»   » ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಬಯಸಿದ್ದು ಹೆಣ್ಣುಮಗು

ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಬಯಸಿದ್ದು ಹೆಣ್ಣುಮಗು

Posted By:
Subscribe to Filmibeat Kannada
ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ತನ್ನ ಎರಡು ವಾರಗಳ ಗಂಡುಮಗುವಿಗೆ ಹಾಲುಣಿಸುತ್ತಾ ತಾಯ್ತನದ ಆನಂದ ಅನುಭವಿಸುತ್ತಿದ್ದಾರೆ. ಈ ಆನಂದದಲ್ಲೇ ಅವರು ಇತ್ತೀಚೆಗೆ ತನ್ನ ಮುದ್ದಾದ ಮಗನಿಗೆ ಮುದ್ದಾಗಿ ವಿಯಾನ್ ಎಂಬ ಹೆಸರನ್ನೂ ಇಟ್ಟಿದ್ದಾರೆ.

ಈಗಿನ ಬಹಳಷ್ಟು ಮಂದಿ ದಂಪತಿಗಳು ಗಂಡುಮಗುವನ್ನು ಬಯಸುವುದು ಸಹಜ. ಗಂಡುಮಗು ಆಗಲಿಲ್ಲ ಎಂಬ ಕಾರಣಕ್ಕೆ ಹಲವಾರು ಸಂಸಾರಗಳಲ್ಲಿ ಸುನಾಮಿಗಳೇ ಎದ್ದಿವೆ. ಈ ಬಗ್ಗೆ ಅಮೀರ್ ಖಾನ್ ನಡೆಸಿಕೊಡುತ್ತಿರುವ 'ಸತ್ಯಮೇವ ಜಯತೆ' ಟಾಕ್ ಶೋನ ಪ್ರಥಮ ಸಂಚಿಕೆ ಹೆಣ್ಣುಭ್ರೂಣ ಹತ್ಯೆ ಬಗ್ಗೆ ಬೆಳಕು ಚೆಲ್ಲಿದ್ದನ್ನು ಇಲ್ಲಿ ಸ್ಮರಿಸಬಹುದು.

ಇರಲಿ ವಿಷಯ ಇದಲ್ಲ. ಶಿಲ್ಪಾ ಶೆಟ್ಟಿ ಬಯಸಿದ್ದದ್ದು ಮಾತ್ರ ಹೆಣ್ಣುಮಗು ಎಂಬ ಅಂಶ ತಡವಾಗಿ ಬೆಳಕಿಗೆ ಬಂದಿದೆ. ಒಂದು ವೇಳೆ ನನಗೆ ಹೆಣ್ಣುಮಗುವಾಗಿದ್ದಿದ್ದರೆ ಎರಡು ಪಟ್ಟು ಸಂತಸ ಹೆಚ್ಚಾಗುತ್ತಿತ್ತು. ಆದರೆ ದೇವರು ನನಗೆ ಗಂಡುಮಗುವನ್ನು ಕರುಣಿಸಿದ್ದಾನೆ ಎಂದು ಚೂರೇ ಚೂರು ಬೇಸರದಲ್ಲಿ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡುತ್ತಾ, "ವಿಯಾನ್ ಜೊತೆ ನಾನು ತುಂಬಾ ಖುಷಿಯಾಗಿದ್ದೇನೆ. ಒಂದು ವೇಳೆ ನನಗೆ ಹೆಣ್ಣುಮಗುವಾಗಿದಿದ್ದರೆ ಇನ್ನೂ ಸಂತಸವಾಗುತ್ತಿತ್ತು. ಹೆಣ್ಣುಮಕ್ಕಳ ಬಗ್ಗೆ ನನಗೆ ಅಕ್ಕರೆ ಒಂದು ಹಿಡಿ ಜಾಸ್ತಿನೇ" ಎಂದಿದ್ದಾರೆ.

