ಸೋನು ಸೂದ್ ಗೆ ಶಿಲ್ಪಾ ಶೆಟ್ಟಿ ಮಗ ಸಲ್ಲಿಸಿದ ಗೌರವ ಅಭಿನಂದನಾರ್ಹ
ಕೊರೊನಾ ಕಾಲದ ಹೀರೋ ಸೋನು ಸೂದ್‌ಗೆ ಈಗ ದೇಶದಾದ್ಯಂತ ಅಭಿಮಾನಿಗಳು. ಸಿನಿ ಪ್ರೇಕ್ಷಕರು, ಸೋನು ಸೂದ್ ರಿಂದ ಸಹಾಯ ಪಡೆದವರು ಮಾತ್ರವಲ್ಲ ಸ್ವತಃ ಸಿನಿಮಾ ಮಂದಿಯೂ ಸೋನು ಸೂದ್ ರ ಅಭಿಮಾನಿಗಳಾಗಿದ್ದಾರೆ.
ಸೆಲೆಬ್ರಿಟಿಗಳ ಮಕ್ಕಳೇ ಸೋನು ಸೂದ್ ಅವರನ್ನು ಆದರ್ಶವಾಗಿ ತೆಗೆದುಕೊಂಡಿದ್ದಾರೆ. ಸೋನು ಸೂದ್ ಮಾಡಿರುವ ಕಾರ್ಯವೂ ಸಹ ಅಷ್ಟೇ ಉತ್ಕೃಷ್ಟವಾದುದು ಎಂಬುದರಲ್ಲಿ ಅನುಮಾನವಿಲ್ಲ.
ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪುತ್ರ ವಿಯಾನ್ ಕುಂದ್ರಾ, ಸೋನು ಸೂದ್ ಅನ್ನು ಆದರ್ಶವಾಗಿ ಪರಿಗಣಿಸಿದ್ದು, ಶಾಲೆಯಲ್ಲಿ ನೀಡಿದ ಪ್ರಾಜೆಕ್ಟ್ ಅನ್ನು ಸೋನು ಸೂದ್ ಗೆ ಸಮರ್ಪಿಸಿದ್ದಾನೆ.

ಕೊರೊನಾ ಸಮಯದಲ್ಲಿ ಸೋನು ಸೂದ್ ಹೇಗೆ ಬಡವರಿಗೆ, ಕಾರ್ಮಿಕರಿಗೆ ಸಹಾಯ ಮಾಡಿದರು ಎಂಬುದನ್ನೇ ಶಾಲೆಯ ಪ್ರಾಜೆಕ್ಟ್ ಆಗಿ ಸಲ್ಲಿಸಿದ್ದಾನೆ ವಿಯಾನ್. ಕಾರ್ಟೂನ್‌ಗಳನ್ನು ಬಳಸಿ ಸೋನು ಸೂದ್ ಮಾಡಿದ ಅತ್ಯುತ್ತಮ ಕಾರ್ಯವನ್ನು ಮರುಸೃಷ್ಟಿಸಿದ್ದಾನೆ ಪುಟ್ಟ ಪೋರ.
ಮಗನ ಪ್ರಾಜೆಕ್ಟ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಶಿಲ್ಪಾ ಶೆಟ್ಟಿ ಸೋನು ಸೂದ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.


Click it and Unblock the Notifications











