For Quick Alerts
  ALLOW NOTIFICATIONS  
  For Daily Alerts

  ರಾಜ್ ಕುಂದ್ರಾ ಕೇಸ್: ನಟಿ ಶಿಲ್ಪಾ ಶೆಟ್ಟಿ ಇನ್ನೂ ಸೇಫ್ ಆಗಿಲ್ಲ

  |

  ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ ಇನ್ನೂ ಸೇಫ್ ಆಗಿಲ್ಲ. ಪತಿ ರಾಜ್ ಕುಂದ್ರಾ ಅರೆಸ್ಟ್ ಆದ ಬಳಿಕ ಪ್ರಾಥಮಿಕ ತನಿಖೆ ವೇಳೆ ಶಿಲ್ಪಾ ಶೆಟ್ಟಿ ಪಾತ್ರ ಇರುವ ಬಗ್ಗೆ ಯಾವುದೇ ಸಾಕ್ಷ್ಯಗಳು ಇಲ್ಲ ಎಂದು ಮುಂಬೈ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದರು. ಈ ಮೂಲಕ ತಾತ್ಕಾಲಿಕವಾಗಿ ರಿಲೀಫ್ ಸಿಕ್ಕಿತ್ತು.

  ಆದ್ರೀಗ, ಶಿಲ್ಪಾ ಶೆಟ್ಟಿ ವಿಚಾರದಲ್ಲಿ ಈಗಲೇ ಕ್ಲೀನ್‌ಚಿಟ್ ನೀಡಲು ಸಾಧ್ಯವಿಲ್ಲ ಎಂದು ಮುಂಬೈ ಅಪರಾಧ ವಿಭಾಗದ ಪೊಲೀಸರು ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ. ಹಾಗಾಗಿ, ಶಿಲ್ಪಾ ಶೆಟ್ಟಿ ವಿಚಾರದಲ್ಲಿ ಆತಂಕ ಮುಂದುವರಿದಿದೆ.

  ದಾಳಿ ವೇಳೆ ರಾಜ್ ಕುಂದ್ರ ಜೊತೆ ಸಕತ್ ಜಗಳವಾಡಿದ್ರಂತೆ ಶಿಲ್ಪಾ ಶೆಟ್ಟಿದಾಳಿ ವೇಳೆ ರಾಜ್ ಕುಂದ್ರ ಜೊತೆ ಸಕತ್ ಜಗಳವಾಡಿದ್ರಂತೆ ಶಿಲ್ಪಾ ಶೆಟ್ಟಿ

  ''ಅಶ್ಲೀಲ ವಿಡಿಯೋ ನಿರ್ಮಾಣ ಕೇಸ್‌ಗೆ ಸಂಬಂಧಪಟ್ಟಂತೆ ಎಲ್ಲಾ ಆಯಾಮಗಳಲ್ಲಿಯೂ ತನಿಖೆ ಮುಂದುವರಿದಿದೆ. ಈಗಲೇ ಶಿಲ್ಪಾ ಶೆಟ್ಟಿಗೆ ಕ್ಲೀನ್‌ಚಿಟ್ ಕೊಡಲು ಸಾಧ್ಯವಿಲ್ಲ. ವಿಧಿವಿಜ್ಞಾನ ಲೆಕ್ಕ ಪರಿಶೋಧಕರನ್ನು ನೇಮಿಸಲಾಗಿದೆ. ಅವರ ಬ್ಯಾಂಕ್ ಖಾತೆ-ವಹಿವಾಟುಗಳನ್ನು ಪರಿಶೀಲಿಸಲಾಗುತ್ತಿದೆ'' ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

  ರಾಜ್ ಕುಂದ್ರಾ ಸಹಭಾಗಿತ್ವದ ವಯಾನ್ ಇಂಡಸ್ಟ್ರೀಸ್‌ನ (ರಾಜ್ ಕುಂದ್ರಾ ಅವರ ಕಂಪನಿ) ಇತರ ನಿರ್ದೇಶಕರನ್ನು ಅಗತ್ಯವಿದ್ದಾಗ ವಿಚಾರಣೆಗಾಗಿ ಕರೆಯಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರಲ್ಲಿ ಶಿಲ್ಪಾ ಶೆಟ್ಟಿ ಸಹ ನಿರ್ದೇಶಕರಾಗಿದ್ದಾರೆ ಎನ್ನಲಾಗಿದೆ.

  ಇನ್ನು ಈ ಪ್ರಕರಣದಲ್ಲಿ ಪ್ರದೀಪ್ ಬಕ್ಷಿ (ರಾಜ್ ಕುಂದ್ರಾರ ಸೋದರ ಮಾವ) ಅವರನ್ನು ಕೇವಲ ಮುಖವಾಗಿ ಮಾತ್ರ ಬಳಸಲಾಗಿದೆಯೆಂದು ಪೊಲೀಸರು ಶಂಕಿಸಿದ್ದಾರೆ. ಹಾಟ್‌ಶಾಟ್‌ಗಳ ಎಲ್ಲಾ ಹಂತದಲ್ಲೂ ಕುಂದ್ರಾ ಸ್ವತಃ ನೋಡಿಕೊಳ್ಳುತ್ತಿದ್ದರು. ಆತನ ಬಂಧನದ ನಂತರ, ಸಂತ್ರಸ್ತರು ಪೊಲೀಸರನ್ನು ಸಂಪರ್ಕಿಸಿ ಹೇಳಿಕೆಗಳನ್ನು ನೀಡಿದ್ದಾರೆ ಎನ್ನುವ ವಿಷಯವೂ ವರದಿಯಾಗಿದೆ.

  ಈಗಾಗಲೇ ಸಾಕ್ಷಿಯಾಗಿ ನಟ ಶೆರ್ಲಿನ್ ಚೋಪ್ರಾ ಅವರನ್ನು ಹೇಳಿಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  ಪತಿ ವಿರುದ್ಧ ರೇಗಾಡಿದ ಶಿಲ್ಪಾ ಶೆಟ್ಟಿ

  ಇನ್ನು ಪೊಲೀಸರ ಎದುರಲ್ಲೇ ಪತಿ ರಾಜ್ ಕುಂದ್ರಾ ವಿರುದ್ಧ ಶಿಲ್ಪಾ ಶೆಟ್ಟಿ ರೇಗಾಡಿದ್ದರು ಎನ್ನುವ ವಿಚಾರವೂ ಬಹಿರಂಗವಾಗಿದೆ. ''ಇಂಥ ಕೆಲಸವನ್ನು ಮಾಡುವ ಅವಶ್ಯಕತೆ ಏನಿತ್ತು, ಇದನ್ನೆಲ್ಲ ಯಾಕೆ ಮಾಡಿದ್ದು" ಎಂದು ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಎಂದು ಬಾಲಿವುಡ್‌ ಮಾಧ್ಯಮಗಳು ವರದಿ ಮಾಡಿದೆ.

  English summary
  Pornography case: Shilpa Shetty hasn't been given clean chit yet- Mumbai Crime Branch official.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X