, ನೀ ನ್ನ ಕೊಂದರೂ...ನಾನು ಶಾರುಖ್ ಬಿಡುವವಳಲ್ಲ...' ಎಂದು ಪ್ರಿಯಾಂಕಾ ಗೌರಿ ಖಾನ್ ಮುಂದೆ ಹಾಡಲು ರೆಡಿಯಾಗಿರಬೇಕು. ಒಟ್ಟಿನಲ್ಲಿ ಈಗಾಗಲೇ ಕೆಟ್ಟಿರುವ ಶಾರುಖ್ ಗ್ರಹಚಾರಕ್ಕೆ ಪ್ರಿಯಾಂಕಾ ಸಂಬಂಧ ಬಿಸಿ ತುಪ್ಪವಾಗಿರುವುದಂತೂ ಸತ್ಯ. (ಏಜೆನ್ಸೀಸ್)

English summary
Priyanka and Shahrukh Khan was in news recently for certainly not the right reasons. Their alleged affair is the hottest topic of discussion in Bollywood.
Please Wait while comments are loading...