ತನ್ನ ಮಗುವಿಗೆ ಹಾಲುಣಿಸುವುದು, ನ್ಯಾಪಿ ಬದಲಾಯಿಸುವುದರಲ್ಲಿ ತುಂಬಾ ಖುಷಿ ಪಡುತ್ತಿದ್ದೇನೆ. ಅಮ್ಮನಿಗೆ ವಿಯಾನ್ ಸಾಕಷ್ಟು ಪಾಠಗಳನ್ನೂ ಕಲಿಸುತ್ತಿದ್ದಾನಂತೆ. "ನಾನು ಹೇಗಿದ್ದೇನೆ?" ಎಂಬಂತೆ ಒಂದೇ ಲುಕ್‌ನಲ್ಲಿ ಕೇಳುತ್ತಾನಂತೆ. ಆ ಆನಂದ ಅನುಭವಿಸಿಯೇ ತೀರಬೇಕು ಎನ್ನುತ್ತಾರೆ ಶಿಲ್ಪಾ.

ತಾನು ಗರ್ಭಿಣಿಯಾಗಿದ್ದಾಗಲೆ ನನ್ನ ನಡಿಗೆ, ಹಾವಭಾವ ಹಾಗೂ ಹೊಟ್ಟೆಯ ಗಾತ್ರವನ್ನು ನೋಡಿವರು ನಿನಗೆ ಗಂಡುಮಗುನೇ ಆಗುವುದು ಎಂದು ಖಚಿತವಾಗಿ ಭವಿಷ್ಯ ನುಡಿದಿದ್ದರು. ಆದರೆ ನನ್ನ ಗುರೂಜಿ ಮಾತ್ರ ಯಾವುದೇ ಲಿಂಗಭೇಧವಿಲ್ಲದೆ "ಹೊಸ ಆತ್ಮವೊಂದನ್ನು ಈ ಜಗತ್ತಿಗೆ ಸ್ವಾಗತಿಸು" ಎಂದಿದ್ದರಂತೆ.

ತನ್ನ ಮಗನ ಮೊದಲ ವಿದೇಶ ಪ್ರವಾಸದ ಬಗ್ಗೆಯೂ ಶಿಲ್ಪಾ ಸುಳಿವು ನೀಡಿದ್ದಾರೆ. "ಈಗಾಗಲೆ ವಿಯಾನ್ ಅಜ್ಜ ಅಜ್ಜಿ ಲಂಡನ್‌ನಿಂದ ಆಗಮಿಸಿದ್ದಾರೆ. ಬರಲಿರುವ ಚಳಿಗಾಲಕ್ಕೆ ಕ್ರಿಸ್ಮಸ್ ಹಬ್ಬ ಆಚರಿಸಲು ಅವನು ಲಂಡನ್‌ಗೆ ಹೋಗಲಿದ್ದಾನೆ" ಎಂದಿದ್ದಾರೆ.

ತಾಯಿಯಾದ ಬಳಿಕ ದೇಹದಲ್ಲಾಗುವ ಬದಲಾವಣೆಗಳ ಬಗ್ಗೆ ಶಿಲ್ಪಾಗೆ ಆತಂಕವೇನು ಇಲ್ಲವಂತೆ. ತಾಯ್ತನವನ್ನು ಮುಕ್ತವಾಗಿ ಆನಂದಿಸಬೇಕು. ನಂತರದ ಪ್ರತಿ ಹಂತವನ್ನೂ ಅನುಭಿಸಬೇಕು. ದಪ್ಪ ಆಗುವುದು ಸಹಜ. ಅದನ್ನು ಕಂಟ್ರೋಲ್ ಮಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಆತಂಕಪಡುವುದು ಬೇಡ ಎಂದಿದ್ದಾರೆ. (ಏಜೆನ್ಸೀಸ್)

English summary
Bollywood actress Shilpa Shetty expressed he desires for a baby girl. If she is blessed with a baby girl her happiness would be doubled said the actress.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada