»   » ಸಿನಿಮಾ ತಾರೆಗಳ ಐಶಾರಾಮಿ ಬಂಗಲೆ ಚಿತ್ರಗಳು

ಸಿನಿಮಾ ತಾರೆಗಳ ಐಶಾರಾಮಿ ಬಂಗಲೆ ಚಿತ್ರಗಳು

By: ರವಿಕಿಶೋರ್
Subscribe to Filmibeat Kannada

ಕೋಟಿ ಕೋಟಿ ಸಂಭಾವನೆ ಎಣಿಸುವ ಸಿನಿಮಾ ತಾರೆಗಳ ಐಶಾರಾಮಿ ಮನೆಗಳನ್ನು, ಬಂಗಲೆಗಳನ್ನು ಕಣ್ತುಂಬಿಕೊಳ್ಳಬೇಕು ಎಂದು ಅವರ ಅಭಿಮಾನಿಗಳು ತುಡಿಯುತ್ತಿದ್ದಾರೆ. ಸಿನಿಮಾ ತಾರೆಗಳ ಮನೆ ಎಂದರೆ ಸಾಮಾನ್ಯ ಮಾತೆ. ನೋಡಿದವರ ಎದೆ ಧಸಕ್ ಎನ್ನದೆ ಇರುತ್ತದೆಯೇ. ಅಬ್ಬಬ್ಬಾಬ್ಬಾ ಎಂದು ಉದ್ಗಾರ ತೆಗೆಯುವವರೇ ಹೆಚ್ಚು. ಇಲ್ಲಿವೆ ನೋಡಿ ಕೆಲವು ಬಾಲಿವುಡ್ ತಾರೆಗಳ ಐಶಾರಾಮಿ ಬಂಗಲೆಗಳು.

ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಸಲ್ಮಾನ್ ಖಾನ್, ಐಶ್ವರ್ಯಾ ರೈ ಬಲಗೈಯಲ್ಲಿ ತೆಗೆದುಕೊಂಡ ಸಂಭಾವನೆ ಎರಡೂ ಕೈಗಳಲ್ಲಿ ಈ ಮನೆ ನಿರ್ಮಿಸುವುದಕ್ಕೇ ಖರ್ಚು ಮಾಡಿದ್ದಾರೆ ಅನ್ನಿಸುತ್ತದೆ. ಅಮಿತಾಬ್ ಅವರಿಗೆ ಮುಂಬೈನಲ್ಲಿ ಮೂರು ಬಂಗಲೆಗಳಿವೆ. ಜಲ್ಸಾ, ಪ್ರತೀಕ್ಷಾ ಹಾಗೂ ಜನಕ್. ಇವು ಮೂರು ಬಂಗಲೆಗಳೂ ಒಂದಕ್ಕೊಂದು ಸಮೀಪವಾಗಿದ್ದು ಕಾಲ್ನಡಿಗೆಯಲ್ಲೇ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ತಲುಪಬಹುದು.

ಅಮಿತಾಬ್ ಅವರ ಜಲ್ಸಾ ಬಂಗಲೆ

ಮುಂಬೈನ ಪ್ರಮುಖ ಪ್ರದೇಶದಲ್ಲಿ ಈ ಬಂಗಲೆ ತಲೆ ಎತ್ತಿದೆ. ಅಮಿತಾಬ್ ಅವರ ಪತ್ನಿ ಜಯಾ ಬಚ್ಚನ್, ಪುತ್ರ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯಾ ರೈ ಹಾಗೂ ಮೊಮ್ಮಗಳು ಆರಾಧ್ಯಾ ಈ ಬಂಗಲೆಯಲ್ಲೇ ವಾಸವಾಗಿರುವುದು.

ಶಾರುಖ್ ಖಾನ್ ಆರು ಅಂತಸ್ತಿನ ಮನ್ನತ್

ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಶಾರುಖ್ ಖಾನ್ ಐಶಾರಾಮಿ ಬಂಗಲೆ ಮನ್ನತ್ ಇದೆ. ಆರು ಅಂತಸ್ತಿನ ಬಂಗಲೆ ಇದು. ಲಿವಿಂಗ್ ರೂಮ್, ಗೆಸ್ಟ್ ಹೌಸ್, ಕಛೇರಿ, ಗ್ರಂಥಾಲಯ, ಮನರಂಜನಾ ಕೊಠಡಿ, ಬೇಸ್ ಮೆಂಟ್ ಕಾರ್ ಪಾರ್ಕಿಂಗ್...ಹೀಗೆ ಪ್ರತ್ಯೇಕ ಕೊಠಡಿಗಳಿವೆ.

ಸಲ್ಮಾನ್ ಖಾನ್ ಗ್ಯಾಲಕ್ಸಿ ಅಪಾರ್ಟ್ ಮೆಂಟ್

ಶಾರುಖ್ ಅವರ ಮನೆಯಿಂದ ಕೂಗಳತೆ ದೂರದಲ್ಲೇ ಇದೆ ಸಲ್ಮಾನ್ ಖಾನ್ ಗ್ಯಾಲಾಕ್ಸಿ. ತಮ್ಮ ಬಾಲ್ಯ, ಯೌವನದ ದಿನಗಳನ್ನು ಸಲ್ಲು ಇಲ್ಲೇ ಕಳೆದದ್ದು. ಈಗ ಇದಕ್ಕೆ ಸಮೀಪದಲ್ಲೇ ಇರುವ ಮತ್ತೊಂದು ಬಂಗಲೆಯನ್ನು ಸಲ್ಲು ರು.32 ಕೋಟಿಗೆ ಖರೀದಿಸಿದ್ದಾರೆ. ಅದೋ ಆಕಾಶದೆತ್ತರದ 23 ಅಂತಸ್ತಿನ ಬಂಗಲೆ.

