ಟಿಪ್ಪು ಸುಲ್ತಾನ್ ಪಾತ್ರದಲ್ಲಿ ಶಾರುಖ್ ಖಾನ್? ಯಾವಾಗ ಸೆಟ್ಟೇರಿತು ಈ ಸಿನಿಮಾ?
ಕೆಲವರಿಗೆ ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರ. ಇನ್ನು ಕೆಲವರಿಗೆ ಮತಾಂಧ. ಟಿಪ್ಪು ಸುಲ್ತಾನ್ ವ್ಯಕ್ತಿತ್ವದ ಬಗೆಗಿನ ಚರ್ಚೆ ಇತ್ತೀಚಿನ ದಿನಗಳಲ್ಲಿ ತಾರಕಕ್ಕೆ ಏರಿದೆ.
Recommended Video
ಟಿಪ್ಪು ಸುಲ್ತಾನ್ ಸುತ್ತಾ ಇಷ್ಟೋಂದು ವಿವಾದಗಳು, ಚರ್ಚೆಗಳು ಏರ್ಪಿಟ್ಟಿರುವ ಬೆನ್ನಲ್ಲೇ ಟಿಪ್ಪು ಸುಲ್ತಾನ್ ಕುರಿತ ಸಿನಿಮಾದ ಪೋಸ್ಟರ್ ವೈರಲ್ ಆಗಿದೆ. ಪೋಸ್ಟರ್‌ನಲ್ಲಿ ಟಿಪ್ಪು ವೇಷಧಾರಿಯಾಗಿರುವುದು ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್.
ಟಿಪ್ಪು ರೀತಿಯ ಪೋಷಾಕು ತೊಟ್ಟಿರುವ ಶಾರುಖ್ ಖಾನ್‌ನ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಟಿಪ್ಪು ಸುಲ್ತಾನ್ ಕುರಿತಾದ ಚಿತ್ರದಲ್ಲಿ ಶಾರುಖ್ ಖಾನ್ ಟಿಪ್ಪು ಸುಲ್ತಾನ್ ಪಾತ್ರ ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಬಹಿಷ್ಟಕರಿಸಲು ಅಭಿಯಾನ
ಒಂದು ವರ್ಗ ಆ ಪೋಸ್ಟರ್ ಅನ್ನು ಸ್ವಾಗತಿಸಿದ್ದು, ಟಿಪ್ಪು ಬಗ್ಗೆ ಸಿನಿಮಾ ಆಗುವುದು ಒಳ್ಳೆಯದೆನ್ನುತ್ತಿದ್ದರೆ, ಮತ್ತೊಂದು ವರ್ಗ ಸಿನಿಮಾವನ್ನು ಬಹಿಷ್ಕರಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಪ್ರಾರಂಭಿಸಿದೆ.

ಟಿಪ್ಪು ಸಿನಿಮಾದಲ್ಲಿ ಶಾರುಖ್ ನಟಿಸುತ್ತಿಲ್ಲ
ನಿಜವೆಂದರೆ ಶಾರುಖ್ ಖಾನ್ ಟಿಪ್ಪು ಸುಲ್ತಾನ್ ಕುರಿತಾದ ಚಿತ್ರವನ್ನು ಮಾಡುತ್ತಿಲ್ಲ. ಅಸಲಿಗೆ ಟಿಪ್ಪು ಸುಲ್ತಾನ್ ಬಗ್ಗೆ ಬಾಲಿವುಡ್‌ನಲ್ಲಿ ಪ್ರಸ್ತುತ ಯಾವ ಚಿತ್ರವೂ ಬರುತ್ತಿಲ್ಲ. ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಮಾಡಿರುವ ಸುಳ್ಳು ಪೋಸ್ಟರ್ ಅದು. ಟಿಪ್ಪು ಸುಲ್ತಾನ್ ಕುರಿತಾದ ಯಾವ ಸಿನಿಮಾ ಸಹ ಸೆಟ್ಟೇರಿಲ್ಲ.

ಟಿಪ್ಪು ಅವತಾರದಲ್ಲಿ ಶಾರುಖ್ ಖಾನ್
ಶಾರುಖ್ ಖಾನ್ ಟಿಪ್ಪು ಅವತಾರದಲ್ಲಿರುವ ಈ ಪೋಸ್ಟರ್ ಭಾರಿ ವೈರಲ್ ಆಗಿದ್ದು, ಸಾಕಷ್ಟು ಕೋಮುವಾದಿ ಬರಹಗಳು ಪೋಸ್ಟರ್ ಜೊತೆ ಸೇರಿಕೊಂಡಿವೆ. ಶಾರುಖ್ ಖಾನ್ ಅನ್ನೂ ಸಹ ನಿಂದಿಸಲಾಗುತ್ತಿದೆ. ಆದರೆ ಇದೊಂದು ಸುಳ್ಳು ಪೋಸ್ಟರ್ ಆಗಿದೆ.

ಶಾರುಖ್ ಖಾನ್ ಕುರಿತು ಹಲವಾರು ಸುಳ್ಳು ಸುದ್ದಿ
ಶಾರುಖ್ ಖಾನ್ ಕುರಿತು ಆಗಾಗ್ಗೆ ಹೀಗೆ ಕೆಲವು ಸುಳ್ಳು ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಶಾರುಖ್ ಖಾನ್ ಪಾಕಿಸ್ತಾನಕ್ಕೆ ಕೋಟ್ಯಂತರ ಹಣ ಕೊಟ್ಟಿದ್ದಾರೆ ಎಂಬುದು ಆ ಸುಳ್ಳು ಸುದ್ದಿಗಳಲ್ಲಿ ಒಂದು. ಈಗ ಟಿಪ್ಪು ಸುಲ್ತಾನ್ ಜೀವನಾಧರಿತ ಸಿನಿಮಾದಲ್ಲಿ ನಟಿಸುತ್ತಿದ್ದಾರೆಂಬ ಸುಳ್ಳು ಸುದ್ದಿ ಹರಡಲಾಗುತ್ತಿದೆ.


Click it and Unblock the Notifications