ಸೈಫ್ ಆಲಿ ಖಾನ್ ಫಾರ್ಚ್ಯೂನ್ ಹೈಟ್ಸ್

ಸೈಫ್ ಆಲಿ ಖಾನ್ ಬಂಗಲೆ ಪಶ್ಚಿಮ ಮುಂಬೈನ ಬಾಂದ್ರಾ ಪ್ರದೇಶದಲ್ಲಿದೆ. ಇದಕ್ಕೆ ಫಾರ್ಚ್ಯೂನ್ ಹೈಟ್ಸ್ ಎಂದು ಹೆಸರಿಟ್ಟಿದ್ದಾರೆ. ಹೆಸರಿಗೆ ತಕ್ಕಂತೆ ಇದನ್ನು ನೋಡಬೇಕಾದರೆ ತಲೆ ಎತ್ತಿಯೇ ನೋಡಬೇಕು. ಇದೇ ಬಂಗಲೆಯಲ್ಲಿ ಕರೀನಾ ಕಪೂರ್ ಅವರನ್ನು ಸೈಫ್ ವರಿಸಿದ್ದು.

ಐಶ್ವರ್ಯಾ ರೈ ಅರಮನೆ ನೋಡು ಗುರು

ಸದ್ಯಕ್ಕೆ ಐಶ್ವರ್ಯಾ ರೈ ಅವರು ತಮ್ಮ ಪತಿಯೊಂದಿಗೆ ಮಾವನ ಜಲ್ಸಾ ಬಂಗಲೆಯಲ್ಲಿದ್ದಾರೆ. ಇದು ಅವರ ಇನ್ನೊಂದು ಐಶಾರಾಮಿ ಬಂಗಲೆ. ನೋಡಲು ಎರಡು ಕಣ್ಣು ಸಾಲದು ಎಂಬಂತಿದೆ. ಅದೆಷ್ಟು ಕೋಟಿ ಖರ್ಚು ಮಾಡಿದ್ದಾರೋ ಏನೋ.

ಹೃತಿಕ್ ರೋಷನ್ ಲಕ್ಸುರಿ ಅಪಾರ್ಟ್ ಮೆಂಟ್

ಹೃತಿಕ್ ರೋಷನ್ ಲಕ್ಸುರಿ ಅಪಾರ್ಟ್ ಮೆಂಟ್ ಇದು. ಚಿತ್ರದಲ್ಲಿ ಅವರ ಒಂದು ಕೋಣೆಯನ್ನು ನೋಡಬಹುದು. ಈ ಅಪಾರ್ಟ್ ಮೆಂಟ್ ನಲ್ಲಿ ಈ ರೀತಿಯ ಅದೆಷ್ಟು ಕೊಠಡಿಗಳಿವೆಯೋ ಬಲ್ಲವರ್ಯಾರು. ಒಮ್ಮೆಮ್ಮೆ ಅವರೂ ಮರೆಯುವ ಚಾನ್ಸಸ್ ಇದೆ.

ಚಿರ ಯೌವ್ವನೆ ರೇಖಾ ಬಂಗಲೆ

ಹೊರಗಡೆಯಿಂದ ನೋಡಿದರೆ ಇದೇನಪ್ಪಾ ಇದು ಜೋಪಡಿ ಎಂದುಕೊಳ್ಳುತ್ತೀರಿ. ಆದರೆ ಒಳಗೆ ಹೋದರೆ ಹೊರಗೆ ಬರುವುದಕ್ಕೇ ಮನಸ್ಸಾಗುವುದಿಲ್ಲ. ಅಷ್ಟು ಸೊಗಸಾಗಿದೆಯಂತೆ ರೇಖಾ ಅವರ ಮನೆ.

ಶಾರುಖ್ ಖಾನ್ ದುಬೈ ಬಂಗಲೆ

ಮುಂಬೈನಲ್ಲಷ್ಟೇ ಅಲ್ಲ ದುಬೈನಲ್ಲೂ ಶಾರುಖ್ ಬಂಗಲೆ ಇದೆ. ಇದನ್ನು ನೋಡಿದರೆ ಬಂಗಲೆಯೋ ಅಥವಾ ಪಂಚತಾರಾ ಹೋಟೆಲೋ ಎಂಬ ಅನುಮಾನ ಬರುತ್ತದೆ.


ಇನ್ನು ಶಾರುಖ್ ಖಾನ್ ಅವರ ಮನ್ನತ್ ಬಂಗಲೆಯಂತೂ ಅತ್ಯದ್ಭುತವಾಗಿದೆ. ಮುಂಬೈನ ರಾಜಕೀಯ ಹಾಗೂ ಐತಿಹಾಸಿಕ ಭಾಗಗಳಷ್ಟೆ ಈ ಬಂಗಲೆ ಖ್ಯಾತವಾಗಿದೆ. ಇನ್ನು ಐಶ್ವರ್ಯಾ ರೈ ಅವರ ಬಂಗಲೆ ನೋಡಿದರೆ ಇದು ಮನೆಯೋ ಅರಮನೆಯೋ ಎಂಬ ಭಾವನೆ ಬರುತ್ತದೆ.
English summary
Bollywood stars are believed to lead kingly lives. They earn in crores, hence their houses too are expected to be larger-than-life. Bollywood actors invest their money in buying their luxury dream home. Stars like Amitabh Bachchan, Shahrukh Khan, Salman Khan and many more own a few best and most expensive apartments in Mumbai.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada